tunga Dam at Gajanur near Shivamogga ವರ್ಷದಾರಂಭದ ಜೋರು ಮಳೆಗೆ ಮೈದುಂಬಿಕೊಂಡು ಮಳೆಗಾಲದ ಸ್ವಾಗತ ಕೋರುವ ರಾಜ್ಯದ ಮೊದಲ ಡ್ಯಾಂ ಅಂದರೆ ತುಂಗಾ ಜಲಾಶಯ..ನಿರೀಕ್ಷೆಯಿಂತೆ ಈ ಡ್ಯಾಂ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ ಮೈದುಂಬಿಕೊಂಡಿದೆ. ಶೃಂಗೇರಿ, ತೀರ್ಥಹಳ್ಲಿ ಭಾಗದದಲ್ಲಿ ಆದ ಮಳೆಯಿಂದಾಗಿ ಜಲಾಶಯಕ್ಕೆ ನೀರು ಭರಪೂರವಾಗಿ ಹರಿದು ಬರುತ್ತಿದೆ. ಈ ಸಂಬಂಧ ಡ್ಯಾಂ ಗೇಟ್ ಓಪನ್ ಮಾಡುವ ಬಗ್ಗೆ ಅಧಿಕಾರಿಗಳು ಸೂಛನೆ ನೀಡಿದ್ದಾರೆ. ತುಂಗಾ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನದಿಂದ ಜೋರು ಮಳೆಯಾಗುತ್ತಿದೆ. ಒಳ ಹರಿವು ಹೆಚ್ಚಳವಾದಲ್ಲಿ ಯಾವುದೇ ಸಂದರ್ಭ ತುಂಗಾ ಜಲಾಶಯದಿಂದ ನೀರು ಹೊರಗೆ ಬಿಡಬಹುದು ಎಂದು ತುಂಗಾ ಮೇಲ್ದಂಡೆ ಯೋಜನೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತುಂಗಾ ಜಲಾಶಯದ ಕೆಳ ಭಾಗದಲ್ಲಿ ನದಿ ಪಾತ್ರದಲ್ಲಿ ದನಕರುಗಳನ್ನು ಮೇಯಲು ಬಿಡಬಾರದು, ಯಾವುದೇ ಚಟುವಟಿಕೆ ಮಾಡಬಾರದು. ನದಿ ಪಾತ್ರದಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
tunga Dam at Gajanur near Shivamogga
588.24 ಮೀಟರ್ ಎತ್ತರ ಹೊಂದಿರುವ ಈ ಜಲಾಶಯ 3.24 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಅಣೆಕಟ್ಟೆಗೆ 22 ಕ್ರಸ್ಟ್ ಗೇಟುಗಳಿದ್ದು ಸದ್ಯ ಜಲಾಶಯದ ನೀರಿನ ಮಟ್ಟ 587.81 ಮೀಟರ್ ನಷ್ಟಿದೆ.
