ಈ ಮೂವರು ಎಲ್ಲಾದರು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ

prathapa thirthahalli
Prathapa thirthahalli - content producer

Shivamogga news today ಶಿವಮೊಗ್ಗ : ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ಜನ ಕಾಣೆಯಾಗಿದ್ದು, ಮಾಹಿತಿ ನೀಡಲು ಪೊಲೀಸ್​ ಪ್ರಕಟಣೆ ತಿಳಿಸಿದೆ.

ಸಾಗರ ತಾಲೂಕು ಪಡವಗೋಡು ಗ್ರಾಮದ ನವೀನ್ ಹೆಚ್.ಕೆ. ಎಂಬ 29 ವರ್ಷದ ಯುವಕ ಸೆ.20 ರಂದು ಶಾಮಿಯಾನ ಹಾಕಲು ಹೋಗುವುದಾಗಿ ಹೇಳಿ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.5 ಅಡಿ ಎತ್ತರ ಕೋಲುಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ.

Malenadu Today

ಹೆಗ್ಗೋಡು ಗ್ರಾಮದ ರಮೇಶ್ ಶಿವಾನಂದ ಭಟ್ ಎಂಬುವವರ ಮಗ ಅಶ್ವಿನ್ ಭಟ್ ಎಂಬ 29 ವರ್ಷದ ಯುವಕ ಏ. 05 ರಂದು ಕುಟುಂಬ ವ್ಯಾಜ್ಯದ ಸಲುವಾಗಿ ಠಾಣೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.7 ಅಡಿ ಎತ್ತರ.ಕೋಲುಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾರೆ.

ಅಶ್ವಿನ್​

ಕಮಲಾಪುರ ಆವಿನಹಳ್ಳಿ ಗ್ರಾಮದ ದಾಮೋದರ ಎಂಬುವವರ ಮಗ ರವಿರಾಜ ಎಂಬ 26 ವರ್ಷದ ಯುವಕ ಮಾರ್ಚ್ 2024 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತ ಚಹರೆ 5.3 ಅಡಿ ಎತ್ತರ. ಕೋಲುಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಬಲಗೈಯಲ್ಲಿ ಶಿವರಾಜ ಹಚ್ಚೆ ಗುರುತು ಇರುತ್ತದೆ.

Malenadu Today

ಈ ಮೂರು ಜನ ಕಾಣೆಯಾದವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ದೂ.ಸಂ. 08182-261400/ 08183-226082/ 9480803361/ 9480803385 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Shivamogga news today

Share This Article