ಕೆಎಸ್ಆರ್​​ಟಿಸಿ ಬಸ್​ನಲ್ಲಿ ಟಿಕೆಟ್​ ಮಾಡಿಸಲು ವ್ಯಾನಿಟಿ ಬ್ಯಾಕ್​ ತೆಗೆದ ಮಹಿಳೆಗೆ ಕಾದಿತ್ತು ಶಾಕ್​ 

prathapa thirthahalli
Prathapa thirthahalli - content producer

Shivamogga news : ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿರುವ ಘಟನೆ ನಡೆದಿದೆ

ಅಕ್ಟೋಬರ್​ 06  ರಂದು ಮಹಿಳೆ ತಮ್ಮ ಸ್ವಂತ ಊರಾದ ಸೊರಬಾದಲ್ಲಿ  ಹಬ್ಬವಿದ್ದ ಕಾರಣ ಮಲ್ಲಿಗೇನಹಳ್ಳಿಯಿಂದ ಆಟೋದಲ್ಲಿ ಶಿವಮೊಗ್ಗಕ್ಕೆ ಬಂದು, ಬೆಳಿಗ್ಗೆ  ಬಸ್ ನಿಲ್ದಾಣದ ಬಳಿ ಇಳಿದಿದ್ದಾರೆ. ನಂತರ, ಊರಿಗೆ ಹೋಗಲು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಹೋಗಿ ಮಧ್ಯಾಹ್ನ 12:15 ಗಂಟೆಗೆ ಆನವಟ್ಟಿಗೆ ಹೋಗುವ ಸರ್ಕಾರಿ ಬಸ್ ಹತ್ತಲು ಹೋದಾಗ ಬಸ್‌ನಲ್ಲಿ ಅತಿಯಾದ ನೂಕುನುಗ್ಗಲು ಇತ್ತು.ಬಸ್ ಹತ್ತಿ ಸೀಟ್‌ನಲ್ಲಿ ಕುಳಿತು ಟಿಕೆಟ್ ಮಾಡಿಸಲು ತಮ್ಮ ವ್ಯಾನಿಟಿ ಬ್ಯಾಗ್‌ ನೋಡಿಕೊಂಡಾಗ, ಬ್ಯಾಗ್‌ನ ಜಿಪ್ ತೆಗೆದಿರುವುದು ಕಂಡುಬಂದಿದೆ. ಗಾಬರಿಗೊಂಡು ಪರಿಶೀಲಿಸಿದಾಗ, ಬ್ಯಾಗ್‌ನಲ್ಲಿದ್ದ ಪರ್ಸ್‌ ಕಳುವಾಗಿತ್ತು.

ಕಳ್ಳತನವಾದ ಪರ್ಸ್‌ನಲ್ಲಿ ಸುಮಾರು 36.34 ಗ್ರಾಂ ತೂಕದ, ಮಾಂಗಲ್ಯ ಸರ ಇದರ ಅಂದಾಜು ಮೌಲ್ಯ ರೂ. 2,29,000/-25 ಗ್ರಾಂ ತೂಕದ, ಲಕ್ಷ್ಮಿ ಪದಕ ಇರುವ ಬಂಗಾರದ ಕಾಸಿನ ಸರ, ಇದರ ಅಂದಾಜು ಮೌಲ್ಯ ರೂ. 1,00,000/  ಮತ್ತು ರೂ. 2,500/- ನಗದು ಹಣ ಇತ್ತು. ಒಟ್ಟಾರೆಯಾಗಿ ರೂ. 3,31,500 ಮೌಲ್ಯದ ಆಭರಣ ಮತ್ತು ನಗದು ಕಳ್ಳತನವಾಗಿದೆ. ಸಂಬಂಧಿಕರ ಸಲಹೆಯಂತೆ ಮನೆಯಲ್ಲಿಯೂ ಹುಡುಕಿ ನೋಡಿದ ನಂತರ, ಯಾವುದೇ ಸುಳಿವು ಸಿಗದೇ ಇದ್ದುದರಿಂದ ತಡವಾಗಿ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. 

Shivamogga news

Share This Article