ಕಾಂತಾರ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾಡಳಿತ ಹೊಂಬಾಳೆ ಚಿತ್ರತಂಡಕ್ಕೆ ನೋಟಿಸ್ ನೀಡಿದ್ದು, ಇದೀಗ ಆ ನೋಟಿಸ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದೆ.
ಹೊಸನಗರ ತಹಶೀಲ್ದಾರ್ ಕಾಂತಾರ ಚಿತ್ರದ ಚಿತ್ರೀಕರಣದ ವೇಳೆ ಮಾಣಿ ಹಿನ್ನೀರಿನ ಪ್ರದೇಶದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಲು ಚಿತ್ರತಂಡಕ್ಕೆ 3 ದಿನಗಳ ಗಡುವು ನೀಡಿದ್ದರು. ಇದೀಗ ಆ ನೋಟಿಸ್ ಗೆ ಹೊಂಬಾಳೆ ಫಿಲ್ಮ್ಸ್ ನ ಪ್ರೊಡಕ್ಷನ್ ಮ್ಯಾನೇಜರ್ ಕುಮಾರ್ ಎಸ್ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ ಆ ಪತ್ರದಲ್ಲಿ ಕೆಪಿಸಿಎಲ್, ಅರಣ್ಯ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದ ಪತ್ರ ಲಗತ್ತಿಸಿದ್ದಾರೆ.
kantara chapter 1 news ಪತ್ರದಲ್ಲಿ ಏನಿದೆ..?
ನಮ್ಮ ಚಿತ್ರದ ಚಿತ್ರೀಕರಣ ಜೂನ್ 12, 2025 ರಂದು ಪ್ರಾರಂಭವಾಗಿದ್ದು, ಅದರ ಮೊದಲು ಎಲ್ಲಾ ಸೆಟ್ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಿದವು. ಈ ಭಾಗದಲ್ಲಿ ದೃಶ್ಯಪಟದ ಹಿನ್ನಲೆಗಾಗಿ ಮಾತ್ರ ಬಳಸಲು, ಹಡಗಿನ ರೂಪದ ಸೆಟ್ನ್ನು ನಿರ್ಮಿಸಿದ್ದೆವು. ಆದರೆ ಜೂನ್ 14, 2025 ರಂದು ಸಂಜೆ 5:30 ಗಂಟೆಗೆ,ಹವಾಮಾನ ಬದಲಾವಣೆಯಿಂದಾಗಿ ಆ ಸೆಟ್ ಸ್ವಲ್ಪ ಕೆಳಗೆ ಬಿದ್ದಿತು. ಆದರೆ ಅಂದು ಆ ಸ್ಥಳದ ಸಮೀಪದಲ್ಲಿ ಯಾವುದೇ ಚಿತ್ರೀಕರಣ ನಡೆಯುತ್ತಿರಲಿಲ್ಲ ಮತ್ತು ಯಾರೊಬ್ಬರೂ ಆ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಜರಿರಲಿಲ್ಲ. ಆ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗಾಗಲಿ, ಆಸ್ತಿ ಅಥವಾ ಉಪಕರಣಗಳಿಗೆ ಆಗಲಿ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.

kantara chapter 1 news ಜೂನ್ 15, 2025 ರಂದು, ಕಾಂತಾರ ದ ಲೆಜೆಂಡ್ ಪಾರ್ಟ್ ಒನ್ ಚಲನಚಿತ್ರದ ಎಲ್ಲಾ ಕಲಾವಿದರು ಮತ್ತು ಸಿಬ್ಬಂದಿಯ ಹಾಜರಾತಿಯೊಂದಿಗೆ ಚಿತ್ರೀಕರಣವನ್ನು ಯಶಸ್ವಿಯಾಗಿ ಪುನರಾರಂಭ ಮಾಡಲಾಗಿತ್ತು. ಜಲಮೂಲದೊಳಗೆ ಚಿತ್ರೀಕರಣ ಮಾಡುವ ಉದ್ದೇಶ ನಮಗಿಲ್ಲ. ಆದರೆ ತುರ್ತು ಪರಿಸ್ಥಿತಿಗೆ ತಕ್ಕಂತೆ ನಾವು ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಡಿದ್ದೆವು ಎಂದರು.
ನಮ್ಮ ಚಲನಚಿತ್ರ ಚಟುವಟಿಕೆಗಳು ರಾಜ್ಯ ಸರ್ಕಾರದ ಅನುಮತಿ ಪ್ರಕ್ರಿಯೆಗಳಿಗೆ ಅನುಗುಣವಾಗಿ ಹಾಗೂ ಸಮರ್ಥ ರೀತಿಯಲ್ಲಿ ನಡೆಯುತ್ತಿದ್ದು, ನಾವು ಎಲ್ಲಾ ಶಾಸನಬದ್ಧ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದೇವೆ. ಎಂದು ಚಿತ್ರತಂಡ ಸ್ಪಷ್ಟೀಕರಣ ನೀಡಿದೆ.