elephant attack a man : ಆನೆ ತುಳಿತದಿಂದಾಗಿ ವ್ಯಕ್ತಿ ಸಾವು
ಭದ್ರಾವತಿ ತಾಲೂಕಿನ ಬಂಡಿಗುಡ್ಡದಲ್ಲಿ ಆನೆ ತುಳಿತದಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಬಂಡಿಗುಡ್ಡ ಗ್ರಾಮದ ಕುಮಾರ್ (50) ಮೃತ ದುರ್ದೈವಿ.
ಭದ್ರಾವತಿ ತಾಲೂಕಿನ ಬಂಡಿಗ್ರಾಮದ ಅರಣ್ಯದೊಳಗೆ ಒಂಟಿ ಸಲಗವೊಂದು ಆಗಾಗ ಸಂಚರಿಸುತ್ತಿತ್ತು ಎನ್ನಲಾಗಿದೆ. ಕುಮಾರ್ರವರು ಜೂನ್ 19 ರಂದು ಅರಣ್ಯದೊಳಗೆ ಹೋಗಿದ್ದ ವೇಳೆ ಆದೇ ಆನೆ ಕುಮಾರ್ರವರನ್ನು ತುಳಿದು ಸಾಯಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಘಟನಾ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
