cm siddaramaiah : ಬೆಳಗಾವಿಯ ಸಿ ಪಿ ಎಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಬೆಳಗಾವಿ ಎಸ್ಪಿ ಮೇಲೆ ಗರಂ ಆದ ಘಟನೆ ನಡೆಯಿತು.
cm siddaramaiah : ನಡೆದಿದ್ದೇನು
ಇಂದು ಬೆಳಗಾವಿಯ ಸಿ ಪಿ ಎಡ್ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ದ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಬೆಲೆ ಏರಿಕೆ ಕಾಶ್ಮೀರದಲ್ಲಿ ಉಗ್ರರ ದಾಳಿ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತಾಗಿ ಭಾಷಣವನ್ನು ಮಾಡುತ್ತಿದ್ದರು. ಆವೇಳೆ ಬಿಜೆಪಿಯ ಕೆಲ ಮಹಿಳಾ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಪಬ್ಲಿಕ್ ಗ್ಯಾಲರಿಗೆ ಬಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆಯನ್ನು ಕೂಗಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಒಮ್ಮೆಲೆ ಬೆಳಗಾವಿ ಎಸ್ಪಿಯ ಮೇಲೆ ಗರಂ ಆದರು. ಅಷ್ಟೇ ಅಲ್ಲದೆ ಯಾವನಯ್ಯ ಎಸ್ಪಿ, ಬಾರಯ್ಯ ಇಲ್ಲಿ, ಅವರು ಬರುವವರೆಗೂ ಏನ್ ಮಾಡ್ತಾ ಇದ್ರಿ ನೀವು ಎಂದರು.
ನಂತರ ಮಹಿಳಾ ಕಾರ್ಯಕರ್ತರ ವಿರುದ್ದ ಸಿಡಿ ಮಿಡಿ ಗೊಂಡ ಅವರು ಇಂತಹ ಒಳ್ಳೆಯ ಸಭೆಯನ್ನು ಹಾಳು ಮಾಡಲು ಯತ್ನಿಸುತ್ತಿದ್ದೀರ ಅಲ್ವ ನಿಮಗೆ ನಾಚಿಕೆ ಆಗಲ್ವ, ಇದಕ್ಕೆಲ್ಲ ನಮ್ಮ ಕಾರ್ಯಕರ್ತರು ಬಗ್ಗಲ್ಲ. ಮೊನ್ನೆ ಕಾಶ್ಮೀರದಲ್ಲಿ ಉಗ್ರರ ದಾಳಿ ಆದಾಗ ಅಲ್ಲಿ ಒಬ್ಬ ಪೊಲಿಸ್ ಆಗಲಿ ಮಿಲಟರಿ ಆಗಲಿ ಇರಲಿಲ್ಲ. ಅದಕ್ಕೆ ಕೇಂದ್ರ ಸರ್ಕಾರದ ಭದ್ರತಾ ವೈಪಲ್ಯವೇ ಕಾರಣ. ಇದರ ನಡುವೆ ನೀವು ಸಭೆಯನ್ನು ಹಾಳು ಮಾಡಲು ಯತ್ನಿಸುತ್ತಿದ್ದೀರ ಎಂದು ಕಿಡಿಕಾರಿದರು.

cm siddaramaiah :ಈ ವೇಳೆ ಮಹಿಳಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ವಾಹನದಲ್ಲಿ ಕರೆದೊಯ್ದರು. ಆಗ ಬಿಜೆಪಿ ಕಾರ್ಯಕರ್ತರನ್ನು ಬಂಧಿಸದಂತೆ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಾಹನವನ್ನು ತಡೆದರು. ಆದರೂ ಸಹ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದು ಬಿಜೆಪಿ ಮಹಿಳಾ ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು.
ಸಿದ್ದರಾಮಯ್ಯರವರು ಈ ಹಿಂದೆಯೂ ಸಹ ವಿಜಯ ನಗರದ ಡಿಸಿಯ ಮೇಲೆ ಗರಂ ಆದ ಘಟನೆ ನಡೆದಿತ್ತು. ಅಷ್ಟೇ ಅಲ್ಲದೆ ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಸಹ ಶಿವಮೊಗ್ಗದ ಎಸ್ಪಿ ಮೇಲೆ ಸಾರ್ವಜನಿಕವಾಗಿ ಗರಂ ಅಗಿದ್ದರು.
ಸಿಎಂ ಕಾರ್ಯಕ್ರಮವಿದ್ದಾಗ ಭದ್ರತಾ ತಪಾಸಣೆಯ ಹೊಣೆ ಪೊಲೀಸರಿಗೆ ಇರುತ್ತದೆ. ಕಾರ್ಯಕ್ರಮಕ್ಕೆ ತೊಡಕಾಗದಂತೆ ಮುನ್ನೆಚ್ಚರಿಕೆ ವಹಿಸಲು ಗುಪ್ತಚರ ಇಲಾಖೆ ಇರುತ್ತದೆ. ಇಷ್ಟರ ನಡುವೆಯೂ ಬಿಜೆಪಿ ಮಹಿಳೆಯರು ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿರುವುದು ಅಚ್ಚರಿ ಮೂಡಿಸಿದೆ.