arecanut price ಮಲೆನಾಡಿಗರ ಜೀವನಾಡಿ ಆಗಿರುವ ಅಡಿಕೆಗೆ ಈಗ ಬಂಗಾರದ ಬೆಲೆ ಬಂದಿದೆ. ಕಳೆದ ವರ್ಷ 45 ರಿಂದ 50 ಸಾವಿರ ಆಸು ಪಾಸಿನಲ್ಲಿದ್ದ ರಾಶಿ ಅಡಿಕೆ ಈಗ 60 ಸಾವಿರದ ಗಡಿ ದಾಟಿದ್ದು, 70ರಿಂದ 75 ಸಾವಿರದ ಆಸುಪಾಸಿನಲ್ಲಿದ್ದ ಹಸ ಅಡಿಕೆ ಒಂದು ಲಕ್ಷದತ್ತ ದಾಪುಗಾಲಿಟ್ಟಿದೆ. ಅಡಿಕೆ ರೇಟ್ ಆಗಬಹುದೆಂದು ಪಡಸಾಲೆಯಲ್ಲಿ ಕೂಡಿಟ್ಟ ಶ್ರೀಮಂತ ರೈತರ ಮೊಗದಲ್ಲಿ ನಗುವನ್ನು ಮೂಡಿಸಿದರೆ. ಇತ್ತ ಅನಿವಾರ್ಯ ಕಾರಣದಿಂದ ಕಡಿಮೆ ರೇಟ್ಗೆ ಅಡಿಕೆಯನ್ನು ಮಾರಿದ ರೈತರಿಗೆ ಬೇಸರ ಮೂಡಿಸಿದೆ.
arecanut price : ಅಡಿಕೆ ದರ ಹೆಚ್ಚಾಗುತ್ತಿದೆಯೇ?
arecanut price: ಕಳೆದ ಬಾರಿ ಎಲೆಚುಕ್ಕಿ ರೋಗ ಬೂದು ಕೊಳೆ ಹಾಗೆಯೇ ವಿಪರೀತ ಹಣ್ಣು ಅಡಿಕೆಯಿಂದ ಎಲ್ಲಾ ತೊಟಗಳಲ್ಲಿಯೂ ಸಹ ಫಸಲು ಸಾಕಷ್ಟು ಕಡಿಮೆ ಬಂದಿತ್ತು. ಇದರ ನಡುವೆ ಅಡಿಕೆ ರೇಟು ಹೆಚ್ಚೂ ಆಗದೆ ಕಡಿಮೆಯೂ ಅಗದೆ ಸ್ಥಿರವಾಗಿತ್ತು. ಆದರೆ ಗೊರಬಲು ಅಡಿಕೆಯ ರೇಟ್ ಮಾತ್ರ 35 ಸಾವಿರದಿಂದ 20 ಸಾವಿರಕ್ಕೆ ಇಳಿದಿತ್ತು. ಗೊರಬಲು ಅಡಿಕೆಯ ಈ ರೇಟು ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಬಹಳಾ ಕಡಿಮೆ ಎನ್ನಬಹುದು, ಇದರ ನಡುವೆ ಕಳೆದ ಬಾರಿ ಮಳೆ ಹೆಚ್ಚಾಗಿ ಕೊನೆ ತೆಗೆಯುವುದು ತಡವಾಗಿ ರೈತರಿಗೆ ಸಿಕ್ಕಿದ್ದು ಅರ್ಧಕ್ಕೆ ಅರ್ಧಭಾಗ ಗೊರಬಲು ಅಡಿಕೆ. ಈ ಹಿನ್ನಲೆ ಈ ಎಲ್ಲಾ ಏರಿಳಿತಗಳಿಂದ ತೋಟದ ಔಷದಿ ಸೇರಿದಂತೆ ಇನ್ನಿತರೆ ತೋಟದ ನಿರ್ವಹಣೆಗೆ ವೆಚ್ಚ ಮಾಡಿದ ರೈತರು ಅಡಿಕೆಯ ರೇಟ್ ಯಾವಾಗ ಹೆಚ್ಚುತ್ತದೆ ಎಂದು ಕಾದು ಕುಳಿತ್ತಿದ್ದರು. ಇದೀಗ ಅಡಿಕೆ ರೇಟ್ ಹೆಚ್ಚಾಗಿದ್ದು, ಬೇಸರದಲ್ಲಿದ್ದ ರೈತರಿಗೆ ಸ್ವಲ್ಪ ಮಟ್ಟಿನ ಸಂತಸವನ್ನು ತಂದಿದೆ.
arecanut price: ಬೆಲೆ ಹೆಚ್ಚಾಗಿದ್ದು ಯಾರಿಗೆ ಲಾಭ
ಒಂದು ರೀತಿಯಲ್ಲಿ ಹೇಳುವುದಾದರೆ ಈ ಬೆಲೆ ಹೆಚ್ಚಳದಿಂದ ರೇಟ್ ಹೆಚ್ಚಾಗಬಹುದು ಎಂದು ಅಡಿಕೆಯನ್ನು ಕೂಡಿಟ್ಟ ರೈತರಿಗೆ ಹಾಗೂ ಮಂಡಿ ಮಾಲಿಕರಿಗೆ ಬಹಳಾ ಅನುಕೂಲವಾಗುತ್ತದೆ. ಇನ್ನಿತರೆ ಸಾಮಾನ್ಯ ರೈತರು ಹಾಗು ಚೇಣಿದಾರರಿಗೆ ಇದರಿಂದ ಹೆಚ್ಚಾಗಿ ಲಾಭವಾಗುವುದಿಲ್ಲ ಎಂದು ಹೇಳಬಹುದು. ಅದಕ್ಕೆ ಕಾರಣ ಚೇಣಿದಾರರು ಸೇರಿದಂತೆ ಸಾಮಾನ್ಯ ರೈತರು ಮಂಡಿ ಸೇರಿದಂತೆ ಇನ್ನಿತರೆ ಕಡೆಗಳಿಂದ ಅನಿವಾರ್ಯ ಕಾರಣಕ್ಕಾಗಿ ಇಂತಿಷ್ಟು ಬಡ್ಡಿಗೆ ಸಾಲವನ್ನು ಪಡೆದಿರುತ್ತಾರೆ. ಫೆಬ್ರವರಿ ಹಾಗು ಮಾರ್ಚ್ ತಿಂಗಳಲ್ಲಿ ಅಡಿಕೆ ಕೊಯ್ಲು ಮುಗಿದ ತಕ್ಷಣ ಅವರು ಆಹಣವನ್ನು ವಾಪಸ್ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಬಡ್ಡಿಯ ಪ್ರಮಾಣ ಹೆಚ್ಚಾಗುತ್ತದೆ.ಆದ್ದರಿಂದ ಬಡ್ಡಿಕಟ್ಟಲು ಸಾಧ್ಯವಿಲ್ಲ ಎಂದು ತಮ್ಮಲ್ಲಿರುವ ಪೂರ್ಣಪ್ರಮಾಣದ ಅಡಿಕೆಯನ್ನು ಮಂಡಿಗೆ ಹಾಕಿ ಹಣವನ್ನು ತೆಗೆದುಕೊಳ್ಳುತ್ತಾರೆ. ಕೆಲ ಚೇಣಿದಾರರು ತಾವು ತೆಗೆದುಕೊಂಡ ಸಾಲವನ್ನು ತೀರಿಸಲಾಗದೆ ತಮ್ಮ ಜಮೀನನ್ನು ಮಾರಿ ಸಾಲ ತೀರಿಸಿದ ನಿದರ್ಶಗಳು ಸಹ ಇದೆ. ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ರೈತರು ಮಂಡಿಗೆ ಅಡಿಕೆಯನ್ನು ಬಿಡುತ್ತಾರೆ. ಆ ಸಮಯದಲ್ಲಿ ಅಡಿಕೆ ರೇಟ್ನ್ನು ಕಡಿಮೆ ಮಾಡುವುದು ಮಾರ್ಕೆಟಿಂಗ್ ತಂತ್ರವೆಂದು ಹೇಳಬಹುದು. ಈ ತಂತ್ರವನ್ನು ಅರಿತ ಕೆಲ ರೈತರು ಅಡಿಕೆಯನ್ನು ಕೂಡಿಟ್ಟು ನಂತರ ಉತ್ತಮ ಬೆಲೆಗೆ ಮಾರಾಟ ಮಾಡುತ್ತಾರೆ.

arecanut price: ಅಡಿಕೆ ರೇಟ್ ಹೆಚ್ಚಾಗಲು ಕಾರಣವೇನು
ಕಳೆದ ಕಳೆದ ವರ್ಷ ಹಸ ಅಡಿಕೆಯ ಬೆಲೆ 84 ಸಾವಿರದ ವರೆಗೆ ತಲುಪಿತ್ತು. ಅದು ಇದುವರೆಗಿನ ಅಡಿಕೆಯ ಗರಿಷ್ಟ ಬೆಲೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಬಾರಿ ಹಸ ಅಡಿಕೆಯ ಬೆಲೆ 96 ಸಾವಿರದ ವರೆಗೆ ತಲುಪಿದೆ. ಇನ್ನೂ ಕೆಲವೇ ದಿನಗಳಲ್ಲಿ ಲಕ್ಷದವರೆಗೆ ಹೋದರೂ ಆಶ್ಚರ್ಯವೇನಿಲ್ಲ. ಇದರ ನಡುವೆ ಈ ಅಡಿಕೆಯ ರೇಟ್ ಹೆಚ್ಚಾಗಲು ಕಾರಣವೇನು ಎಂಬ ಪ್ರಶ್ನೆಗಳು ಎಲ್ಲರಲ್ಲಿ ಮೂಡುವುದು ಸಹಜ ಆದರೆ ಅಡಿಕೆಗೆ ಬೆಲೆ ಹೆಚ್ಚಾಗಲು ಇದೇ ಪ್ರಮುಖ ಕಾರಣವೆಂದು ಹೇಳಲು ಸಾಧ್ಯವಾಗುವುದಿಲ್ಲ.ಆದರೆ ಕೇಂದ್ರ ಸರ್ಕಾರ ಅಡಿಕೆ ಮೇಲೆ ಆಮದು ಸುಂಕ ಹೆಚ್ಚಿಸಿದ್ದು ಇದಕ್ಕೆ ಕಾರಣವೆಂದು ಹೇಳಬಹುದು. ಅದು ಹೇಗೆಂದರೆ. ಈ ಹಿಂದೆ ಅನೇಕ ಉದ್ಯಮಿಗಳು ಬೇರೆ ದೇಶದಲ್ಲಿ ಅಡಿಕೆಗೆ ರೇಟ್ ಕಡಿಮೆ ಎಂಬ ಕಾರಣದಿಂದ ವಿದೇಶದಿಂದ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದ್ದರು. ಆದರೆ ಕೇಂದ್ರ ಸರ್ಕಾರದ ಸುಂಕ ಹೆಚ್ಚಳದಿಂದಾಗಿ ಸ್ಥಳಿಯರಿಂದ ಅಡಿಕೆಯನ್ನು ಕೊಂಡುಳ್ಳುತ್ತಿದ್ದಾರೆ. ಮತ್ತೊಂದೆಡೆ ಸುಂಕ ಹೆಚ್ಚಳದಿಂದ ಶ್ರೀಲಂಕ ಮಯಾನ್ಮಾರ್ ನೇಪಾಳ ಸೇರಿದಂತೆ ಇನ್ನಿತರೇ ಕಡೆಗಳಿಂದ ಬರುವ ಅಡಿಕೆಗಳು ಸಂಪೂರ್ಣ ಪ್ರಮಾಣದಲ್ಲಿ ನಿಂತರೆ ಅಡಿಕೆಯ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿದೆ.
ಆದರೆ ಇನ್ನೊಂದು ರೀತಿಯಲ್ಲಿ ಹಸದ ಬೆಲೆ ಹೆಚ್ಚಾಗಲು ಕಾರಣವೇನು ಎಂದು ಹೇಳುವುದಾದರೆ. ಕಳೆದ ಐದಾರು ವರ್ಷಗಳ ಹಿಂದೆ ಸಾಮಾನ್ಯವಾಗಿ ರೈತರ ಮನೆಗಳಲ್ಲಿ ಅಡಿಕೆ ಸುಲಿಯುವ ಯಂತ್ರಗಳು ಕಡಿಮೆ ಇದ್ದವು, ಇದರಿಂದಾಗಿ ಹೆಚ್ಚನ ರೈತರು ಅಡಿಕೆಯನ್ನು ಕೈಗಳ ಮೂಲಕ ಸುಲಿಸುತ್ತಿದ್ದರು, ಆಸಂದರ್ಭದಲ್ಲಿ ಹಸ ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿತ್ತು. ಆದರೆ ಈಗ ಹೆಚ್ಚಿನ ರೈತರ ಮನೆಯಲ್ಲಿ ಅಡಿಕೆಯನ್ನು ಯಂತ್ರದ ಮೂಲಕ ಸುಲಿಸುವುದರಿಂದ ಅದನ್ನು ಹೆಚ್ಚಾಗಿ ಕಟ್ ಮಾಡುವುದಿಲ್ಲ ಅದ್ದರಿಂದ ಈಗ ಅತೀ ಕಡಿಮೆ ಪ್ರಮಾಣದಲ್ಲಿ ಹಸ ಅಡಿಕೆ ದೊರೆಯುತ್ತಿದೆ. ಪೂರೈಕೆ ಕಡಿಮೆ ಆದ ಹಿನ್ನಲೆ ಹಸ ಅಡಿಕೆಯ ಬೇಡಿಕೆ ಹೆಚ್ಚಾಗಿದೆ ಎನ್ನಬಹುದು. (arecanut price) ಒಟ್ಟಾರೆಯಾಗಿ ಅಡಿಕೆ ಬೆಲೆ ಏರಿಕೆ ರೈತರಲ್ಲಿ ಸಂತಸವನ್ನು ಮೂಡಿಸಿದೆ. ಆದರೆ ಈ ಸಂದರ್ಭದಲ್ಲಿ ರೈತರ ಬಳಿ ಅಡಿಕೆ ಹೆಚ್ಚಾಗಿ ಇಲ್ಲದಿರುವುದೇ ವಿಪರ್ಯಾಸ.
ಗಬಡಿ ಪ್ರತಾಪ್