Traffic Police ಶಿವಮೊಗ್ಗ : ನೋ ಪಾರ್ಕಿಂಗ್ ನಿಯಮವನ್ನು ಪದೇ ಪದೇ ಉಲ್ಲಂಘನೆ ಮಾಡುತ್ತಿದ್ದ ವಾಹನ ಮಾಲೀಕರೊಬ್ಬರಿಗೆ ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸರು ಬರೋಬ್ಬರಿ ₹12,500 ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗ: ಕೇಂದ್ರ ಗೃಹ ಸಚಿವ ಅಮಿತ್ ಶಾ ಪೋಸ್ಟ್ ಮೂಲಕ ಬಳೆ ರವಾನೆ, ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ : ಕಾರಣವೇನು
ಪೊಲೀಸ್ ಠಾಣೆಯು ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದುರ್ಗಿಗುಡಿ ಸಮೀಪದಲ್ಲಿರುವ ಸಿಂಗಾರ್ ಶೋರೂಂ ಎದುರು ಭಾಗದ ‘ನೋ ಪಾರ್ಕಿಂಗ್’ ಸ್ಥಳದಲ್ಲಿ ಈ ವಾಹನವನ್ನು ಅದರ ಮಾಲೀಕರು ಹಲವು ಬಾರಿ ನಿಲ್ಲಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ, ಸಂಚಾರಿ ಪೊಲೀಸರು ಐಟಿಎಂಎಸ್ (ITMS – Intelligent Traffic Management System) ತಂತ್ರಾಂಶದ ಮೂಲಕ ಆ ಕಾರಿನ ಮಾಲೀಕರಿಗೆ ನೋಟಿಸ್ ನೀಡಿದ್ದರು. ಈ ನೋಟಿಸ್ ಮೇರೆಗೆ, ನಿಯಮ ಉಲ್ಲಂಘನೆಗಾಗಿ ಒಟ್ಟು 12,500 ಮೊತ್ತದ ದಂಡವನ್ನು ವಿಧಿಸಲಾಗಿದೆ ಎಂದು ಪಶ್ಚಿಮ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

Traffic Police

