ಮೊಬೈಲ್​ಗೆ ಬಂತೊಂದು ಸ್ಪ್ಯಾಮ್​ ಕಾಲ್​ : ಬ್ಯಾಂಕ್​ ಬ್ಯಾಲೆನ್ಸ್​​ ಚೆಕ್​ ಮಾಡಿದಾಗ ವ್ಯಕ್ತಿಗೆ ಕಾದಿತ್ತು ಶಾಕ್​

prathapa thirthahalli
Prathapa thirthahalli - content producer

Cyber crime shivamogga : ಶಿವಮೊಗ್ಗ : ಅಪರಿಚಿತ ವ್ಯಕ್ತಿಗಳು  ಶಿವಮೊಗ್ಗದ  ವ್ಯಕ್ತಿಯೊಬ್ಬರ ಎರಡು ಬ್ಯಾಂಕ್ ಖಾತೆಗಳಿಂದ ₹3,26,169 ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 

ಶಿವಮೊಗ್ಗದ ಈ ವ್ಯಕ್ತಿ ಸೆಪ್ಟೆಂಬರ್ 5, 2025ರಂದು ಅಸ್ಸಾಂನ ಗುವಾಹಟಿಯಲ್ಲಿ ತೀರ್ಥಯಾತ್ರೆಗೆ ತೆರಳಿದ್ದರು. ಅಂದು ಸಂಜೆ ಸುಮಾರು 6 ಗಂಟೆಗೆ ಅವರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು, ಆದರೆ ಅದನ್ನು ಅವರು ಸ್ವೀಕರಿಸಿರಲಿಲ್ಲ.

ಕೆಲವು ದಿನಗಳ ನಂತರ, ಅಂದರೆ ಸೆಪ್ಟೆಂಬರ್ 9ರಂದು, ಅವರ ತಂದೆ ಎಸ್‌ಬಿಐ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಆಘಾತಕ್ಕೊಳಗಾಗಿದ್ದಾರೆ. ಸೆಪ್ಟೆಂಬರ್ 5ರಂದು ಐದು ಹಂತಗಳಲ್ಲಿ ಒಟ್ಟು ₹84,500 ಬೇರೆ ಖಾತೆಗೆ ವರ್ಗಾವಣೆ ಆಗಿರುವುದು ಕಂಡುಬಂದಿದೆ. ನಂತರ, ಮತ್ತೊಂದು ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ, ಅಲ್ಲಿಯೂ ₹2,41,669 ಹಣವನ್ನು ವರ್ಗಾಯಿಸಿರುವುದು ತಿಳಿದುಬಂದಿದೆ. ಈ ಹಣ ಕಳುವಾಗಿರುವ ಬಗ್ಗೆ ತಕ್ಷಣವೇ ಅವರು ಮಗನಿಗೆ ತಿಳಿಸಿದ್ದಾರೆ.

Cyber crime shivamogga :   ಎರಡು ಖಾತೆಗಳಿಂದ ಒಟ್ಟು ₹3.26 ಲಕ್ಷ ವಂಚನೆ 

ವಂಚಕರು ಎಸ್‌ಬಿಐ ಬ್ಯಾಂಕ್ ಖಾತೆಯಿಂದ ₹84,500 ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ ₹2,41,669 ಸೇರಿ ಒಟ್ಟು ₹3,26,169 ಹಣವನ್ನು ವಂಚಿಸಿದ್ದಾರೆ. ಅಪರಿಚಿತರು ತಮ್ಮ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಈ ಕೃತ್ಯ ಎಸಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಕುರಿತು ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

Share This Article