ಶಿವಮೊಗ್ಗ ದಸರಾ! ಏನೆಲ್ಲಾ ವಿಶೇಷ ಇದೆ ಗೊತ್ತಾ! ನೀವು ಸಹ ಪಾಲ್ಗೊಳ್ಳಬಹುದು

ajjimane ganesh

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 18 2025 : ಶಿವಮೊಗ್ಗದಲ್ಲಿ ದಸರಾ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ shimoga grand dasara

ರಂಗದಸರಾ -2025ರಡಿಯಲ್ಲಿ ಕುಟುಂಬ ರಂಗ ಕಾರ್ಯಕ್ರಮ/shimoga grand dasara

ಶಿವಮೊಗ್ಗ ಮಹಾನಗರ ಪಾಲಿಕೆಯು ರಂಗದಸರಾ -2025 ರಡಿಯಲ್ಲಿ ಕುಟುಂಬ ರಂಗ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ. ಪಾಲಿಕೆ ವ್ಯಾಪ್ತಿಯ ಕುಟುಂಬದ ಸದಸ್ಯರು ಅಥವಾ ಅಕ್ಕಪಕ್ಕದ ಮನೆಯವರು ಕನಿಷ್ಠ 5 ರಿಂದ 12 ಜನ ಸೇರಿ ಅರ್ಧ ಗಂಟೆಯ ಕಿರು ನಾಟಕವನ್ನು ತಮ್ಮ ಮನೆಯಲ್ಲೇ ಅಥವಾ ಹತ್ತಿರದ ಅನುಕೂಲಕರ ಸ್ಥಳದಲ್ಲಿ ಅಭಿನಯಿಸಬೇಕು. ಇದರಲ್ಲಿ ಮೆಚ್ಚುಗೆ ಪಡೆದ ನಾಲ್ಕು ತಂಡಗಳನ್ನು ಆಯ್ಕೆ ಮಾಡಿ ನಗರದ ಕುವೆಂಪು ರಂಗಮಂದಿರದಲ್ಲಿ ಸೆ. 30 ರಂದು ಪ್ರದರ್ಶಿಸಲಾಗುವುದು. ನಾಟಕದ ವಿಷಯ ವಿವಾದಾತ್ಮಕ ಹಾಗೂ ಸಮಾಜದ ಶಾಂತಿಗೆ ಭಂಗ ತರುವ ವಿಚಾರವಾಗಿರಬಾರದು. 

ಆಸಕ್ತರು ಸೆ. 22 ರೊಳಗಾಗಿ ಸದಸ್ಯ ಕಾರ್ಯದರ್ಶಿಗಳು, ರಂಗ ದಸರಾ ಸಮಿತಿ, ಮಹಾನಗರಪಾಲಿಕೆ, ಶಿವಮೊಗ್ಗ ಇವರ ಕಚೇರಿಯಲ್ಲಿ ಹೆಸರು ಅಥವಾ ತಂಡದ ಹೆಸರನ್ನು ನೋಂದಾಯಿಸಿಕೊಳ್ಳುವುದು. ನೊಂದಣಿ ಮಾಡಿದ ಮೊದಲ 15 ಸಾರ್ವಜನಿಕ ಕುಟುಂಬಗಳಿಗೆ ಪ್ರೋತ್ಸಾಹಧನವಾಗಿ ರೂ. 1000/-ಗಳಂತೆ ರಂಗ ದಸರಾ ಸಮಿತಿಯಿಂದ ಕಾರ್ಯಕ್ರಮ ಮುಗಿದ ನಂತರ ನೀಡಲಾಗುವುದು ಎಂದು ರಂಗ ದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೋಂದಾಯಿಸಲು ಸಮಿತಿ ಅಧಿಕಾರಿ ಸದಸ್ಯೆ ಮಂಜುಶ್ರೀ-6364083666, ಸಂಚಾಲಕರು ಶ್ರೀಕಂಠ-8660756404, ಸುರೇಶ್ ಎಸ್.ಹೆಚ್.-9449925746 ಇವರುಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

Dandavati River  Kannada  Horoscope car decor new

ಮಕ್ಕಳ ದಸರಾ ಅಂಗವಾಗಿ ವಿವಿಧ ಸ್ಪರ್ಧೆಗಳು ಹಾಗೂ ಕಾರ್ಯಕ್ರಮ /shimoga grand dasara

ಶಿವಮೊಗ್ಗ ಮಹಾನಗರ ಪಾಲಿಕೆಯು ಸೆ. 22 ಮತ್ತು 23 ರಂದು ಕುವೆಂಪು ರಂಗಮಂದಿರ, ಎನ್.ಇ.ಎಸ್. ಮೈದಾನ ಹಾಗೂ ಅಂಬೇಡ್ಕರ್ ಭವನದಲ್ಲಿ ಮಕ್ಕಳ ದಸರಾ ಅಂಗವಾಗಿ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಿದೆ. 

ಸೆ. 22 ರಂದು ಬೆಳಗ್ಗೆ 9.00ಕ್ಕೆ ಕುವೆಂಪು ರಂಗಮಂದಿರ ಹಾಗೂ ಎನ್.ಇ.ಎಸ್. ಮೈದಾನದಲ್ಲಿ 5 ರಿಂದ 7ನೇ ತರಗತಿ ವಿಧ್ಯಾರ್ಥಿಗಳಿಗೆ ಮತ್ತು 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ದೆ, ಶಿವಮೊಗ್ಗ ದಸರಾ ವೈವಿದ್ಯತೆ ಬಗ್ಗೆ ಪ್ರಬಂಧ ಸ್ಪರ್ಧೆ, ಛದ್ಮವೇಷ, 1 ನಿಮಿಷದಲ್ಲಿ ಪ್ಲಾಸ್ಟಿಕ್ ಬಾಟಲಿಗೆ ಬೊಗಸೆಯಿಂದ ನೀರು ತುಂಬಿಸುವುದು, ದೇಶಭಕ್ತಿ ಗೀತೆ ಸ್ಪರ್ದೆ, ಶಾಟ್‌ಪುಟ್ ಸ್ಪರ್ದೆ ಹಾಗೂ 100&200 ಮೀ. 

ಸೆ. 23 ರಂದು ಬೆಳಗ್ಗೆ 9.00ಕ್ಕೆ ಮಕ್ಕಳ ಜಾಥಾ ಹಮ್ಮಿಕೊಂಡಿದ್ದು ಡಿ.ವಿ.ಎಸ್. ಶಾಲೆಯಿಂದ ಶಿವಮೂತಿ ಸರ್ಕಲ್ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ, ಕೃಷಿ ಇಲಾಖೆಯಿಂದ ಓ.ಟಿ.ರಸ್ತೆಯ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ, ಮಿಳಘಟ್ಟ ಕಡೆಯಿಂದ ಅಶೋಕವೃತ್ತದ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ, ಹೊಳೆ ಬಸ್ ಸ್ಟಾಪ್ ರಸ್ತೆಯ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ ಹಾಗೂ ಜೈಲ್ ರಸ್ತೆಯಿಂದ ಗೋಪಿ ವೃತ್ತದ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ ಸಾಗುತ್ತದೆ. ಅಂದು ಸಂಜೆ 5.00ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಮಾರೋಪ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಕ್ಕಳ ದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. shimoga grand dasara

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shimoga Gears Up for a Grand Dasara Celebration

Share This Article