ನನಗೆ ವಿಷ ಕೊಡಿ ಎಂದ ನಟ ದರ್ಶನ್​ಗೆ ಕೋರ್ಟ್​ ಹೇಳಿದ್ದೇನು

prathapa thirthahalli
Prathapa thirthahalli - content producer

Actor darshan : ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌, ತಮ್ಮನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸುವಂತೆ ಮತ್ತು ಹೆಚ್ಚುವರಿ ಹಾಸಿಗೆ-ದಿಂಬು ನೀಡುವಂತೆ ಕೋರಿದ್ದ ಮನವಿಯನ್ನು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಇಂದು ವಿಚಾರಣೆ ನಡೆಸಿತು.

ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ನಿರಾಕರಣೆ

ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ, ದರ್ಶನ್‌ರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ದರ್ಶನ್‌ಗೆ ಕೆಲವು ಸೌಲಭ್ಯಗಳನ್ನು ನೀಡಲು ಕೋರ್ಟ್ ಆದೇಶಿಸಿದ್ದು, ಜೈಲಿನ ಹೊರಗೆ ಓಡಾಡಲು ಹಾಗೂ ಹೆಚ್ಚುವರಿ ಹಾಸಿಗೆ ಮತ್ತು ದಿಂಬು ನೀಡುವಂತೆ ಸೂಚಿಸಿದೆ.

Actor darshan ನನಗೆ ಸ್ವಲ್ಪ ವಿಷ ಕೊಡಿ ಎಂದು ಕಣ್ಣೀರಿಟ್ಟ ದರ್ಶನ್

ಇದೇ ವೇಳೆ, ಬೆಳಿಗ್ಗೆ ನಡೆದ ವಿಚಾರಣೆಯ ಸಂದರ್ಭದಲ್ಲಿ ದರ್ಶನ್ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾರೆ. “ನನಗೆ ಜೈಲಿನ ಶಿಕ್ಷೆಯನ್ನು ಅನುಭವಿಸಲು ಆಗುತ್ತಿಲ್ಲ. ಕೋರ್ಟ್‌ನಿಂದ ನನಗೆ ಸ್ವಲ್ಪ ವಿಷ ಕೊಡಿಸಿ. ಬಿಸಿಲು ನೋಡಿ ತುಂಬಾ ದಿನಗಳಾಗಿವೆ, ನನ್ನ ಕೈಗಳಿಗೆಲ್ಲ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ, ನನಗೆ ಸ್ವಲ್ಪ ವಿಷ ಕೊಡಿ” ಎಂದು ದರ್ಶನ್ ಹೇಳಿದ್ದಾರೆ. ಆಗ ನ್ಯಾಯಾಧೀಶರು, “ಹಾಗೆಲ್ಲಾ ಹೇಳಬಾರದು, ನಾವು ಏನು ಮಾಡಬೇಕು ಅದನ್ನು ಜೈಲಾಧಿಕಾರಿಗಳಿಗೆ ಹೇಳುತ್ತೇವೆ” ಎಂದು ತಿಳಿಸಿದ್ದಾರೆ.

ದರ್ಶನ್‌ಗೆ ನೀಡಲಾಗಿರುವ ಸೌಲಭ್ಯಗಳನ್ನು ಅವರು ದುರುಪಯೋಗಪಡಿಸಿಕೊಂಡರೆ, ಜೈಲು ಐಜಿ ಅವರನ್ನು ವರ್ಗಾಯಿಸುವ ಕ್ರಮ ತೆಗೆದುಕೊಳ್ಳಬಹುದು ಎಂದು ಕೂಡ ಕೋರ್ಟ್ ಎಚ್ಚರಿಕೆ ನೀಡಿದೆ.

Actor darshan
Actor darshan
Share This Article