ಅಂಕಗಳಿಂದಲೇ ಅಪ್ಪನ ಮೆಚ್ಚಿಸಿದ ಮಗ! ತಂದೆಯಿಂದಲೇ ಸಿಕ್ತು ಪ್ರಮಾಣ ಪತ್ರ! ಮಧು ಬಂಗಾರಪ್ಪರ ಮಗನ ಮಾರ್ಕ್ಸ್​​ ಎಷ್ಟು ಗೊತ್ತಾ?

Minister Madhu Bangarappa felicitated his son for his son's achievement at a function held at Bishop Cotton Boys School. ಬಿಷಪ್ ಕಾಟನ್ ಬಾಯ್ಸ್​ ಸ್ಕೂಲ್​ನಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಮಧು ಬಂಗಾರಪ್ಪ ತಮ್ಮ ಮಗನ ಸಾಧನೆಯನ್ನ ಗೌರವಿಸಿದರು.

ಅಂಕಗಳಿಂದಲೇ ಅಪ್ಪನ ಮೆಚ್ಚಿಸಿದ ಮಗ! ತಂದೆಯಿಂದಲೇ ಸಿಕ್ತು ಪ್ರಮಾಣ ಪತ್ರ!  ಮಧು ಬಂಗಾರಪ್ಪರ ಮಗನ ಮಾರ್ಕ್ಸ್​​ ಎಷ್ಟು ಗೊತ್ತಾ?

KARNATAKA NEWS/ ONLINE / Malenadu today/ Aug 11, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಉಸ್ತುವಾರಿ  ಸಚಿವರಾಗಿರುವ ಮಧು ಬಂಗಾರಪ್ಪರವರು, ಮೊದಲ ಸಲ ಸಚಿವರಾಗಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಚಿವಗಿರಿಯ ಜವಾಬ್ದಾರಿಯ ನಡುವೆ ಅವರ ವೈಯಕ್ತಿಕ ಜೀವನದಲ್ಲಿ ವಿಶೇಷ ಸನ್ನಿವೇಶವೊಂದು ಎದುರಾಗಿತ್ತು. ಮಧು ಬಂಗಾರಪ್ಪ (Madhu Bangarappa ) ರವರು ಶಿಕ್ಷಣ ಸಚಿವರಾಗಿ ಸಾಧನೆಯ ಹೆಜ್ಜೆ ಇಡಲು ಆರಂಭಿಸಿದರೆ, ಶಿಕ್ಷಣದಲ್ಲಿ ಅತ್ಯುತ್ತಮ ಸಾಧನೆ ಮಾಡಿ ತಂದೆಯಿಂದಲೇ , ಮಧು ಬಂಗಾರಪ್ಪರವರ ಪುತ್ರ ಪ್ರಶಸ್ತಿಗೌರವ ಪಡೆದಿದ್ಧಾರೆ. 

ಹೌದು ಇಂತಹದ್ದೊಂಧು ಸನ್ನಿವೇಶಕ್ಕೆ ಬೆಂಗಳೂರಿನ ಬಿಷಪ್ ಕಾಟನ್ ಬಾಯ್ಸ್ ಸ್ಕೂಲ್‌ನ ಪದವಿ ಪ್ರಧಾನ ಸಮಾರಂಭ ಸಾಕ್ಷಿಯಾಗಿತ್ತು. ಸಮಾರಂಭದಲ್ಲಿ  ಭಾಗಿಯಾಗಿದ್ದ ಮಧು ಬಂಗಾರಪ್ಪರವರುಚ ತಮ್ಮ ಮಗ ಸೂರ್ಯ ಮಧುಬಂಗಾರಪ್ಪ ಅವರಿಗೆ  ಪದವಿ ನೀಡಿ ಸಂಭ್ರಮ ಪಟ್ಟರು.10 ನೇ ತರಗತಿ ಐಸಿಎಸ್ಸಿ ವಿಭಾಗದಲ್ಲಿ ಸೂರ್ಯ ಶೇ .98.6 ರಷ್ಟು ಅಂಕ ಪಡೆದು  2 ನೇ ರ್‍ಯಾಂಕ್ ಗಳಿಸುವ ಮುಖಾಂತರ ಶಾಲೆಗೆ ಕೀರ್ತಿ ತಂದು ಸಾಧಕ ವಿದ್ಯಾರ್ಥಿ ಯಾಗಿದ್ದಾನೆ. ವಿದ್ಯಾರ್ಥಿ ಸೂರ್ಯ ಸಚಿವರಾದ ತನ್ನ ತಂದೆ ಮಧು ಬಂಗಾರಪ್ಪ, ತಾಯಿ ಅನಿತಾ ಅವರೊಂದಿಗೆ ನಿಂತು ಪೋಟೋ ತೆಗೆಸಿಕೊಂಡು ಸಂಭ್ರಮಿಸಿದನು. ಮಗನ ಸಾಧನೆಗೆ ಸಚಿವ ಮಧು ಬಂಗಾರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗಕ್ಕೆ ಬರುತ್ತಿದೆ ಸೇನಾ ಯುದ್ಧ ಟ್ಯಾಂಕರ್! ಕಾರಣವೇನು? ಏನಿದರ ವಿಶೇಷ ಗೊತ್ತಾ?

ಶಿವಮೊಗ್ಗಕ್ಕೆ ಇವತ್ತು ಸೇನಾಯುದ್ಧ ಟ್ಯಾಂಕರ್​ ಬಂದಿಳಿಯಲಿದೆ.. ಶಿವಮೊಗ್ಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇನಾ ಯುದ್ಧ ಟ್ಯಾಂಕರ್​ನ ಸ್ಮಾರಕಕ್ಕಾಗಿ ಈ ಟ್ಯಾಂಕರ್​ನ್ನ ತರಿಸಿಕೊಳ್ಳಲಾಗುತ್ತಿದೆ. ಇಂದು ಸಂಜೆ ನಗರದ ಎಂಆರ್​ಎಸ್​ ವೃತ್ತಕ್ಕೆ ಟ್ಯಾಂಕರ್ ಬರಲಿದೆ ಕೇಂದ್ರ ರಕ್ಷಣಾ ಇಲಾಖೆಯಿಂದ ಶಿವಮೊಗ್ಗ ಜಿಲ್ಲೆಗೆ ನಿಷ್ಕ್ರಿಯ ಸೇನಾ ಯುದ್ಧ ಟ್ಯಾಂಕ್‌ರ್​ನ್ನ ಮಂಜೂರು ಮಾಡಲಾಗಿತ್ತು. ಎಂಆರ್​ಎಸ್​ ಸರ್ಕಲ್​ ಬಳಿ ಸೇನಾ ಯುದ್ಧ ಟ್ಯಾಂಕರ್​ ಸ್ಮಾರಕ ನಿರ್ಮಾಣವಾಗಲಿದೆ.  

ತಾಳಗುಪ್ಪ-ಮೈಸೂರು, ಶಿವಮೊಗ್ಗ ಬೆಂಗಳೂರು ಟ್ರೈನ್​ ಸೇರಿದಂತೆ 22 ರೈಲುಗಳಲ್ಲಿ ಹೆಚ್ಚುವರಿ ಬೋಗಿ ಅಳವಡಿಕೆ ! ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗದ ಎರಡು ಟ್ರೈನ್​ಗಳು ಸೇರಿದಂತೆ  ಒಟ್ಟು 22 ಟ್ರೈನ್​ಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಭೋಗಿಗಳನ್ನು ಅಳವಡಿಸುತ್ತಿರುವ ಬಗ್ಗೆ ರೈಲ್ವೆ ಇಲಾಖೆಯ South Western Railway  ವಿಭಾಗ ಪ್ರಕಟನೆಯನ್ನು ಹೊರಡಿಸಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರವುಗೊಳಿಸುವ ಸಲುವಾಗಿ  ರೈಲುಗಳಿಗೆ ತಾತ್ಕಾಲಿಕವಾಗಿ ಒಂದು ಸ್ಲೀಪರ್ ಕ್ಲಾಸ್ / ಚೇರ್ ಕಾರ್ ಬೋಗಿಗಳ ಜೋಡಣೆ ಮಾಡಲಾಗುತ್ತಿದೆ.

ಯಾವ್ಯಾವ ಟ್ರೈನ್​ಗೆ ಹೆಚ್ಚುವರಿ ಬೋಗಿ ಅಳವಡಿಕೆ

11.08.2023 ರಂದು 16227 ಮೈಸೂರು-ತಾಳಗುಪ್ಪ  ಟ್ರೈನ್​ ನಲ್ಲಿ ಒಂದು ಸ್ಲೀಪರ್ ಬೋಗಿಯನ್ನು ಅಳವಡಿಸಲಾಗಿದೆ. ಇನ್ನೂ 12.08.2023 16228 ತಾಳಗುಪ್ಪ-ಮೈಸೂರು ಟ್ರೈನ್​ನಲ್ಲಿ ಒಂದು ಸ್ಲೀಪರ್ ಬೋಗಿಯನ್ನು ಅಳವಡಿಸಲಾಗಿದೆ. ಇನ್ನೂ  12089 ಕೆ.ಎಸ್.ಆರ್ ಬೆಂಗಳೂರು-ಶಿವಮೊಗ್ಗ ಟ್ರೈನ್​ನಲ್ಲಿ 12.08.2023 ರಂದು ಒಂದು ಚೇರ್​ ಕಾರ್ ಬೋಗಿಯನ್ನ ಅಳವಡಿಸಲಾಗುತ್ತಿದೆ.  13.08.2023 ರಂದು 12090 ಶಿವಮೊಗ್ಗ -ಕೆ.ಎಸ್.ಆರ್ ಬೆಂಗಳೂರು ಟ್ರೈನ್​ನಲ್ಲಿ  ಒಂದು ಚೇರ್ ಕಾರ್​ ಬೋಗಿಯನ್ನು ಅಳವಡಿಸಲಾಗಿದೆ. 

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು