ಶಿವಮೊಗ್ಗಕ್ಕೆ ಬರುತ್ತಿದೆ ಸೇನಾ ಯುದ್ಧ ಟ್ಯಾಂಕರ್! ಕಾರಣವೇನು? ಏನಿದರ ವಿಶೇಷ ಗೊತ್ತಾ?

Malenadu Today

KARNATAKA NEWS/ ONLINE / Malenadu today/ Aug 11, 2023 SHIVAMOGGA NEWS 

ಶಿವಮೊಗ್ಗಕ್ಕೆ ಇವತ್ತು ಸೇನಾಯುದ್ಧ ಟ್ಯಾಂಕರ್​ ಬಂದಿಳಿಯಲಿದೆ.. ಶಿವಮೊಗ್ಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇನಾ ಯುದ್ಧ ಟ್ಯಾಂಕರ್​ನ ಸ್ಮಾರಕಕ್ಕಾಗಿ ಈ ಟ್ಯಾಂಕರ್​ನ್ನ ತರಿಸಿಕೊಳ್ಳಲಾಗುತ್ತಿದೆ. ಇಂದು ಸಂಜೆ ನಗರದ ಎಂಆರ್​ಎಸ್​ ವೃತ್ತಕ್ಕೆ ಟ್ಯಾಂಕರ್ ಬರಲಿದೆ ಕೇಂದ್ರ ರಕ್ಷಣಾ ಇಲಾಖೆಯಿಂದ ಶಿವಮೊಗ್ಗ ಜಿಲ್ಲೆಗೆ ನಿಷ್ಕ್ರಿಯ ಸೇನಾ ಯುದ್ಧ ಟ್ಯಾಂಕ್‌ರ್​ನ್ನ ಮಂಜೂರು ಮಾಡಲಾಗಿತ್ತು. ಎಂಆರ್​ಎಸ್​ ಸರ್ಕಲ್​ ಬಳಿ ಸೇನಾ ಯುದ್ಧ ಟ್ಯಾಂಕರ್​ ಸ್ಮಾರಕ ನಿರ್ಮಾಣವಾಗಲಿದೆ.  

ತಾಳಗುಪ್ಪ-ಮೈಸೂರು, ಶಿವಮೊಗ್ಗ ಬೆಂಗಳೂರು ಟ್ರೈನ್​ ಸೇರಿದಂತೆ 22 ರೈಲುಗಳಲ್ಲಿ ಹೆಚ್ಚುವರಿ ಬೋಗಿ ಅಳವಡಿಕೆ ! ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗದ ಎರಡು ಟ್ರೈನ್​ಗಳು ಸೇರಿದಂತೆ  ಒಟ್ಟು 22 ಟ್ರೈನ್​ಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಭೋಗಿಗಳನ್ನು ಅಳವಡಿಸುತ್ತಿರುವ ಬಗ್ಗೆ ರೈಲ್ವೆ ಇಲಾಖೆಯ South Western Railway  ವಿಭಾಗ ಪ್ರಕಟನೆಯನ್ನು ಹೊರಡಿಸಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರವುಗೊಳಿಸುವ ಸಲುವಾಗಿ  ರೈಲುಗಳಿಗೆ ತಾತ್ಕಾಲಿಕವಾಗಿ ಒಂದು ಸ್ಲೀಪರ್ ಕ್ಲಾಸ್ / ಚೇರ್ ಕಾರ್ ಬೋಗಿಗಳ ಜೋಡಣೆ ಮಾಡಲಾಗುತ್ತಿದೆ.

ಯಾವ್ಯಾವ ಟ್ರೈನ್​ಗೆ ಹೆಚ್ಚುವರಿ ಬೋಗಿ ಅಳವಡಿಕೆ

11.08.2023 ರಂದು 16227 ಮೈಸೂರು-ತಾಳಗುಪ್ಪ  ಟ್ರೈನ್​ ನಲ್ಲಿ ಒಂದು ಸ್ಲೀಪರ್ ಬೋಗಿಯನ್ನು ಅಳವಡಿಸಲಾಗಿದೆ. ಇನ್ನೂ 12.08.2023 16228 ತಾಳಗುಪ್ಪ-ಮೈಸೂರು ಟ್ರೈನ್​ನಲ್ಲಿ ಒಂದು ಸ್ಲೀಪರ್ ಬೋಗಿಯನ್ನು ಅಳವಡಿಸಲಾಗಿದೆ. ಇನ್ನೂ  12089 ಕೆ.ಎಸ್.ಆರ್ ಬೆಂಗಳೂರು-ಶಿವಮೊಗ್ಗ ಟ್ರೈನ್​ನಲ್ಲಿ 12.08.2023 ರಂದು ಒಂದು ಚೇರ್​ ಕಾರ್ ಬೋಗಿಯನ್ನ ಅಳವಡಿಸಲಾಗುತ್ತಿದೆ.  13.08.2023 ರಂದು 12090 ಶಿವಮೊಗ್ಗ -ಕೆ.ಎಸ್.ಆರ್ ಬೆಂಗಳೂರು ಟ್ರೈನ್​ನಲ್ಲಿ  ಒಂದು ಚೇರ್ ಕಾರ್​ ಬೋಗಿಯನ್ನು ಅಳವಡಿಸಲಾಗಿದೆ. 

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Share This Article