ಗಣೇಶೋತ್ಸವ ಹಾಗೂ ಈದ್ ಮಿಲಾದ್ ಗೂ ಮೊದಲೇ ಶಿವಮೊಗ್ಗದಲ್ಲಿ ನಡೆಯಲಿದೆ ಸೌಹಾರ್ದ ಹಬ್ಬ! ಏನಿದು?

KARNATAKA NEWS/ ONLINE / Malenadu today/ Sep 13, 2023 SHIVAMOGGA NEWS 

ಇದೇ ಸೆಪ್ಟೆಂಬರ್ 15 ರಂದು ಶಿವಮೊಗ್ಗದಲ್ಲಿ ಸೌಹಾರ್ದ ಹಬ್ಬ ನಡೆಯಲಿದೆ. ಶಿವಮೊಗ್ಗದಲ್ಲಿ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ  ಸೆಪ್ಟೆಂಬರ್​ 15ರಂದು ಸಂಜೆ 4 ರಿಂದ 6 ಗಂಟೆಯವರೆಗೆ ಸಿಮ್ಸ್ ಮೆಡಿಕಲ್ ಕಾಲೇಜಿನಿಂದ ಸೈನ್ಸ್ ಮೈದಾನದವರೆಗೆ ಸೌಹಾರ್ದವೇ ಹಬ್ಬ ನಡಿಗೆಯನ್ನು ಮತ್ತು ಶಾಂತಿ ಸಭೆ ಆಯೋಜಿಸಲಾಗಿದೆ. ಈ ಬಗ್ಗೆ ಇಂದು ಸುದ್ದಿಗೋಷ್ಟಿಯಲ್ಲಿ ಸಮಿತಿ ಸಂಚಾಲಕ ಕೆ.ಪಿ. ಶ್ರೀಪಾಲ್‌ ಮಾಹಿತಿ ನೀಡುತ್ತಾ ಗಣಪತಿ ಮತ್ತು ಈದ್‌ ಮಿಲಾದ್ ಹಬ್ಬಗಳು ಒಟ್ಟಿಗೆ ಬಂದಿವೆ. ಊರಿನ ಎಲ್ಲಾ ಧರ್ಮದ ಬಂಧುಗಳು ಈ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕಾಗಿದೆ ಎಂದರು. 

ಈ ಕುರಿತು ಸೌಹಾರ್ದವೇ ಹಬ್ಬ ಎಂಬ ಹೆಸರಿನಲ್ಲಿ ಈ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ  ಸೈನ್ಸ್ ಮೈದಾನದವರೆಗೆ ಕಾಲ್ನಡಿಗೆ ಮೂಲಕ ಬಂದು ರಾಷ್ಟ್ರ ಧ್ವಜ ಹಿಡಿದು ನಾವೆಲ್ಲ ಭಾರತಾಂಬೆಯ ಮಕ್ಕಳು ಎಂಬ ಸಂದೇಶ ಸಾರುತ್ತೇವೆ ಎಂದು ತಿಳಿಸಿದರು.    


ಇನ್ನಷ್ಟು ಸುದ್ದಿಗಳು 

 


 

Leave a Comment