KARNATAKA NEWS/ ONLINE / Malenadu today/ Sep 13, 2023 SHIVAMOGGA NEWS
ಶಿವಮೊಗ್ಗದಲ್ಲಿ ರಾಜ್ಯದಲ್ಲಿನ ಬರದ ವಿಚಾರ ಸಂಬಂಧ ಮಾತನಾಡಿದ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರವರು, ಮಲೆನಾಡಿನಲ್ಲಿ ಇಷ್ಟು ಮಳೆ ಕಡಿಮೆಯಾಗಿರುವುದು ನನ್ನ ಜೀವನದಲ್ಲಿ ನಾನೂ ನೋಡಿರಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ಧಾರೆ. ತೀರ್ಥಹಳ್ಳಿ, ಹೊಸನಗರ ಸೇರಿದಂತೆ ಉಳಿದ ತಾಲೂಕುಗಳಲ್ಲೂ ಮಳೆ ಕೊರತೆಯಾಗಿದೆ ಎಂದ ಅವರು, ಸರ್ಕಾರ ತಕ್ಷಣವೇ ಬರ ಘೋಷಣೆ ಮಾಡಬೇಕು. ಇದಕ್ಕೆ ಮೀನಾಮೇಷ ಎಣಿಸಬಾರದು ಎಂದಿದ್ಧಾರೆ
ಅತಿವೃಷ್ಟಿಯಾದಾಗ ರಾಜ್ಯ ಸರ್ಕಾರದಿಂದ ಪರಿಹಾರ ಕೊಟ್ಟು ಸಾಂತ್ವನ ಹೇಳಿದ್ದೆವು, ಅದೇ ರೀತಿ ಬರಗಾಲದ ಈ ಸಂದರ್ಭದಲ್ಲಿ ಸರ್ಕಾರ ಜನರ ನೆರವಿಗೆ ಧಾವಿಸಬೇಕು. ರೈತರಿಗೆ ಬೀಜದ ಭತ್ತ, ಗೊಬ್ಬರ ನೀಡಬೇಕು. ಈಗ ಹಾಕಿರುವ ಎಲ್ಲವೂ ನಾಶವಾಗಿದೆ, ಭೂಮಿ ಬಾಯಿ ಬಿಟ್ಟಿದೆ ಆದರೆ ಸರ್ಕಾರ ಈ ಬಗ್ಗೆ ಗಮನ ಹರಿಸಿದಂತೆ ಕಾಣುವುದಿಲ್ಲ ಎಂದು ವ್ಯಂಗ್ಯವಾಡಿದ್ರು.
ಅಧಿಕಾರಕ್ಕೆ ಬಂದ ನಾಲ್ಕು ತಿಂಗಳಾದರೂ ಆಡಳಿತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ, ರೈತರು ಬೇರೆ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭತ್ತಕ್ಕೆ ಬೆಲೆ ಇದ್ದರೂ ಬೆಳೆಯಲಾಗುತ್ತಿಲ್ಲ.ಬೋರ್ ವೆಲ್ ನಿಂದ ನೀರು ಹರಿಸಲೂ ವಿದ್ಯುತ್ ಇಲ್ಲ ಎಂದ ಆರಗ ಜ್ಞಾನೇಂದ್ರರವರು, ಕಾವೇರಿ ವಿಷಯದಲ್ಲಿ ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.
ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ
ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಹೇಳಿಕೆಯಿಂದ ಕಾಂಗ್ರೆಸ್ ನ ಒಳ ಕುದಿ ಹೊರಗೆ ಬಂದಿದೆ, ಹರಿಪ್ರಸಾದ್ ಕೇವಲ ಒಂದು ಉದಾಹರಣೆ ಅಷ್ಟೇ. ಇಂತಹ ಬಹಳಷ್ಟು ಜನ ಅಸಮಾಧಾನಿತರು ಕಾಂಗ್ರೆಸ್ ನಲ್ಲಿದ್ದಾರೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಇನ್ನೂ ಚೈತ್ರಾ ಕುಂದಾಪುರ ಬಂಧನ ವಿಷಯ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಗೃಹಸಚಿವ, ಅವರು ವಂಚನೆ ಮಾಡಿದ್ದಾರೆ ಎಂದರೆ ತನಿಖೆ ಆಗಲಿ, ಕಾನೂನು ಕ್ರಮ ಆಗಲಿ, ಆದರೆ ಅನಾವಶ್ಯಕ ಹಾಗೂ ದುರುದ್ದೇಶಪೂರ್ವಕವಾಗಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.
ಇನ್ನಷ್ಟು ಸುದ್ದಿಗಳು
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ
