ಚಿಕ್ಕಮಗಳೂರು ಮೂಲದ ಒಮಿನಿ ವಾಹನದ ಮಾಲೀಕನಿಗೆ ಶಿವಮೊಗ್ಗ ಕೋರ್ಟ್​ನಿಂದ 25 ಸಾವಿರ ರೂಪಾಯಿ ದಂಡ! ಕಾರಣವೇನು ಗೊತ್ತಾ?

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS

SUNCONTROL_FINAL-scaled

ಶಿವಮೊಗ್ಗದಲ್ಲಿ  ವಾಹನಗಳ ಮಾಲೀಕರಿಗೆ , ಅಪ್ರಾಪ್ತರಿಗೆ ವಾಹನಗಳನ್ನು ಓಡಿಸಲು ಅವಕಾಶ ಕೊಟ್ಟಿದ್ದಕ್ಕೆ ಬರೋಬ್ಬರಿ 25 ಸಾವಿರ ದಂಡ ಬೀಳುತ್ತಿದೆ. ಕಾನೂನಿನಡಿಯಲ್ಲಿ ದುಬಾರಿ ದಂಡ ವಿಧಿಸುವುದರಲ್ಲಿ ಪೊಲೀಸ್ ಇಲಾಖೆ ಯಾವುದೇ ಕರುಣೆಯನ್ನು ತೋರುತ್ತಿಲ್ಲ. ಹೀಗಾಗಿ ಅಪ್ರಾಪ್ತರಿಗೆ ವಾಹನ ಓಡಿಸಲು ಅವಕಾಶ ನೀಡದಿರುವುದು ಉತ್ತಮ. 

ಇನ್ನೂ ಪೊಲೀಸ್​  ಇಲಾಖೆಯ ಕಠಿಣ ಕ್ರಮಕ್ಕೆ ಸಾಕ್ಷಿಯಾಗಿ ಒಮಿನಿ ವಾಹನ ಮಾಲೀಕನಿಗೆ ಬರೋಬ್ಬರಿ 25 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ.   ದಿನಾಂಕಃ 09-09-2023 ರಂದು ಹೆಚ್. ಎಸ್. ಶಿವಣ್ಣವರ್ ಪಿಎಸ್ಐ,  ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆ ರವರು  ಕರ್ನಾಟಕ ಸಂಘದ ಹತ್ತಿರ ವಾಹನ ತಪಾಸಣೆ ನಡೆಸ್ತಿರುವಾಗ ಅಪ್ರಾಪ್ತನೊಬ್ಬ ಒಮಿನಿ ಚಲಾಯಿಸುತ್ತಿರುವುದು ಕಂಡುಬಂದಿದೆ. 

ಈ ಹಿನ್ನೆಲೆಯಲ್ಲಿ ವಾಹನವನ್ನು ತಡೆದ ಪೊಲೀಸರು ಅಪ್ರಾಪ್ತ ವಯ್ಯಸ್ಸಿನ ಬಾಲಕನಿಗೆ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಮೂಲತಹ  ಚಿಕ್ಕಮಗಳೂರು ಜಿಲ್ಲೆ ನಿವಾಸಿಯಾದ ಒಮಿನಿ ಮಾಲೀಕನ ವಿರುದ್ಧ ದಾಖಲಾದ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ 3ನೇ ಎ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ಒಮಿನಿ ಮಾಲೀಕರಿಗೆ 25,000/- ದಂಡ ವಿಧಿಸಿರುತ್ತಾರೆ.


ಇನ್ನಷ್ಟು ಸುದ್ದಿಗಳು 


 

SUNCONTROL_FINAL-scaled

Leave a Comment