Thirthahalli | ಆಗುಂಬೆ ಸಮೀಪ ಬೈಕ್‌ & ಪಿಕಪ್‌ ಡಿಕ್ಕಿ | ಕೇರಳ ಮೂಲದ ಯವಕ ಸೇರಿ ಇಬ್ಬರ ಸಾವು

13

SHIVAMOGGA | MALENADUTODAY NEWS | Aug 13, 2024  ಮಲೆನಾಡು ಟುಡೆ  

ಶಿವಮೊಗ್ಗದಲ್ಲಿ ಮೂವರ ಆತ್ಮಹತ್ಯೆ ವಿಚಾರ ಹೊರಬಿದ್ದ ಬೆನ್ನಲ್ಲೆ ಅತ್ತ ತೀರ್ಥಹಳ್ಳಿಯಿಂದ ಇನ್ನೊಂದು ದುಃಖದ ಸುದ್ದಿ ಕೇಳಿಬಂದಿದೆ. ಅಪಘಾತವೊಂದರಲ್ಲಿ ಇಬ್ಬರು ಸಾವನ್ನಪ್ಪಿದ್ದು ಮತ್ತೊಬ್ಬನ ಸ್ಥಿತಿ ಗಂಭೀರವಾಗಿರುವ ಬಗ್ಗೆ ವರದಿಯಾಗಿದೆ. 

- Advertisement -

ತೀರ್ಥಹಳ್ಳಿ ತಾಲ್ಲೂಕು/ Thirthahalli Taluk

ತೀರ್ಥಹಳ್ಳಿ ತಾಲ್ಲೂಕು ಆಗುಂಬೆ (Agumbe) ಬಳಿ ಪಿಕಪ್‌ ಹಾಗೂ ಬೈಕ್‌ವೊಂದರ ನಡುವೆ ಡಿಕ್ಕಿಯಾಗಿದ್ದು ಬೈಕ್‌ ಸವಾರ ಹಾಗೂ ಪಿಕಪ್‌ನಲ್ಲಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. 

ನಡೆದ ಘಟನೆ ಹೇಗಾಯ್ತು ಎನ್ನುವುದನ್ನ ಗಮನಿಸುವುದಾದರೆ, ಬಿದರಗೋಡು ಸಮೀಪ ಬರುತ್ತಿದ್ದ ಬೈಕ್‌ ವೊಂದು ಪಿಕಪ್‌ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್‌ನಲ್ಲಿದ್ದ ಸವಾರ ಅಲ್ಲಿಯೇ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಇದೇ ವೇಳೆ ಪಿಕಪ್‌ ವಾಹನದ ಚಾಲಕನ ಕಂಟ್ರೋಲ್‌ ತಪ್ಪಿದ ಪಿಕಪ್‌ ರಸ್ತೆ ಪಕ್ಕದ ಗುಂಡಿಗೆ ಉರುಳಿದೆ. ಈ ವೇಳೆ ಪಿಕಪ್‌ನಲ್ಲಿ ಹಿಂದೆ ಕುಳಿತಿದ್ದ ಕೇರಳದ ಮೂಲಕ ಯುವಕ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. 

ಆಗುಂಬೆ ಪೊಲೀಸ್‌ ಠಾಣೆ  (Agumbe Police Station)

ಇನ್ನೂ ಪಿಕಪ್‌ ಚಾಲಕ ಘಟನೆ ಬೆನ್ನಲ್ಲೆ ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ. ಬೈಕ್‌ ಚಾಲಕನನ್ನ ಅಗಸರಕೋಟೆ ಶರತ್‌ ಎಂದು ಗುರುತಿಸಲಾಗಿದೆ.  ಮೃತ ಇನ್ನೊಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆತನನ್ನ ಕೇರಳ ಮೂಲದವನು ಎನ್ನಲಾಗಿದೆ. ಸ್ಥಳಕ್ಕೆ ಆಗುಂಬೆ ಪೊಲೀಸ್‌ ಠಾಣೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿ, ಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

Share This Article