Karnataka election/ 117 ಅಧಿಕಾರಿಗಳಿಗೆ ನೋಟಿಸ್​ ಜಾರಿ ಮಾಡಿದ ಶಿವಮೊಗ್ಗ ಜಿಲ್ಲಾಧಿಕಾರಿ! ಕಾರಣ? ಜಾಗೃತಿ ಅಭಿಯಾನಕ್ಕೆ ಎಲ್ಲರ ಸಹಕಾರ!

Malenadu Today

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ-2023 

ಚುನಾವಣಾ ತರಬೇತಿಗೆ ಗೈರಾದ ಅಧಿಕಾರಿಗಳಿಗೆ ಡಿಸಿ ನೋಟಿಸ್ 

ವಿಧಾನಸಭಾ ಚುನಾವಣೆ 2023 ಕ್ಕೆ (karnataka election 2023) ಸಂಬಂಧಿಸಿದಂತೆ ದಿನಾಂಕ ೧೬/೪/೨೦೨೩ ರಂದು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪಿಆರ್ ಓ ಮತ್ತು ಎಪಿಆರ್ ಓ ಅಧಿಕಾರಿಗಳಿಗೆ ತರಬೇತಿಯನ್ನು ಆಯೋಜಿಸಲಾಗಿತ್ತು. Iಈ  ತರಬೇತಿಗೆ ಗೈರು ಹಾಜರಾದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್ ನೋಟಿಸ್‌ ಜಾರಿ ಮಾಡಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 11, ಭದ್ರಾವತಿ 21, ಶಿವಮೊಗ್ಗ ನಗರ 35, ತೀರ್ಥಹಳ್ಳಿ 9, ಶಿಕಾರಿಪುರ 7, ಸೊರಬ 5, ಸಾಗರ 29 ಒಟ್ಟು 117 ಅಧಿಕಾರಿಗಳು ಗೈರಾಗಿದ್ದು, ನೋಟಿಸ್ ಜಾರಿ ಮಾಡಲಾಗಿದೆ.

Malenadu Today

Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

ಮೃತ ವ್ಯಕ್ತಿಯ ವಾರಸ್ಸುದಾರರ ಪತ್ತೆಗೆ ಸಹಕರಿಸಲು ಮನವಿ

ದಿನಾಂಕ: 24-09-2021 ರಂದು ಸುಮಾರು 40-45 ವರ್ಷ ವಯಸ್ಸಿನ ಅಪರಿಚಿತ ಗಂಡಸ್ಸನ್ನು ಚಿಕಿತ್ಸೆಗೆಂದು ಮೆಗ್ಗಾನ್ ಆಸ್ಪತ್ರೆಗೆ ಜನರೇ  ದಾಖಲಿಸಿದ್ದು, ಆತ  ಚಿಕಿತ್ಸೆ ಫಲಕಾರಿಯಾಗದೆ ದಿ:14/04/2023 ರಂದು ಮೃತ ಪಟ್ಟಿದ್ದಾನೆ. ಆತನ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಮೃತನು ಸುಮಾರು 6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲು ಮುಖ, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು ಮಿಶ್ರಿತ ಬಿಳಿ ಕೂದಲು ಬಿಟ್ಟಿರುತ್ತಾನೆ.

     ಈತನ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ (shivamogga dodapete police station)ದೂ.ಸಂ.: 08182-261414 / 9611761255 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

Malenadu Today

ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ

ಮತದಾನ ಒಂದು ವರದಾನ.., ಸಾಕು ಜಾತಿ ಮತ ಹಾಕಿ ಒಂದು ಮತ.. ನಿಮ್ಮ ಬೆರಳಿಗೆ ಇಂಕು, ಪ್ರಜಾಪ್ರಭುತ್ವಕ್ಕೆ ಲಿಂಕು, ಮತದಾನ ನಮ್ಮೆಲ್ಲರ ಹಕ್ಕು, ನೀವು ಹಾಕುವುದು ಒಂದೇ ಒಂದು ಮತ ಅದರ ಹಿಂದೆ ಅಡಗಿದೆ ದೇಶದ ಹಿತ, ಕಳಬೇಡ, ಕೊಲಬೇಡ ಮತದಾನ ಮಾಡುವುದು ಮರಿಯಬೇಡ.. ಎಂಬಿತ್ಯಾದಿ ಫಲಕಗಳನ್ನು ಹಿಡಿದು, ಘೋಷಣೆ ಕೂಗುತ್ತಾ ಜಿಲ್ಲಾಡಳಿತ ಕಚೇರಿ ಆವರಣದಿಂದ ಸಾಗಿ ನಗರದಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಶಿಕ್ಷಣ ಸಮಿತಿ, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಇವರ ಸಹಯೋಗದಲ್ಲಿ ಇಂದು ಜಿಲ್ಲಾಡಳಿತ ಕಚೇರಿ ಆವರಣದಿಂದ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಉದ್ಘಾಟಿಸಿದರು.

Malenadu Today

    ಈ ವೇಳೆ ಅವರು ಮಾತನಾಡಿ, ಮತದಾನ ನಮ್ಮೆಲ್ಲರ ಹಕ್ಕು. ನಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡಬೇಕು. ಈ ಹಿಂದೆ ಇಲ್ಲಿ ಶೇ.60 ರಷ್ಟು ಮಾತ್ರ ಮತದಾನವಾಗಿದ್ದು, ಈ ಪ್ರಮಾಣ ಹೆಚ್ಚಬೇಕು. ಮತದಾನ ಪ್ರಮಾಣ ಹೆಚ್ಚುನ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳಾದ ನೀವು ಮತದಾನದ ಮಹತ್ವವನ್ನು ಅರಿತು ಇತರರಿಗೂ ತಿಳಿಸಿ, ಮತದಾನ ಮಾಡಲು ಪ್ರೇರೇಪಿಸಬೇಕೆಂದರು.

ಜಿಲ್ಲಾ ಪಂಚಾಯಿತಿ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಮಾತನಾಡಿ, ಮತದಾನದ ಮಹತ್ವ ತಿಳಿಸಲು ಈ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಎಲ್ಲರಲ್ಲಿ ಮತದಾನದ ಕುರಿತು ಅರಿವು ಮೂಡಿಸಬೇಕು. ಅರ್ಹರೆಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದರು.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೀರಭದ್ರಪ್ಪ, ಕುವೆಂಪು ವಿವಿ ರಾ.ಸೇ.ಯೋ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಧು ಜಿ, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಚಿದಾನಂದ ಎನ್.ಕೆ, ಸ್ವೀಪ್ ಉಪ ನೋಡಲ್ ಅಧಿಕಾರಿ ನವೀದ್ ಪರ್ವೀಜ್ ಹಾಜರಿದ್ದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಅಧಿಕಾರಿಗಳು/ಸಿಬ್ಬಂದಿಗಳು ಮತದಾನ ಜಾಗೃತಿ ಜಾಥಾದಲ್ಲಿ ಸಾಗಿದರು.

 

Read / #siddaramaiah #rcbfan ಸಿದ್ದರಾಮಯ್ಯ/ ಮ್ಯಾಚ್​ ನೋಡಿ ಬಂದ ವಿಪಕ್ಷ ನಾಯಕ ಈ ಸಲ ಕಪ್​ ಯಾರದ್ದು ಅಂದ್ರು ನೋಡಿ!

ಇದನ್ನು ಸಹ ಓದಿ

Read /BREAKING /  ಅಭ್ಯರ್ಥಿ ಕುತೂಹಲದ ನಡುವೆ ಶಿವಮೊಗ್ಗ ಕ್ಕೆ ಬಂದ ಬಿಎಸ್​ವೈ !   ಘೋಷಣೆಯಾಗುತ್ತಾ ಹೆಸರು!  ಹೆಲಿಪ್ಯಾಡ್​ಗೆ  ನೀತಿ ಸಂಹಿತೆಯ ಅಧಿಕಾರಿಗಳ  ಎಂಟ್ರಿ! ಕಾರಣ? 

Read /election interesting news/ ಜೋಡೆತ್ತಿನ ಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ

Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

Read / ಶಿವಮೊಗ್ಗ ಬಿಜೆಪಿ ಟಿಕೆಟ್​! ಬರ್ತಿದೆ…ಬರ್ತಿದೆ..ಬರ್ತಿದೆ! ರೋಚಕ ಟ್ವಿಸ್ಟ್​ ಗೆ ಸಾಕ್ಷಿಯಾಗುತ್ತಾ ಕ್ಷೇತ್ರ! ಜೆಡಿಎಸ್​ ಟಿಕೆಟ್​ಗೆ​ ಇಬ್ಬಿಬ್ಬರ ಟವಲ್​! ಬರ್ತಾರಾ ಜೆಪಿ ನಡ್ಡಾ? 

Read / ಪತ್ನಿಗೆ ಸಾಲ, ಅಣ್ಣನಿಂದ ಲೋನ್/ ಸ್ವಂತ ಕಾರು ಹೊಂದಿಲ್ಲದ ಬಿ.ವೈ.ವಿಜಯೇಂದ್ರರ ಆಸ್ತಿ ಎಷ್ಟು ಗೊತ್ತಾ? 

Read / #siddaramaiah #rcbfan ಸಿದ್ದರಾಮಯ್ಯ/ ಮ್ಯಾಚ್​ ನೋಡಿ ಬಂದ ವಿಪಕ್ಷ ನಾಯಕ ಈ ಸಲ ಕಪ್​ ಯಾರದ್ದು ಅಂದ್ರು ನೋಡಿ!

Read/ Shivamogga bjp ticket/ಶಿವಮೊಗ್ಗ ಬಿಜೆಪಿ ಟಿಕೆಟ್​  ಅವರ್​ ಬಿಟ್ಟು ಇವರ್​ ಬಿಟ್ಟು ಇವರಿಗಾ? ಕತೂಹಲ ಮೂಡಿಸುತ್ತಿದೆ  ಕೆ.ಎಸ್​.ಈಶ್ವರಪ್ಪರವರ ನಡೆ!

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News  #karnatakaassemblyelection2023  #KarnatakaPolitics #KarnatakaLatestnews #Karanataka #election2023 #karnatakaelections2023 #BJPGovernment #bjpkarnatakanews #bjpvscongress #BYVijayendra #BasavarajBommai #Lakshmansavadi #JagadishShettar #Modi #AmitShah #JPNadda

Share This Article