ಮೊಬೈಲ್ ಕಳೆದು ಹೋದರೆ ಹುಡುಕುವುದು ಈಗ ಸುಲಭ/ ಆದರೆ ಹೇಗೆ? ಫುಲ್​ ಡಿಟೇಲ್ ಇಲ್ಲಿದೆ ನೋಡಿ! ಇಲ್ಲಿ ನೀವು ಸೇಫ್! ಮೊಬೈಲ್​ ಸಹ ಸೇಫ್​

It is now easier to find if the mobile is lost/ But how? Check out the full detail here! Here you're safe! Mobile is also safe / ceir.gov.in Portal to Find Lost Mobile Phone: Registration/Complaint Form How to find lost or stolen phone through CEIR portal

ಮೊಬೈಲ್ ಕಳೆದು ಹೋದರೆ ಹುಡುಕುವುದು ಈಗ ಸುಲಭ/ ಆದರೆ ಹೇಗೆ? ಫುಲ್​ ಡಿಟೇಲ್ ಇಲ್ಲಿದೆ ನೋಡಿ! ಇಲ್ಲಿ  ನೀವು ಸೇಫ್! ಮೊಬೈಲ್​ ಸಹ ಸೇಫ್​
ಮೊಬೈಲ್ ಕಳೆದು ಹೋದರೆ ಹುಡುಕುವುದು ಈಗ ಸುಲಭ/ ಆದರೆ ಹೇಗೆ? ಫುಲ್​ ಡಿಟೇಲ್ ಇಲ್ಲಿದೆ ನೋಡಿ! ಇಲ್ಲಿ ನೀವು ಸೇಫ್! ಮೊಬೈಲ್​ ಸಹ ಸೇಫ್​

ಫೋನ್​ ಮಿಸ್ ಆಯ್ತಾ? ಎಲ್ಲಿಟ್ಟಿದ್ದೆ ಅಂತಾ ಗೊತ್ತಾಗ್ಲಿಲ್ವಾ? ಯಾರೋ ಎಗರಿಸಿದ್ರಾ? ಕಾಸ್ಟ್ಲಿ ಫೋನ್  ತಗೊಂಡಿನ್ನೂ ವಾರವೂ ಆಗಿರಲಿಲ್ವಾ? ಹೀಗೆಲ್ಲಾ ಯೋಚಿಸುವ ಸಂಗತಿ ಈಗೀಗ ಕಾಮನ್. ಏಕೆಂದರೆ, ಯಾವ ಮಾಯ್ಕದಲ್ಲಿ ಯಾರ ಫೋನನ್ನ ಯಾರು ಎಗರಿಸಿಕೊಂಡು ಓಡೋಗಿರುತ್ತಾರೋ ಗೊತ್ತಿಲ್ಲ. ಸೆಕ್ಯುರಿಟಿ ಬ್ರೀಚ್ ಮಾಡೋದಕ್ಕೆ ಆಗದಿರುವಂತಹ ಕಂಪನಿ ಮೊಬೈಲ್​ಗಳನ್ನು ಬಿಟ್ಟು ಉಳಿದ ಮೊಬೈಲ್​ಗಳನ್ನ ಕಳ್ಳರು ಟಾರ್ಗೆಟ್ ಮಾಡಿ ಕದ್ದು ಇನ್ನೆಲ್ಲೋ ಮಾರುತ್ತಾರೆ. ಸದ್ಯ ದೇಶದಲ್ಲಿ ನಡೆಯುತ್ತಿರುವ ಅತಿದೊಡ್ಡ ದಂಧೆಗಳಲ್ಲಿ ಈ ಮೊಬೈಲ್​ ಮಾರಾಟ ದಂಧೆ ಕೂಡ ಒಂದು

ಮೊಬೈಲ್ ಕಳೆದು ಹೋದರೇ ಕಂಡು ಹಿಡಿಯೋದು ಹೇಗೆ? 

ಕರ್ನಾಟಕದ ಮೊಬೈಲ್​ಗಳು ಉತ್ತರಭಾರತದ ಯಾವುದೋ ರಾಜ್ಯಗಳಲ್ಲಿ ಮಾರಾಟವಾಗುವಂತಹ ವ್ಯವಸ್ಥಿತ ಜಾಲಗಳು ಇಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಈ ಹಿಂದೆಯೇ ಸಾಕಷ್ಟು ಅನುಮಾನಗಳು ಮೂಡಿತ್ತು. ಮೇಲಾಗಿ ಮೊಬೈಲ್​ ಕಳೆದುಹೋಗಿದ್ದಕ್ಕೆಲ್ಲಾ  ಸೀರಿಯಸ್ ಕೇಸ್​ಗಳು ಆಗುತ್ತಿರಲಿಲ್ಲ. ಹೋಯ್ತಾ ಹೋಗಲಿ ಬಿಡಿ, ಏನ್ ಮಾಡೋಣ ಅನ್ನುವಂತಿತ್ತು. ಆದರೆ ಕೇಂದ್ರ ಸರ್ಕಾರಿ ಸಿಇಐಆರ್ ಪೋರ್ಟಲ್​  (Central Equipment Identity Register(CEIR)) ತಂದ ಮೇಲೆ ಮೊಬೈಲ್ ವಿಚಾರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. 

ಸಿಇಐಆರ್ ಪೋರ್ಟಲ್​ ಎಂದರೇ ಏನು? ಹೇಗೆ ಕೆಲಸ ಮಾಡುತ್ತೆ

ಕಳೆದುಹೋದ ಮತ್ತು ಕದ್ದ ಮೊಬೈಲ್ ಫೋನ್ ಗಳನ್ನು ಪತ್ತೆಹಚ್ಚಲು ದೂರಸಂಪರ್ಕ ಇಲಾಖೆ ಸಿಇಐಆರ್ ಪೋರ್ಟಲ್ (www.ceir.gov.in) ಅನ್ನು ಅನಾವರಣಗೊಳಿಸಿದೆ.  ಮುಂಬೈ ಮತ್ತು ದೆಹಲಿ- ಎನ್​ಸಿಆರ್​ನಲ್ಲಿ ಪ್ರಾಯೋಗಿಕ ಪರೀಕ್ಷೆ ಕಂಡಿದ್ದ ಈ ಪೋರ್ಟಲ್​ ಇದೀಗ ಇಡೀ ದೇಶಕ್ಕೆ ವಿಸ್ತರಣೆಯಾಗಿದೆ. ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಎಂಬುದು ಈ ಪೋರ್ಟಲ್​ನ ಪೂರ್ತಿ ಹೆಸರು. 

ಕೇಂದ್ರ ಸರ್ಕಾರ ಈ ಪೋರ್ಟಲ್​ ಮೂಲಕ ಕದ್ದ ಮೊಬೈಲ್​ಗಳನ್ನು ಆನ್​ಲೈನ್ ಮೂಲಕವೇ ಬ್ಲ್ಯಾಕ್​ ಮಾಡಬಹುದು. ಇದು ಕಳ್ಳರಿಗೆ ತಮ್ಮ ಕಳ್ಳತನದ ಲಾಭ ಸಿಗದಂತೆ ಮಾಡುತ್ತದೆ. ಹಾಗೊಂದು ಕಳ್ಳ ಕದ್ದ ಮೊಬೈಲ್​ಗೆ ಬೇರೊಂದು ಸಿಮ್ ಹಾಕಿ ಆಕ್ಟಿವೇಷನ್ ಮಾಡಲು ಆರಂಭಿಸಿದೆ. ಆ ಮಾಹಿತಿ ಸಂಬಂಧ ಪಟ್ಟ ಪೊಲೀಸ್ ಸ್ಟೇಷನ್​ಗೆ ಹೋಗುತ್ತದೆ. ಇದು ಕಳ್ಳನ ಸೆರೆಗೂ ನೆರವಾಗುತ್ತದೆ. ಮುಖ್ಯವಾಗಿ ಈ ಪೋರ್ಟಲ್​ನ್ನು ನಿರ್ಮಿಸಿರುವ ಉದ್ದೇಶ ಕಳ್ಳರು ಮೊಬೈಲ್​ನಲ್ಲಿನ ಐಎಂಇಐ ನಂಬರ್​ನ್ನು ರಿಡಿಸೈನ್​ ಅಥವಾ ರಿಪ್ರೋಗ್ರಾಮಿಂಗ್​ ಮಾಡುತ್ತಿದ್ದಾರೆ. ಅದನ್ನ ತಡೆಯಲು ಕೇಂದ್ರ ಸರ್ಕಾರ, ಕಳ್ಳರನ್ನೆ ಬೇಟೆಯಾಡುವ ಪೋರ್ಟಲ್​ನ್ನ ಜಾರಿಗೆ ತಂದಿದೆ. 

ಇದರಿಂದಾಗಿ ಕದ್ದ ಮೊಬೈಲ್​ಗಳಿಗೆ ಸಿಮ್​ ನೆಟವರ್ಕ್​ಗಳು ಲಭ್ಯವಾಗುವುದಿಲ್ಲ, ಮೊಬೈಲ್ ಆಕ್ಟಿವೇಷನ್ ಆಗುತ್ತಲೇ ಅದರ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಇನ್ನೂ ಈ ಕ್ರಮದ ಮೂಲಕ ಜನರು ಸಹ ಅರ್ಧ ಕಾಸಿಗೆ ಕದ್ದ ಮೊಬೈಲ್​ಗಳನ್ನು ಖರೀದಿಸುವ ಕೆಲಸಕ್ಕೆ ಹೋಗುವುದಿಲ್ಲ. ಹೀಗೆ ಹಲವು ಉಪಯೋಗಳು ಈ ಪೋರ್ಟಲ್​ನಿಂದ ಮುಂದೆ ಮುಂದೆ ಆಗ್ತಾ ಇರುತ್ತದೆ. 

ಫೋನ್​ ಕಳೆದುಹೋದಾಗ ಏನು ಮಾಡಬೇಕು? 

ನೀವು ಫೋನ್ ಅನ್ನು ಕಳೆದುಕೊಂಡಿದ್ದರೆ, ಅಥವಾ ಯಾರಾದರೂ ಅದನ್ನು ನಿಮ್ಮಿಂದ ಕದ್ದಿದ್ದರೆ,  ಕಳೆದುಹೋದ ಫೋನ್ ಪತ್ತೆ ಹಚ್ಚಲು  ಮೊದಲನೆಯದಾಗಿ, ಪೊಲೀಸ್ ಠಾಣೆಗೆ ಹೋಗಿ ಎಫ್ಐಆರ್ ದಾಖಲಿಸಿ. ಅಥವಾ ಕೆಎಸ್​ಪಿ ಆ್ಯಪ್​ ಮೂಲಕ ಈ ಲಾಸ್ಟ್  ಮಾಹಿತಿ ನೀಡಿ ಫೋನ್  ಬ್ಲಾಕ್ ಮಾಡಿಸಿ

 ಸಹಾಯವಾಣಿ ಸಂಖ್ಯೆ 14422  ಫೋನ್ ಹಾಯಿಸಿ, ನಂಬರ್ ಬ್ಲಾಕ್ ಮಾಡಿಸಿಬಹುದು ಅಥವಾ ಸಹಾಯವಾಣಿಯ ಬದಲಿಗೆ ಟೆಲಿಕಾಂ ಇಲಾಖೆ ಆರಂಭಿಸಿರುವ  www.ceir.gov.in ವೆಬ್ಸೈಟ್ಗೆ ಲಾಗಿನ್ ಆಗಿ 

ಈ ವೆಬ್​ಸೈಟ್​ಗೆ ಲಾಗಿನ್ ಆಗುತ್ತಲೇ, ಅದರಲ್ಲಿ ಕೆಲವೊಂದು ವೆರಿಫಿಕೇಶನ್​ ನಡೆಯುತ್ತದೆ. ವೆರಿಪಿಕೇಶನ್​ ಮುಗಿದ ಬೆನ್ನಲ್ಲೆ  ನಿಮ್ಮಿಂದ ಕಳುವಾದ ಫೋನ್​ನ ಬಳಕೆಯು ಬಂದ್ ಆಗುತ್ತದೆ.  ಯಾವುದೇ ಸಿಮ್​ ನೆಟವರ್ಕ್​​ ಸೇವಾ ಪೂರೈಕೆದಾರರು ಮೊಬೈಲ್​ಗೆ ಸರ್ವೀಸ್ ನೀಡುವುದಿಲ್ಲ. 

ಕಳುವಾದ ಫೋನ್​ನನ್ನ ಆತ ಇನ್ಯಾರಿಗೋ ಮಾರಿದರೆ, ಖರೀದಿಸಿದವ ಮೊಬೈಲ್ ಆನ್ ಮಾಡಿ,  ಹೊಸ ಸಿಮ್ ಅನ್ನು ಸೇರಿಸಲು ಪ್ರಯತ್ನಿಸಿದರೆ, ಆ ಬಗ್ಗೆ ಪೊಲೀಸರಿಗೆ ತಕ್ಷಣವೇ ಮಾಹಿತಿ ರವಾನೆಯಾಗುತ್ತದೆ.

ಈ ಬಗ್ಗೆ ಪೊಲೀಸ್ ಇಲಾಖೆ ಚಿತ್ರಗಳ ಸಮೇತ ಫೋನ್​ ಬ್ಲ್ಯಾಕ್ ಮಾಡುವ ವಿಧಾನವನ್ನು ತಿಳಿಸಿದೆ ಅದರ ಚಿತ್ರ ಇಲ್ಲಿದೆ ನೋಡಿ 

ಸಿಇಐಆರ್​ ಪೋರ್ಟಲ್​ನಲ್ಲಿ  ವಿವರ ನಮೂದಿಸುವುದು ಹೇಗೆ? 

ಸಿಇಐಆರ್ ಪೋರ್ಟಲ್ ಗೆ ಲಾಗಿನ್ ಆದ ಬೆನ್ನಲ್ಲೆ, ಅದರಲ್ಲಿ ರಿಕ್ವೆಸ್ಟ್ ಪೇಜ್​ ಓಪನ್ ಆಗುತ್ತದೆ. ಆ ಪುಟದಲ್ಲಿ  ಮೊದಲು  ಮೊಬೈಲ್​ಗೆ ಸಂಬಂಧಿಸಿದ ಮಾಹಿತಿ ಅಂದರೆ, ಫೋನ್​ ನಂಬರ್, ಐಎಂಇಐ ನಂಬರ್​ ಹಾಗೂ ಡಿವೈಸ್​ನ ಬ್ರ್ಯಾಂಡ್​ ಬಗ್ಗೆ ಮಾಹಿತಿ ನೀಡಬೇಕು

ಆನಂತರ  ಕಳೆದುಹೋದ ಸ್ಥಳ / ದಿನಾಂಕ, ಪೊಲೀಸ್ ದೂರು ಸಂಖ್ಯೆ ಮುಂತಾದ ಕಳೆದುಹೋದ ಮಾಹಿತಿಯನ್ನು ನಮೂದಿಸಬೇಕು

ತದನಂತರ ಮೊಬೈಲ್ ಮಾಲೀಕರ ವೈಯಕ್ತಿಕ ಮಾಹಿತಿ ಅಂದರೆ ಹೆಸರು, ವಿಳಾಸ ಇತ್ಯಾದಿಗಳನ್ನ ನಮೂದಿಸಬೇಕು. 

ಇದಾದ ನಂತರ ವೆಬ್​ಪೇಜ್​ನ ಡಿಕ್ಲೇರೇಷನ್​ಗೆ ಅನುಮತಿ ಕೇಳುತ್ತದೆ ಅದನ್ನು ನೀಡಿ ಸಬ್​ಮಿಟ್ ಬಟನ್​ ಪ್ರೆಸ್​ ಮಾಡಬೇಕು 

ಇದಿಷ್ಟು ಮಾಹಿತಿ ಕೊಟ್ಟು ಸಬ್​ಮಿಟ್ ಕೊಟ್ಟನಂತರ ರಿಕ್ವೆಸ್ಟ್ ಐಡಿ ಬರುತ್ತದೆ. ಅದನ್ನು  ಆಗಾಗ ಪರಿಶೀಲಿಸಿದರೆ, ರಿಕ್ವೆಸ್ಟ್​ನ ಸ್ಟೇಟಸ್ ಏನಾಗುತ್ತಿದೆ ಎಂಬುದನ್ನ ತಿಳಿಯಬಹುದು. 

ಆನಂತರ ಪೊಲೀಸ್​ ಇಲಾಖೆಗೆ ಮೊಬೈಲ್​ ಮತ್ತೆ ಟ್ರ್ಯಾಕ್ ಆದಾಗ ಮೆಸೇಜ್ ರವಾನೆಯಾಗುತ್ತದೆ. ಪೊಲೀಸರು ಆ  ಸ್ಥಳಕ್ಕೆ ಹೋಗಿ ಕದ್ದ ಮೊಬೈಲ್​ನ್ನು ಸೀಜ್ ಮಾಡಿ ಅದರ ಮಾಲೀಕರಿಗೆ  ನೀಡುತ್ತಾರೆ. 

ಪುನಃ ಸಿಇಐಆರ್ ಪೋರ್ಟಲ್​ಗೆ ಹೋಗಿ, ಅನ್​ ಬ್ಲಾಕಿಂಗ್​ ಪ್ರೊಸಿಜರ್ ಮೂಲಕ ಮೊಬೈಲ್​ನ್ನು ಅನ್​ಬ್ಲ್ಯಾಕ್  ಮಾಡಿಕೊಳ್ಳಬಹುದು. 

ಮೊದಲು ಮೊಬೈಲ್​ ಕಳೆದುಹೋದರೆ, ಅದರ ಬಗ್ಗೆ ಬಹಳಷ್ಟು ಟೆನ್ಸನ್​ ಮಾಡಿಕೊಳ್ಳುವರಿದ್ದರು, ಆದರೆ ಈಗ ಮೊಬೈಲ್​ನಲ್ಲಿ ಡೇಟಾ ಹಾಗೂ ಖಾಸಗಿತನ ಲೀಕ್ ಆಗುವ ಭಯ ಬಹಳಷ್ಟು ಮಂದಿಯಲ್ಲಿದೆ. ಫೋನ್ ಲಾಕ್ ಆಗಿದ್ದರೆ, ಅದನ್ನು ಫ್ಲ್ಯಾಶ್ ಮಾಡಿಸುತ್ತಾರೆ ಎನ್ನುವ ಯೋಚನೆಯಿರುತ್ತದೆ. ಹಾಗಿದ್ದರೂ ಮೊಬೈಲ್​ ಡೇಟಾಗಳನ್ನೆ ಕದಿಯುವ ಸಾಪ್ಟ್​ವೇರ್​ಗಳು ಸಹ ಮಾರ್ಕೆಟ್​ನಲ್ಲಿ ಬಹಳಿಷ್ಟಿವೆ. ಹೀಗಾಗಿ ಮೊಬೈಲ್ ಕಳೆದುಕೊಳ್ಳುವುದು ಕೇವಲ ಸಣ್ಣ ಅಥವಾ ಹಣದ ವಿಷಯವಾಗಿ ಉಳಿದಿಲ್ಲ. ಅದು ಘಾತುಕ ಕೆಲಸಕ್ಕೂ ಬಳಕೆಯಾಗುವ ಅಪಾಯವಿರುತ್ತದೆ. ಹಾಗಾಗಿ ಮೊಬೈಲ್ ಗಳು ಕಳೆದುಹೋದ ತಕ್ಷಣವೇ ಪೊಲೀಸರಿಗೆ ಒಂದು ಕಂಪ್ಲೆಂಟ್ ಕೊಟ್ಟು ಸಿಇಐಆರ್​ ಪೋರ್ಟಲ್​ನಲ್ಲಿ ಮಾಹಿತಿ ಕೊಟ್ಟುಬಿಡಿ.. ಆಗ ನೀವು ಸೇಪ್ ನಿಮ್ಮ ಕಳುವಾದ ಮೊಬೈಲ್ ಸಹ ಸೇಫ್​.. 

Read/ ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್  ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ 



read/ ELECTION 2023 / ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​, ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/ ಧರ್ಮಸ್ಥಳ ದೇವರ ದುಡ್ಡು ಜಪ್ತಿ

 

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.

 

Read/ BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸರೆ? ಸಿಕ್ಕಿದ್ದೇಗೆ ಗೊತ್ತಾ

 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

 

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

 

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 



MALENADUTODAY.COM/ SHIVAMOGGA / KARNATAKA WEB NEWS


HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga ,ceir,ceir mobile tracker,ceir portal,ceir india,ceir stolen,ceir mobile lost,ceir helpline number,ceir stolen mobile tracking,ceir stolen mobile tracking portal,ceir mobile tracking portal,govt new ceir project,ceir study iq,ceir kym,ceir kya hai,what is ceir,ceir website,how to use ceir,ceir block imei,dot ceir project,ceir mobile block,ceir stolen portal,ceir website telugu,what is ceir in hindi, ಸಿಇಐಆರ್,ಸಿಇಆರ್ ವೆಬ್‌ಸೈಟ್,ಎಫ್.ಐ.ಆರ್ ಕಾಪಿ,ಮೊಬೈಲ್‌ ಕಳೆದರೆ ಸಿ.ಇ.ಐಆರ್‌ ಅಲ್ಲಿ ದೂರು ನೀಡಿ,ವಾರ್ತೆ,ಕರ್ನಾಟಕ,ಮೊಬೈಲ್ ಕಳೆದರೆ ಸಿ.ಐ.ಆರ್. ಅಲ್ಲಿ ದೂರು ನೀಡಿ,