AIRPORT ನಲ್ಲಿ ಹಗರಣ! ತನಿಖೆಗೆ ಪಟ್ಟು/ ವಿಮಾನ ನಿಲ್ದಾಣದಲ್ಲಿ ವಿಶೇಷ ಕಾರ್ಯಕ್ರಮ/ ಅಧಿಕಾರಿಗಳಿಗೆ ಆರಗ ಶಾಕ್​/ ಶಿವಮೊಗ್ಗ MLA ಯನ್ನ ಭೇಟಿಯಾದ ದೊಡ್ಡಣ್ಣ

Malenadu Today

KARNATAKA NEWS/ ONLINE / Malenadu today/ Aug 1, 2023 SHIVAMOGGA NEWS

ಶಿವಮೊಗ್ಗದ ವಿದ್ಯಾನಗರದಲ್ಲಿ ನಾಯಿಗಳ ಕಾಟ

ಶಿವಮೊಗ್ಗದ ವಿದ್ಯಾನಗರದ ಜಗದಾಂಬಾ ಬೀದಿ ಸುತ್ತಮುತ್ತ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಈ ಸಂಬಂಧ ಮಹಾನಗರ ಪಾಲಿಕೆಗೆ ಸಾಕಷ್ಟು ಭಾರಿ ಸ್ಥಳೀಯರಿಗೆ ದೂರು ನೀಡಿದ್ದಾರೆ. ಆದಾಗ್ಯು ನಾಯಿಗಳನ್ನು ನಿಯಂತ್ರಿಸುವ ಸಂಬಂಧ ಕ್ರಮಕೈಗೊಂಡಿಲ್ಲ. ಎರಡು ದಿನಗಳ ಹಿಂದೆ ಮಗುವೊಂದಕ್ಕೆ ನಾಯಿಯೊಂದು ಕಚ್ಚಿರುವ ಘಟನೆ ಸಹ ನಡೆದಿದ್ದು, ಈ ಸಂಬಂಧ ಎಚ್ಚೆತ್ತುಕೊಳ್ಳದಿದ್ದರೇ ಇನ್ನಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.   ‘

ಏರ್​ಪೋರ್ಟ್​ ಹಗರಣದ ತನಿಖೆಗೆ ಆಗ್ರಹ

ಶಿವಮೊಗ್ಗ ಏರ್ ಪೋರ್ಟ್ ನಿರ್ಮಾಣದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದೆ. ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ಹಗರಣ ನಡೆದಿದೆ. ಈ ಹಿನ್ನೆಲೆಯಲ್ಲಿ   ಈ ಹಿನ್ನಲೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಬಾಕಿ ಇರುವ ಬಿಲ್ ತಡೆ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಈ ಸಂಬಂಧ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.  

ಅಧಿಕಾರಿಗಳಿಗೆ ಶಾಕ್ ಕೊಟ್ಟ ಆರಗ

ಮಾಜಿ ಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿ ತಾಲೂಕು ಕಚೇರಿಗೆ ದಿಢೀರ್‌ ಭೇಟಿ (Sudden Visit) ನೀಡಿ ಪರಿಶೀಲನೆ ನಡೆಸಿದ್ದಾರೆ.. ಈ ವೇಳೆ ಅಧಿಕಾರಿಗಳ ಕುರ್ಚಿಗಳು ಖಾಲಿ ಇದ್ದಿದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ವಿವಿಧ ಸೆಕ್ಷನ್‌ಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಇಲ್ಲದಿರುವುದನ್ನು ಕಂಡು ಸಿಟ್ಟಾದರು. ಇನ್ನೂ ಈ ಸಂಬಂಧ ಮೇಲಾಧಿಕಾರಿಗಳನ್ನು ವಿಚಾರಿಸಿದ ಆರಗ ಜ್ಞಾನೇಂದ್ರರವರಿಗೆ ಸಿಬ್ಬಂದಿ ಕೊರತೆ ಇರುವ ವಿಚಾರ ತಿಳಿದುಬಂತು. ತಕ್ಷಣವೇ ಅವರು ಬೇರೆ ಕಡೆಗಳಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳನ್ನ ವಾಪಸ್ ಕರೆಸುವಂತೆ ಸೂಚಿಸಿದ್ರು 

ವಿಮಾನ ನಿಲ್ದಾಣದಲ್ಲಿ Aviation Security Culture Week ಕಾರ್ಯಕ್ರಮ

Aviation Security Culture Week ಅಂಗವಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಿನ್ನೆಯಿಂದ ಜಾಗೃತಿ ಕಾರ್ಯಕ್ರಮವೊಂದು ಆರಂಭವಾಗಿದೆ. ಈ ಕಾರ್ಯಕ್ರಮ ಇದೇ ಆಗಸ್ಟ್ 5 ವರೆಗೂ ನಡೆಯಲಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಕೈಗೊಂಡಿರುವ ಈ ಅಭಿಯಾನದಲ್ಲಿ ಶಿವಮೊಗ್ಗ ಏರ್​ಪೋರ್ಟ್​ನಲ್ಲಿರುವ ಸಿಬ್ಬಂದಿ ಪಾಲ್ಗೊಂಡರು. 

Malenadu Today

ಶಿವಮೊಗ್ಗ ಶಾಸಕರನ್ನ ಭೇಟಿಯಾದ ದೊಡ್ಡಣ್ಣ

ಖ್ಯಾತ ಚಲನಚಿತ್ರ ನಟ ದೊಡ್ಡಣ್ಣ  ನಿನ್ನೆ ಶಿವಮೊಗ್ಗ ನಗರ ಶಾಸಕ ಎಸ್​ಎನ್​ ಚನ್ನಬಸಪ್ಪರವರನ್ನ ಭೇಟಿಯಾದರು. ವಿ.ಐ.ಎಸ್.ಎಲ್ ಶತಮಾನೋತ್ಸವ ಸಮಿತಿಯ ಅಧ್ಯಕ್ಷರು ಸಹ ಆದ ದೊಡ್ಡಣ್ಣ,  ವಿಐಎಸ್ಎಲ್ ಕಾರ್ಖಾನೆಯ ಶತಮಾನೋತ್ಸವದ ಕಾರ್ಯಕ್ರಮಕ್ಕೆ ಶಿವಮೊಗ್ಗ ಶಾಸಕರಿಗೆ ಆಹ್ವಾನ ನೀಡಿದ್ರು. ಈ ವೇಳೆ ಇಬ್ಬರು ಸಹ ಕೆಲಕಾಲ ಮಾತುಕತೆ ನಡೆಸಿದ್ರು. 

ಇನ್ನಷ್ಟು ಸುದ್ದಿಗಳು

Malenadu Today

 ​ 

 

 

Share This Article