ನಿತ್ಯ ಅನ್ನ ಬಡಿಸುತ್ತಿದ್ದ ಕೈಗೆ ಸತ್ಕಾರ! ಸಿಬ್ಬಂದಿಗೆ ಸಿಹಿಯೂಟದ ಸವಿನೆನಪು ಬಡಿಸಿದ ಮಹಾನಗರ ಪಾಲಿಕೆ ಆಯುಕ್ತ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Aug 1, 2023 SHIVAMOGGA NEWS  

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಎಸಿ ಪಲ್ಲವಿಯವರು ತಮ್ಮ ಕಚೇರಿಯ ಸಿಬ್ದಂದಿಯ ನಿವೃತ್ತಿಯ ದಿನದಂದು ಅವರನ್ನ ಮನೆಯವರೂ ಸರ್ಕಾರಿ ಕಾರಿನಲ್ಲಿ ಬಿಟ್ಟು ಬಿಳ್ಕೊಡುಗೆ ನೀಡಿದ್ದರು. ಸಾಗರ ಎಸಿಯವರ ನಡೆಗೆ ಶ್ಲಾಘನೆ ವ್ಯಕ್ತವಾಗಿತ್ತು. ಅದೇ ರೀತಿಯ ಸನ್ನಿವೇಶ ಶಿವಮೊಗ್ಗದ ಮಹಾ ನಗರ ಪಾಲಿಕೆಯಲ್ಲಿ ನಡೆದಿದ್ದರ ಬಗ್ಗೆ ವರದಿಯಾಗಿದೆ. 

ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸಹಾಯಕವಾಗಿ ಅವರ ಆಪ್ತ ಶಾಖೆ ಕೆಲಸ ನಿರ್ವಹಿಸುತ್ತದೆ. ಹೀಗೆ ನಿರ್ವಹಿಸುವ ಆಪ್ತ ಶಾಖೆಯ ಸಿಬ್ಬಂದಿಗಳಲ್ಲಿ ಪೈಕಿ ಕರಿಯಣ್ಣರವರು, ಆಯುಕ್ತರಿಗೆ ನಿತ್ಯ ಊಟದ ವ್ಯವಸ್ಥೆ ಮಾಡುತ್ತಿದ್ರು. ನಿನ್ನೆ ಅವರ ವೃತ್ತಿ ಜೀವನದ ಕೊನೆ ಕೆಲಸದ ದಿನವಾಗಿತ್ತು. ವೃತ್ತಿ ಬದುಕಿನ ಕಡೆ ದಿನದಲ್ಲಿಯು ಆಯುಕ್ತರಿಗೆ ಊಟ ಬಡಿಸುವ ಸಿದ್ದತೆಯಲ್ಲಿದ್ದ ಅವರನ್ನು ಆಯುಕ್ತ ಮಾಯಣ್ಣ ಗೌಡರು ಕರಿಯಣ್ಣರವರನ್ನ ಬರ ಹೇಳಿದ್ದಾರೆ. ಅವರ ಕರೆ ಯಾವುದೋ ಕೆಲಸ ಹೇಳುವ ಸಲುವಾಗಿ ಆಗಿರಲಿಲ್ಲ. ಬದಲಾಗಿ ಕರಿಯಣ್ಣರವರನ್ನ ಮಾಯಣ್ಣಗೌಡರು ಬನ್ನಿ ಊಟಕ್ಕೆ ಎಂದು ಕರೆದಿದ್ದರು. ಇದು ಕರಿಯಣ್ಣರಿಗೆ ಅಚ್ಚರಿ ಹಾಗೂ ಕಸಿವಿಸಿಯನ್ನ ತಂದಿಟ್ಟಿತ್ತು. ಅವರ ಗೊಂದಲ ನಿವಾರಿಸಿದ ಆಯುಕ್ತರು, ಕರಿಯಣ್ಣರನ್ನ ಬರಮಾಡಿಕೊಂಡು ಕುರ್ಚಿಯಲ್ಲಿ ಕೂರಿಸಿ, ಅದಾಗಲೇ ತರಿಸಿದ್ದ ಸಿಹಿಯೂಟವನ್ನು ಖುದ್ದು ಬಡಿಸಿದ್ದಾರೆ. ನಿತ್ಯ ತಮಗೆ ಊಟ ಬಡಿಸುತ್ತಿದ್ರಿ, ಇವತ್ತು ನಿಮ್ಮ ವೃತ್ತಿ ಜೀವನದ ಕೊನೆ ದಿನ ನಾನು ಬಡಿಸುತ್ತಿದ್ದೇನೆ..ಕೇಳಿ ಹಾಕಿಸಿಕೊಳ್ಳಿ, ಇನ್ನೂ ಸ್ವಲ್ಪ ಹಾಕಲೇ ಎಂದು ಆಯುಕ್ತರು ಬಡಿಸುತ್ತಿದ್ದರು. ಕರಿಯಣ್ಣರವರು ಸಾರ್ಥಕ ಸೇವೆಯ ಅಂಚಿನಲ್ಲಿ ಮನಸ್ಸು ಭಾರವಾಗಿಸಿಕೊಂಡಿದ್ದರು. ಈ ದೃಶ್ಯಕ್ಕೆ ಮಹಾನಗರ ಪಾಲಿಕೆ ಸಾಕ್ಷಿಯಾಗಿತ್ತು. 

ಇನ್ನಷ್ಟು ಸುದ್ದಿಗಳು

Malenadu Today Shivamogga

 ​ 

 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor