ಬಿಜೆಪಿ ಗೋ ಸಂರಕ್ಷಣೆ ಮಾಡುತ್ತಿಲ್ಲವೆಂದು ಕಾಂಗ್ರೆಸ್​ನಿಂದ ಗೋಪೂಜೆ! ಅಡುಗೆ ಅನಿಲ ದರ ಹೆಚ್ಚಾಗಿದ್ದಕ್ಕೆ ಕೈ ಪಡೆಯಿಂದ ಸೌದೆ ಪ್ರತಿಭಟನೆ!

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಕಾಂಗ್ರೆಸ್​ ಇವತ್ತು ಬಿಜೆಪಿ ಸರ್ಕಾರದ ವಿರುದ್ಧ ಎರಡು ಪ್ರತಿಭಟನೆಗಳನ್ನು ನಡೆಸಿದೆ. ಮುಖ್ಯವಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಕಾಂಗ್ರೆಸ್​ ಸದಸ್ಯರು, ಬಿಜೆಪಿಯ ‘ಗೋ ಸಂರಕ್ಷಣೆ ವಿರೋಧಿ ಧೋರಣೆಗೆ ಖಂಡಿಸಿ ಪ್ರತಿಭಟಿಸಿದರು. 

ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ಯಾ? ಶಿವಮೊಗ್ಗ ಮಹಾನಗರ ಪಾಲಿಕೆ ಕೈಗೊಳ್ಳುತ್ತಿದೆ ಕ್ರಮ! ಏನದು ? ವಿವರ ಇಲ್ಲಿದೆ ಓದಿ

ಮಹಾನಗರ ಪಾಲಿಕೆ ಮುಂಭಾಗ ಗೋಪೂಜೆ ಮಾಡುವ ಮೂಲಕ  ಪ್ರತಿಭಟನೆ ನಡೆಸಿದ ಕಾಂಗ್ರೆಸ್​ ಸದಸ್ಯರು 2019ರಲ್ಲಿ ಗೋ ಸಂರಕ್ಷಣೆ ಮಾಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ. 2019 ರಿಂದ 2023ರ ಆಯವ್ಯಯದಲ್ಲಿ ಗೋ ಸಂರಕ್ಷಣೆಗೆ 50 ಲಕ್ಷ ರೂಪಾಯಿ ಅನುದಾನ ಘೋಷಣೆ ಮಾಡಿದೆ, ಆದರೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ರು. ಈ ಮೂಲಕ.ಗೋಮಾತೆಗೆ ಬಿಜೆಪಿ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಕಾರ್ಪೊರೇಟರ್​ಗಳು ದೂರಿದ್ದಾರೆ.  

READ | BREAKING NEWS : ಬದುಕಿರುವ ಮಹಿಳೆಯನ್ನ ಸತ್ತಿದ್ದಾಳೆ ಎಂದು ವಂಶವೃಕ್ಷ ಸೃಷ್ಟಿ! ಫೋರ್ಜರಿ ಹಾಗೂ ಆಸ್ತಿ ಕಬಳಿಸಿದ ಆರೋಪಕ್ಕೆ ತೀರ್ಥಹಳ್ಳಿ ಕೋರ್ಟ್​ ನೀಡಿತು ಗಂಭೀರ ಶಿಕ್ಷೆ ! ವಿವರ ಇಲ್ಲಿದೆ ಓದಿ

ಇನ್ನೊಂದೆಡೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ ಕೇಂದ್ರ ಸರ್ಕಾರ ಅಡುಗೆ ಅನಿಲದ ಬೆಲೆಯನ್ನು ಏರಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದೆ. ಇವತ್ತು ಮಹಾವೀರ ಸರ್ಕಲ್​ ನಲ್ಲಿಯೇ ಕುಳಿತು ಧರಣಿ ನಡೆಸಿದ ಕಾರ್ಯಕರ್ತರು, ಖಾಲಿ ಸಿಲಿಂಡರ್​ ಪ್ರದರ್ಶಿಸಿದ್ರು. ಅಲ್ಲದೇ ಸೌದೆ ಹಿಡಿದು ಘೋಷಣೆ ಕೂಗಿದರು. ಇನ್ನೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧವೂ ದಿಕ್ಕಾರ ಕೇಳಿಬಂತು. 

READ | shivamogga police | ಮೂತ್ರ ವಿಸರ್ಜನೆಗೆ ಅಂತಾ ಹೊರವಲಯಗಳಲ್ಲಿ ಬೈಕ್, ಕಾರು ನಿಲ್ಲಿಸಬೇಡಿ! ಜನವಿರದ ಕಡೆಯಲ್ಲಿ ನಡೆಯುತ್ತಿದೆ ದರೋಡೆ! ದಾಖಲಾಯ್ತು ಮತ್ತೊಂದು ಕೇಸ್

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #shivamoggaairport

 

Leave a Comment