#KiviMeleHoovu ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷರಿಂದ ಕಿವಿ ಮೇಲೆ ಹೂವಿಟ್ಟುಕೊಂಡು ಪ್ರೆಸ್​ಮೀಟ್​ !

 #KiviMeleHoovu ಕಿವಿ ಮೇಲೆ ಹೂವು ಇಟ್ಟುಕೊಂಡು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಇವತ್ತು ಸುದ್ದಿಗೋಷ್ಟಿ ನಡೆಸಿದ್ರು, ರಾಜ್ಯ ಸರ್ಕಾರದ ಬಜೆಟ್​ನ ಬಗ್ಗೆ ಮಾತನಾಡಿದ ಅವರು,  ರಾಜ್ಯ ಸರ್ಕಾರದ ಬಜೆಟ್ ನಿಂದ ಭ್ರಮನಿರಸನವಾಗಿದೆ. ಇದು ಮತದಾರರ ಕಿವಿ ಮೇಲೆ ಹೂ ಇಡುವ ಕೆಲಸವಾಗಿದೆ ಎಂದರು

ಕಳೆದ ವರ್ಷದ ಬಜೆಟ್ ಘೋಷಣೆಯೇ ಇನ್ನೂ ಸಹ ಸಾಕಾರವಾಗಿಲ್ಲ, ಇದರ ನಡುವೆ ಮತ್ತೆ  ಹಳೆಯ ಬಜೆಟ್ ಪುನರ್ ಘೋಷಣೆ ಮಾಡಿದ್ದಾರೆ, ಇದು  ಬೋಗಸ್, ದುರ್ಬಲ ಬಜೆಟ್ ಆಗಿದೆ. ಇದುವರೆಗೂ  ಕಳೆದ ನಾಲ್ಕು ಬಜೆಟ್ನಲ್ಲಿ ಕೊಟ್ಟಂತ ಯಾವ ಭರವಸೆಯೂ ಈಡೇರಿಲ್ಲ. ಕಳೆದ ಬಜೆಟ್​ನಲ್ಲಿ​  2,65,000  ಕೋಟಿಯ ಘೋಷಣೆ ಆಗಿತ್ತು. ಆ ಪೈಕಿ  ಐವತ್ತು ಭರವಸೆಗಳು ಸಹ ಈಡೇರಿಲ್ಲ ಎಂದು ವ್ಯಂಗ್ಯವಾಡಿದ್ರು.   

Malenadu Todayಲಾಡ್ಜ್​ &ರೆಸಾರ್ಟ್​ ಅತಿಥಿಗಳ ಮೇಲೆ ಶಿವಮೊಗ್ಗ ಪೊಲೀಸರ ಕಣ್ಣು! 15 ದಿನದ ಮಾಹಿತಿ ಪರಿಶೀಲನೆ, ಮಾಲೀಕರಿಗೆ ನಾಲ್ಕು ಸೂಚನೆ

ಇನ್ನೂ ಇದೇವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಅಶ್ವಥ್ ನಾರಾಯಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಂದರೇಶ್, ಅವರ ಮಾತು  ಬಿಜೆಪಿಯ ಸಂಸ್ಕಾರವನ್ನು ತೋರಿಸುತ್ತದೆ ಎಂದರು , ಅವರ ಹೇಳಿಕೆಯನ್ನು ಕಾಂಗ್ರೆಸ್​ ಖಂಡಿಸುತ್ತೇವೆ  ಎಂದು ಜಿಲ್ಲಾಧ್ಯಕ್ಷ  ಅಶ್ವಥ್​ ನಾರಾಯಣ ಅವರ ರಾಜೀನಾಮೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಅಶ್ವಥ್ ನಾರಾಯಣ್ ವಿರುದ್ಧ ಕೇಸ್ ದಾಖಲಾಗಬೇಕು ಎಂದರು.ಇನ್ನೂ ಐಎಎಸ್ ಅಧಿಕಾರಿಗಳು ವೈಯಕ್ತಿಕ ವಿಷಯದಲ್ಲಿ ಬೀದಿ ರಂಪಾಟ ಮಾಡುತ್ತಿದ್ದಾರೆ ಎಂದ ಸುಂದರೇಶ್​,  ಅಧಿಕಾರಿಗಳನ್ನು ಕಂಟ್ರೋಲ್ ಮಾಡಲು ಈ ಸರ್ಕಾರಕ್ಕೆ ಆಗುತ್ತಿಲ್ಲ,  ರಾಜ್ಯದ ಜನತೆಗೆ ಈ ಸರ್ಕಾರ ಯಾವ ಸಂದೇಶ ಕೊಡುತ್ತಿದೆ ಎಂದು ಪ್ರಶ್ನಿಸಿದ್ರು. 

ಸಕ್ರೆಬೈಲ್​ ಬಿಡಾರಕ್ಕೆ ಬಂದ ಕಾಡಾನೆ! ಶೆಟ್ಟಿಹಳ್ಳಿ ಕಾಡಲ್ಲಿ ಸಲಗದ ಅಬ್ಬರ ಮೂಡಿಸುತ್ತಿದೆ ಆತಂಕ! ಕಾರಣವೇನುಗೊತ್ತಾ? VIDEO REPORT

ವಿಮಾನ ನಿಲ್ದಾಣ ಉದ್ಘಾಟನೆ ವಿಚಾರದ ಬಗ್ಗೆ ಮಾತನಾಡಿದ ಅವರು, ವಿಮಾನ ನಿಲ್ದಾಣದ  ಸಂತ್ರಸ್ತರಿಗೆ ಈವರೆಗೆ ನಿವೇಶನ ಕೊಟ್ಟಿಲ್ಲ, ಅವರಿಗೆ ಪರಿಹಾರ ಕೊಟ್ಟು ವಿಮಾನ ನಿಲ್ದಾಣ ಉದ್ಘಾಟಿಸಲಿ ಎಂದರು. ಅಲ್ಲದೆ,  ಬಿಜೆಪಿ ಆಡಳಿತ ವ್ಯವಸ್ಥೆಯನ್ನು ದುರುಪಯೋಗ ಮಾಡುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದರು, ಈ ಕಾರಣಕ್ಕಾಗಿ ಹಲವಾರು ವರ್ಷಗಳಿಂದ ಒಂದೇ ಕಡೆ ಇರುವ ಅಧಿಕಾರಿಗಳನ್ನು ಚುನಾವಣಾ ಆಯೋಗ ವರ್ಗಾಯಿಸಲಿ ಎಂದು ಒತ್ತಾಯಿಸಿದ್ರು. 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಭೀಕರ ಅಪಘಾತ! ಭದ್ರಾವತಿಯ ಯುವತಿ ಸಾವು

ಜಿಲ್ಲಾ ಜಂಕ್ಷನ್ ನಡೆದಿದ್ದು ಆಕ್ಸಿಡೆಂಟ್! ಬಯಲಾಗಿದ್ದು ಕೊಲೆ ಹಾಗೂ ದರೋಡೆ ಕೇಸ್!? ದ್ವೇಷ ಹೀಗೂ ತೀರಿಸಿಕೊಳ್ಳುತ್ತಾರಾ? ವಿಚಿತ್ರ ಕ್ರೈಂ ಕಥೆ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment