ಹೈ..ಫೈ.. ಬೈಕ್​ ಸವಾರರೇ ಎಚ್ಚರ! ಚೂರು ಯಾಮಾರಿದರೂ ಹೋಗುತ್ತೆ ಜೀವ! ಇಲ್ಲಿದೆ ನೋಡಿ ಸಕ್ರೆಬೈಲ್​ ಸಮೀಪ ನಡೆದ ಘಟನೆಯ ವಿಡಿಯೋ

ಹಂಚಿಕೊಳ್ಳಿ
WhatsApp Facebook X Telegram

MALENADUTODAY.COM| SHIVAMOGGA NEWS 

Accident video :  ಸೆಲ್ಫ್​ ಸ್ಟಾರ್ಟ್ ಆಗ್ತಿದ್ದಾಗೇ, ಹೈ ಸ್ಪೀಡ್​ ಫಿಕಪ್​ ತೆಗೆದುಕೊಳ್ಳುವ ಹೈಫೈ ಬೈಕ್​ಗಳ ರೈಡ್ ಎಷ್ಟು ಚೆಂದವೂ ಅಷ್ಟೆ ಅಪಾಯಕಾರಿ ಕೂಡ, ಮಕ್ಕಳ ಆಸೆಯಂತೆ ಫೋಷಕರು  ಅಂತಹುದೇ ಬೈಕ್​ಗಳನ್ನು ಕೊಡಿಸುತ್ತಾರೆ. ಆದರೆ ಅತಿವೇಗದಲ್ಲಿ ಬದುಕು ಸಹ ಕಂಟ್ರೋಲ್​ಗೆ ಸಿಗದೇ ಪ್ರಾಣ ಹಾರಿಹೋಗುವಂತಹ ಘಟನೆಗಳು ಇಂತಹ ಬೈಕ್​ಗಳಲ್ಲಿಯೇ ಹೆಚ್ಚು ಸಂಭವಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಸ್ಟೇಷನ್​ ಲಿಮಿಟ್ನಲ್ಲಿ ನಡೆದ ಘಟನೆಯೊಂದು ಇದೀಗ ವಾಟ್ಸ್ಯಾಪ್​ನಲ್ಲಿ ಹರಿದಾಡುತ್ತಿದೆ. 

ಸಕ್ರೆಬೈಲ್​ ಬಿಡಾರಕ್ಕೆ ಬಂದ ಕಾಡಾನೆ! ಶೆಟ್ಟಿಹಳ್ಳಿ ಕಾಡಲ್ಲಿ ಸಲಗದ ಅಬ್ಬರ ಮೂಡಿಸುತ್ತಿದೆ ಆತಂಕ! ಕಾರಣವೇನುಗೊತ್ತಾ? VIDEO REPORT

ಶಿವಮೊಗ್ಗದ ಸಕ್ರೆಬೈಲ್​ ಆನೆಬಿಡಾರದ ಬಳಿ, ಕಳೆದ ಫೆಬ್ರವರಿ ನಾಲ್ಕರಂದು ಸಂಭವಿಸಿದ ಘಟನೆಯ ದೃಶ್ಯ ಇದಾಗಿದ್ದು, ಸ್ನೇಹಿತನ ಜೊತೆ ಸಕ್ರೆಬೈಲ್​ ಗೆ ಹೋಗಿ ವಾಪಸ್ ಬರುವಾಗ ನಡೆದ ದುರಂತವಾಗಿದೆ. 

ಶಿವಮೊಗ್ಗದ ವಿದ್ಯಾರ್ಥಿಯೊಬ್ಬ ತನ್ನ ಕೆಟಿಎಂ ಡ್ಯೂಕ್​ ಬೈಕ್​ನಲ್ಲಿ ಸಕ್ರೆಬೈಲ್​ಗೆ ತೆರಳಿದ್ದ, ವಾಪಸ್ ಬರುವಾಗ ಬೈಕ್ ಸಿಕ್ಕಾಪಟ್ಟೆ ಸ್ಪೀಡ್​ನಲ್ಲಿತ್ತು.  ಮುರಾರ್ಜಿ ದೇಸಾಯಿ ಶಾಲೆ ಬಳಿಯಲ್ಲಿ ಇರುವ ಟರ್ನಿಂಗ್​ನಲ್ಲಿ ಬೈಕ್ ಟರ್ನ್ ಮಾಡಿದ್ದಾರೆ ಅಷ್ಟೆ. ಎದುರಿಗೆ ಕಾರೊಂದುಬಂದಿದೆ, ಸ್ಪೀಡ್​ನಲ್ಲಿದ್ದ ಬೈಕ್​ ಎದುರಿಗೆ ಡಿಕ್ಕಿಯಾಗುವುದು ತಪ್ಪಿದೆ, ಬದಲಾಗಿ, ಸ್ಪೀಡ್​ನಲ್ಲಿದ್ದ ಬೈಕ್​ ಪೂರ್ತಿ ಟರ್ನ್​ ಆಗದೆ ಎದುರಿಗಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದ. ಸದ್ಯ ಈ ದೃಶ್ಯ, ಬೈಕ್​ ಸವಾರರು ಎಷ್ಟು ಎಚ್ಚರವಹಿಸಬೇಕು ಎಂಬುದುಕ್ಕೆ ಸಾಕ್ಷಿಯಾಗಿ ವಾಟ್ಸ್ಯಾಪ್​ನಲ್ಲಿ ಹರಿದಾಡುತ್ತಿದೆ. ದೃಶ್ಯವನ್ನು ನೋಡಿದವರು, ಎಲ್ಲದಕ್ಕಿಂತಲೂ ಹೆಚ್ಚಾಗಿ ಜೀವ ಅಮೂಲ್ಯ, ಅತಿಯಾದ ವೇಗ ಬೇಡ ಎಂದು ಸಲಹೆ ನೀಡುತ್ತಿದ್ದಾರೆ. 

ಜಿಲ್ಲಾ ಜಂಕ್ಷನ್ ನಡೆದಿದ್ದು ಆಕ್ಸಿಡೆಂಟ್! ಬಯಲಾಗಿದ್ದು ಕೊಲೆ ಹಾಗೂ ದರೋಡೆ ಕೇಸ್!? ದ್ವೇಷ ಹೀಗೂ ತೀರಿಸಿಕೊಳ್ಳುತ್ತಾರಾ? ವಿಚಿತ್ರ ಕ್ರೈಂ ಕಥೆ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor