ಗುಳಿಗುಳಿ ಶಂಕರ | ಸಾಕ್ಷಾತ್ ಶಿವನಿಂದಲೇ ಉದ್ಭವಿಸಿದ ಕೊಳದಲ್ಲಿ ಬಿಲ್ವಪತ್ರೆ ಭವಿಷ್ಯ ಹೇಳುತ್ತೆ

ಅಲ್ಲಿರೋದು ಶಿವಪಾರ್ವತಿಯರ ದಣಿವನ್ನು ನೀಗಿಸಿದ ತೀರ್ಥಕೊಳ.  ಆ ತೀರ್ಥಕೊಳದಲ್ಲಿ ಶಾಶ್ವತವಾಗಿ ನೆಲೆಸಿದ್ದಾಳಂತೆ ಗಂಗೆ. ಆ ಕೊಳದಲ್ಲಿರುವ ತೀರ್ಥಕ್ಕಿದೆ ರೋಗ ನಿವಾರಣೆ ಮಾಡುವ ದಿವ್ಯ ಶಕ್ತಿ. ಮನದಲ್ಲಿ ದೇವರನ್ನು ಬೇಡಿಕೊಂಡು ಕೈ ತಟ್ಟಿದರೆ ಪ್ರತಿಕ್ರೀಯಿಸುತ್ತದೆ ಆ ಕೊಳ. ಈ ಕೊಳದಲ್ಲಿ ಕೈ ತಟ್ಟಿದರೆ ಗುಳು ಗುಳು ಎಂದು ನಾದಗೈಯುತ್ತಾ ಶಬ್ಧರೂಪದಲ್ಲಿ ಮೇಲುಳುತ್ತವೆ ಗುಳ್ಳೆಗಳು. ಮಲೆನಾಡಿನ ಕಾನನದಲ್ಲಿ ದೇವಮಾನವರು ನೆಲೆಸಿದ, ಈ ತಪೋಭೂಮಿಯಲ್ಲಿ ನಡೆಯುವ ಚಮತ್ಕಾರಗಳ ಬಗ್ಗೆ ಇಲ್ಲಿದೆ ವಿಶೇಷ ಸಂಗತಿ

ಇದನ್ನು ಸಹ ಓದಿ : ಎಸ್.ಬಂಗಾರಪ್ಪ ನೆನಪು | ಜೀವದ ಗೆಳೆಯರಂತಿದ್ದ ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪ

ಗುಳಿಗುಳಿ ಶಂಕರ : 

ಮಲೆನಾಡಿನ ಪ್ರಕೃತಿಯ ಮಡಿಲಲ್ಲಿ ನಂಬಲರಿಯದ ಅಚ್ಚರಿಗಳು ಅಡಗಿವೆ. ನೀವು ನಂಬಲಾಗದ ವಿಸ್ಮಯಕಾರಿ ಘಟನೆಗಳು ಬೆಟ್ಟ ಗುಡ್ಡಗಳ ಕಾನನದ ನಡುವೆ ನಡೆಯುತ್ತಿವೆ. ಸಹ್ಯಾದ್ರಿಯ ತಪ್ಪಲಿನಲ್ಲಿ ಪವಾಡಗಳು ಸೃಷ್ಟಿಯಾಗುತ್ತಿವೆ. ಇಲ್ಲಿನ ನಿಸರ್ಗವೇ ಮನುಷ್ಯನಿಗೆ ಪವಾಡಗಳ ಕಥೆಗಳನ್ನು ಹೇಳುತ್ತವೆ. ಭವಿಷ್ಯದ ಮುನ್ಸೂಚನೆ ಕೂಡ ಇಲ್ಲಿಂದಲೇ ನೀಡುತ್ತವೆ, ಅಂದ್ರೆ ಯಾರಿಗಾದ್ರೂ ಸರಿ ಈ ಪ್ರದೇಶ ಬಗ್ಗೆ ಕುತೂಹಲವನ್ನ ಮತ್ತಷ್ಟು ಹೆಚ್ಚಿಸುತ್ತೆ. ಅಂತಹ ಕ್ಷೇತ್ರಗಳ ಪೈಕಿ ಒಂದು ಗುಳಿಗುಳಿ ಶಂಕರ

ಇದನ್ನು ಸಹ ಓದಿ : ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಇನ್ನೊಂದು ದೊಡ್ಡ ಅವಕಾಶ

ಅದ್ಭುತ ಚಮತ್ಕಾರದ ಕ್ಷೇತ್ರ : ಇಲ್ಲಿ ಕಾಯಿಲೆಗಳು ಕಣ್ಣಿಗೆ ಕಾಣದಂತೆ ಮಾಯವಾಗಿವೆ. ಕಷ್ಟದ ಸಂದರ್ಭದಲ್ಲಿ ಬಂದು ಬೇಡಿಕೊಂಡಾಗ ಇಷ್ಟಾರ್ಥಗಳು ಸಿದ್ಧಿಸಿವೆ. ಇಲ್ಲಿಗೆ ಬಂದು ಹೋದ ಮೇಲೆ ಶುಭ ಕಾರ್ಯಗಳು ನಡೆದಿವೆ. ಹಲವು ಸಮಸ್ಯೆಗಳು, ಸಂಕಟಗಳು ಮರೆಯಾಗಿ. ಮನಸ್ಸಲ್ಲಿ ನೆಮ್ಮದಿ ಮನೆ ಮಾಡಿದೆ. ಯಾಕಂದ್ರೆ ಈ ಸ್ಥಳದ ಮಹಿಮೆ ಅಪಾರವಾದದ್ದು. ಒಂದು ಅದ್ಭುತವಾದ.. ಅಗೋಚರವಾದ ಶಕ್ತಿ ಇಲ್ಲಿನ ನೆಲದಲ್ಲಿ.. ಜಲದಲ್ಲಿ ಇದೆ.. ಅದುವೇ ಬಂದ ಭಕ್ತರ ಕಷ್ಟ ಪರಿಹರಿಸಿ.. ಮನುಷ್ಯನ ಕಣ್ಣೆದುರಲ್ಲೇ ಅಚ್ಚರಿಗಳನ್ನ ಸೃಷ್ಟಿಸುತ್ತಿದೆ.. ಪೌರಾಣಿಕ, ಐತಿಹಾಸಿಕ ಹಿನ್ನೆಲೆಯೂ ಈ ಊರಿಗೆ ಇದೆ. 

ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್​/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ

ಐತಿಹಾಸಿಕ ಕ್ಷೇತ್ರ ; ಒಂದು ಕಾಲದಲ್ಲಿ ನಿರ್ಜನವಾಗಿ. ಮರಗಿಡಗಳಿಂದ ಮುಳುಗಿ ಹೋಗಿದ್ದ ಪ್ರದೇಶ. ಕೆಳದಿಯ ಶಿವಪ್ಪ ನಾಯಕನ ಆಡಳಿತ ಕಾಲದಲ್ಲಿ ಇಲ್ಲಿ ಜನವಸತಿ ಮತ್ತೆ ಪ್ರಾರಂಭಗೊಂಡಿತು. ಆದ್ರೆ, ಕೆಳದಿ ಅರಸರ ಸಾಮ್ರಾಜ್ಯ ಪತನದ ನಂತರ ಈ ಸ್ಥಳ ಮತ್ತೆ ನಿರ್ಜನ ಪ್ರದೇಶವಾಗಿ ಹೋಯ್ತು.. ಸುಮಾರು 60-70 ವರ್ಷಗಳ ಹಿಂದೆ ಮತ್ತೆ ಜನವಸತಿ ಪ್ರಾರಂಭಗೊಂಡು. ನಂಬಿ ಬರೋ ಭಕ್ತರಿಗೆ ಪುಣ್ಯ ಕ್ಷೇತ್ರವಾಗಿದೆ.. ಇಲ್ಲಿ ಮನುಷ್ಯನ ಊಹೆಗೂ ನಿಲುಕದ ಘಟನೆಗಳು, ಅಚ್ಚರಿಗಳು ನಡೀತಾ ಇವೆ.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಶಿವಮೊಗ್ಗದ ವಿಶೇಷ ಕ್ಷೇತ್ರ ; ಅಂದ್ಹಾಗೆ ಈ ಊರು ಇರೋದು ಶಿವಮೊಗ್ಗ ಜಿಲ್ಲೆಯಲ್ಲಿ. ಹೊಸನಗರ ತಾಲೂಕಿನ ಒಂದು ಕುಗ್ರಾಮ. ಲಿಂಗನಮಕ್ಕಿ ಮತ್ತು ಚಕ್ರ ಅಣೆಕಟ್ಟುಗಳಿಂದ ಮುಳುಗಡೆಯಾಗಿರೋ ಊರುಗಳಿಂದ ವಲಸೆ ಬಂದು ನೆಲೆಸಿದ ಜನರನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರೋ ಪುಟ್ಟ ಊರಿದು..

ಇದನ್ನು ಸಹ ಓದಿ : ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಇನ್ನೊಂದು ದೊಡ್ಡ ಅವಕಾಶ

ಹೋಗೋದು ಹೇಗೆ? : ಶಿವಮೊಗ್ಗ ಹೊಸನಗರ ರಾಜ್ಯ ಹೆದ್ದಾರಿಯಲ್ಲಿ ಸುಮಾರು 34 ಕಿ.ಮೀ. ದೂರದಲ್ಲಿ9 ನೇ ಮೈಲು ಕಲ್ಲಿನಿಂದ 8 ಕಿಮೀ. ದೂರದಲ್ಲಿದೆ ಅಚ್ಚರಿ, ಚಮತ್ಕಾರಗಳನ್ನ ಸೃಷ್ಟಿಸುತ್ತಿರೋ ಈ ಸ್ಥಳ.. ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಎಂಬಂತೆ ಅದ್ಭುತಗಳೇ ಅಲ್ಲಿ ನಡೀತಾ ಇವೆ. ಇದು ಅಂತಿಂಥಾ ಸ್ಥಳವಲ್ಲ.. ಇಲ್ಲಿ ಕೇವಲ ಮಾತಾಡಿದ್ರೆ, ಚಪ್ಪಾಳೆ ತಟ್ಟಿದ್ರೆ ಸಾಖು ಅಲ್ಲಿಂದ ಒಂದು ಪ್ರತಿಕ್ರಿಯೆ ಬರುತ್ತೆ.

ಇದನ್ನ ಸಹ ಓದಿ : ನಿಮಗಿದು ಗೊತ್ತಾ | ಜಸ್ಟ್ ಎರಡುವರೆ ತಿಂಗಳಿನಲ್ಲಿ ₹18 ಸಾವಿರ ಕುಸಿತ ಕಂಡಿದೆ ಅಡಿಕೆ ಧಾರಣೆ 

ಪುರಾಣ ಏನು ಹೇಳುತ್ತೆ : ಪುರಾಣದಲ್ಲಿ ಪಾರ್ವತಿ ಸಮೇತನಾಗಿ ಮಲೆನಾಡಿನ ವನಸಿರಿಯ ಈ ಪ್ರದೇಶದ ನಿಸರ್ಗ ಸೌಂದರ್ಯ ಸವಿಯುತ್ತ ಶಿವನು ವಿಹರಿಸುತ್ತಿದ್ದನಂತೆ. ಆ ಸಮಯದಲ್ಲಿ ಶಿವಪಾರ್ವತಿಯರು ಬಾಯಾರಿಕೆಯುಂಟಾಗಿ ಈ ಸ್ಥಳದಲ್ಲಿ ದಣಿದು ಕುಳಿತರಂತೆ. ಶಿವನು ಅಲ್ಲೇ ಗಂಗೆಯನ್ನು ಆಹ್ವಾನಿಸಿದಾಗ ಗಂಗೆ ಭೂಮಿಯಿಂದ ಆವಿರ್ಭವಿಸಿ ಶಿವನ ಜಟೆಯವರೆಗೂ ಚಿಮ್ಮಿ ನೀರು ಉಕ್ಕಿಸಿದಳಂತೆ.  

ಸಂತುಷ್ಟನಾದ ಶಿವ ಈ ಸ್ಥಳದಲ್ಲಿ ಶಾಶ್ವತವಾಗಿ ನೆಲೆಸಿ ಔಷಧಿಯುಕ್ತ ನೀರಿನಿಂದ ಭೂಲೋಕದ ಸಕಲ ಜೀವ ಕೋಟಿಯನ್ನು ಬಹುಕಾಲ ಉದ್ಧರಿಸುವಂತೆ ತಿಳಿಸಿ ಗಂಗೆಯನ್ನು ಬಂಧಿಸಿದನಂತೆ. ಆಗ ಗಂಗೆ ಶಿವಪಾರ್ವತಿಯರೂ ಸಹ ತನ್ನೊಂದಿಗೆ ಇದ್ದರೆ ಇಲ್ಲಿ ಇರುತ್ತೇನೆ ಎಂದಾಗ ಶಿವ ಒಪ್ಪಿ ಇಲ್ಲಿಯ ಕೊಳದಲ್ಲಿ ಗಂಗೆಯೊಂದಿಗೆ ಐಕ್ಯಗೊಂಡನಂತೆ.  

Malenadu Today

ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್​/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ

 ಅಷ್ಟಮಂಗಲ ಪ್ರಶ್ನೆಯಲ್ಲಿ ಹೊರಬಿದ್ದ ಐತಿಹ್ಯ ಅಷ್ಟಮಂಗಲ ಪ್ರಶ್ನೆ ಹಾಕಿದಾಗ ಕ್ಷೇತ್ರದ ಹಿನ್ನೆಲೆಯ ಅರಿವಾಗಿದೆ. ಶಿವ ಪಾರ್ವತಿಯರು ಗಂಗೆಯೊಂದಿಗೆ ಈ ಕೊಳದಲ್ಲಿ ಸಾನಿಧ್ಯ ಹೊಂದಿದ ಹಲವು ವರ್ಷಗಳ ನಂತರ ಬೃಗುವಂಶೀಯರು ಈ ಸ್ಥಳದಲ್ಲಿ ಬಂದು ನೆಲೆಸಿದ್ರಂತೆ. ಈ ವಂಶದ ಪ್ರಸಿದ್ಧ ಋಷಿ ಗುರು ಶುಕ್ರಾರಾಚಾರ್ಯರು ಉಗ್ರ ತಪಸ್ಸು ಕೈಗೊಂಡಿದ್ರಂತೆ.

ಆಗ ಶಿವ ಇಲ್ಲಿನ ಕೊಳದಲ್ಲಿ ಗುಳು ಗುಳು ಎಂದು ನಾದಗೈಯುತ್ತಾ ಶಬ್ಧರೂಪದಲ್ಲಿ ಶುಕ್ರಾಚಾರ್ಯರಿಗೆ ದರ್ಶನ ನೀಡಿದನಂತೆ. ಈ ಕೊಳ ಇನ್ನು ಮುಂದೆ ಜಟಾತೀರ್ಥವೆಂದು ಹೆಸರಾಗಲಿ ಮತ್ತು  ಸ್ಥಳದಲ್ಲಿ ಶಿವ ದೇಗುಲ ನಿರ್ಮಾಣವಾಗಲಿ ಎಂದು ಅನುಗ್ರಹಿಸಿದನಂತೆ. ಆಗ ಶುಕ್ರಾಚಾರ್ಯರು ಈ ಸ್ಥಳಕ್ಕೆ ಗುಳುಗುಳಿ ಶಂಕರ ಎಂದು ಹೆಸರಿಸಿ ಶಿವ ದೇಗುಲ ನಿರ್ಮಿಸಿ ನಿತ್ಯ ಪೂಜಾವಿಧಿಗಳಿಗೆ ಏರ್ಪಾಡು ಮಾಡಿ ತನ್ನ ವಂಶೀಯರಿಗೆ ಬಿಟ್ಟು ಕೊಟ್ಟು ಬೇರೆಡೆಗೆ ತಪಸ್ಸಿಗೆ ಹೊರಟುಹೋದರಂತೆ. ಅಂದಿನಿಂದ ಗ್ರಾಮಕ್ಕೆ ಗುಳುಗುಳಿ ಶಂಕರ ಅನ್ನೋ ಹೆಸರು ಬಂತಂತೆ.

ಇದನ್ನ ಸಹ ಓದಿ : ನಿಮಗಿದು ಗೊತ್ತಾ | ಜಸ್ಟ್ ಎರಡುವರೆ ತಿಂಗಳಿನಲ್ಲಿ ₹18 ಸಾವಿರ ಕುಸಿತ ಕಂಡಿದೆ ಅಡಿಕೆ ಧಾರಣೆ

ಪಾಂಡವರು ಓಡಾಡಿದ ಸ್ಥಳ: ಬೃಗುವಂಶೀಯರು ಶಿವ ಪೀಠವನ್ನು ಕೊಳದಲ್ಲಿ ಬಿಟ್ಟು ಬೇರೆಡೆಗೆ ಹೋದ್ರು. ತೇತ್ರಾಯುಗದಲ್ಲಿ ಶ್ರೀರಾಮನು ಸೀತಾ, ಲಕ್ಷ್ಮಣ ಸಹಿತನಾಗಿ ಇಲ್ಲಿಗೆ ಬಂದು ಸ್ನಾನ ಮಾಡಿದನಂತೆ. ದ್ವಾಪರಯುಗದಲ್ಲಿ ವನವಾಸ ಸಂದರ್ಭದಲ್ಲಿ ಪಾಂಡವರು ಇದೇ ಸ್ಥಳದಲ್ಲಿ ಕೆಲಕಾಲ ನೆಲಸಿದ್ದರಂತೆ.

ಕಾಲಾನಂತರ ಈ ಸ್ಥಳ ನಿರ್ಜನ ಪ್ರದೇಶವಾಗಿ ದಟ್ಟಾರಣ್ಯವಾಗಿ ಬೆಳೆಯಿತು. ಇಲ್ಲಿಗೆ ಸನಿಹದ ಬೆಟ್ಟದ ಗುಹೆಗಳಲ್ಲಿ ಈಗಲೂ ಋಷಿ ಮುನಿಗಳು ತಪಸ್ಸು ಮಾಡುತ್ತಿದ್ದಾರೆ ಎಂಬ ಪ್ರತೀತಿ ಇದೆ. ಗುಳಿಗುಳಿ ಶಂಕರೇಶ್ವರ ಒಂದು ಚಿಕ್ಕ ದೇವಾಲಯವಾದ್ರೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತರನ್ನ ತನ್ನತ್ತ ಸೆಳೆಯುತ್ತಿದೆ. ಹಲವು ಸಮಸ್ಯೆ, ಮನದ ದುಗುಡದೊಂದಿಗೆ ಆಗಮಿಸುವ ಭಕ್ತರಿಗೆ ಭವಿಷ್ಯ ಫಲವನ್ನು ಚಮತ್ಕಾರದ ರೀತಿಯ ಸೂಚನೆ ಇಲ್ಲಿ ಸಿಗುತ್ತೆ. 

ಇದನ್ನು ಸಹ ಓದಿ : ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಾಹನಗಳಿಗೆ ಭಯಂಕರ ಕಳ್ಳರ ಕಾಟ

ಇದು ವರ್ಷವಿಡೀ ಬತ್ತದ ಚಿಲುಮೆ:  ಸದಾ ಕಾಲ ನೀರು ತುಂಬಿ ಹರಿಯುತ್ತಲೇ ಇರುತ್ತೆ.. ಇಲ್ಲಿ ನೀರು ಇರದೇ ಇರೋದನ್ನ ಇದುವರೆಗೂ ಯಾರೂ ಕಂಡಿಲ್ಲ. ಈ ತೀರ್ಥದಲ್ಲಿ ರೋಗ ನಿವಾರಣೆ ಮಾಡುವ ದಿವ್ಯ ಶಕ್ತಿ ಇದೆಯಂತೆ.. ಚರ್ಮ ರೋಗ, ಹೊಟ್ಟೆನೋವು, ಕಿಡ್ನಿಯಲ್ಲಿ ಕಲ್ಲಿರೋರು… ಬಿಪಿ, ಶುಗರ್ ಕಾಯಿಲೆಯಿಂದ ಬಳಲುತ್ತಿರೋರು ಬಂದು ತೀರ್ಥ ಸೇವನೆ ಮಾಡಿದ ಮೇಲೆ ವಾಸಿಯಾಗಿದೆಯಂತೆ. 

9 ದಿನ ಬಿಡದೆ ತೀರ್ಥ ಸೇವನೆ ಮಾಡಿದ್ರೆ : ಕಾಯಿಲೆಗಳು ಹೇಳೋಕೆ ಹೆಸರಿಲ್ಲದಂತೆ ದೂರವಾಗಿವೆಯಂತೆ. ಅದು ಇಲ್ಲದೆ ಇದು ಉದ್ಭವವಾಗಿರೋ ತೀರ್ಥ. ಸಾಕ್ಷಾತ್ ಶಿವನೇ ಇಲ್ಲಿ ನೆಲೆಸಿದ್ದಾನೆಂಬ ನಂಬಿಕೆ ಇದೆ. ಭೂಮಿಯ ಆಳದಿಂದ ತೀರ್ಥ ಬರೋದ್ರಿಂದ ಪಂಚಲೋಹಗಳ ಅಂಶಗಳು ಆ ನೀರಿನಲ್ಲಿ ಇವೆ.. ಆ ಕಾರಣಕ್ಕೆ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಸಿಗ್ತಾ ಇದೆಯಂತೆ. ಈ ಚಿಲುಮೆಗೆ ಬಿಲ್ವ ಪತ್ರೆ ಹಾಕಿದರೂ ಅದರಿಂದ ಕೂಡ ಅಚ್ಚರಿಗಳು ಸೃಷ್ಟಿಯಾಗುತ್ತಿವೆ.. ನೀವು ನಂಬಲಾರದಂತ ವಿಸ್ಮಯಗಳು ನಡೆಯುತ್ತಿವೆ.

ಬೆಟ್ಟದ ಮೇಲಿನ ಪಯಣ ನಿಜಕ್ಕೂ ರಮ್ಯ..  ಗುಳಗುಳಿ ಶಂಕರ ದೇವಸ್ಥಾನದ ಪಕ್ಕದಲ್ಲಿಯೇ  ಗುಹೆಯೊಂದು ಕಾಣಸಿಗುತ್ತದೆ. ಈ ಹಿಂದೆ ಇಲ್ಲಿ ಋಷಿ-ಮುನಿಗಳು ತಪಸ್ಸು ಮಾಡ್ತಾ ಇದ್ರಂತೆ.. ಅವರು ಸಂಚರಿಸಲು ಬಳಕೆ ಮಾಡಿಕೊಳ್ತಾ ಇದ್ದ ಸುರಂಗ ಮಾರ್ಗಗಳು ಇವೆ. ಐದು ಶಂಕರಗಳಿಗೂ ಇದೇ ಗುಹೆ ಪ್ರವೇಶ ದ್ವಾರವಂತೆ. ಈಗ ಮಳೆ ಜಸ್ತಿಯಾಗಿರೋದ್ರಿಂದ ಮಣ್ಣು ಕುಸಿತ ಉಂಟಾಗಿ ಆ ಗುಹೆಯ ಒಳಗೆ ಯಾರೂ ಹೋಗೋಕೆ ಆಗ್ತಾ ಇಲ್ಲ. ಇನ್ನೂ ಈ ಗುಳುಗುಳಿ ಶಂಕರ ದೇವಸ್ಥಾನದಲ್ಲಿ ಹೆಜ್ಜೆ ಹೆಜ್ಜೆಗೂ ಅದ್ಭುತಗಳು ಇವೆ. ಸಾಮಾನ್ಯವಾಗಿ ಹಗುರವಾದ ವಸ್ತುಗಳು ನೀರಿನ ಮೇಲೆ ತೇಲಲೇಬೇಕು. ಆದರೆ, ಚಿಲುಮೆಯಲ್ಲಿ ಅದಕ್ಕೆ ತದ್ವಿರುದ್ಧ.. ಬಿಲ್ವ ಪತ್ರೆಯನ್ನ ಈ  ಹಾಕಿದರೆ.. ಅದು ನಿಧಾನವಾಗಿ ಮುಳುಗಿ ತಳಭಾಗಕ್ಕೆ ತಲುಪುತ್ತೆ.

ಇದನ್ನುಸಹ ಓದಿ : ರಾಜ್ಯ ಸಚಿವ ಸಂಪುಟದಲ್ಲಿ ತೀರ್ಥಹಳ್ಳಿಗೆ 75 ಕೋಟಿಯ ಕಾಮಗಾರಿ ಸ್ಯಾಂಕ್ಷನ್​/ ಎರಡು ಸೇತುವೆ ನಿರ್ಮಾಣಕ್ಕೆ ಅಸ್ತು

ಈ ಬಿಲ್ವ ಪತ್ರೆಯನ್ನ ಕೊಳದಲ್ಲಿ ಹಾಕೋಕೂ ಒಂದು ಕಾರಣ ಇದೆ. ಭಕ್ತರು ತಮ್ಮ ಮನಸ್ಸಿನ ಇಷ್ಟಾರ್ಥದ ಬಗ್ಗೆ ಪ್ರಶ್ನಿಸಿ ಈ ಕೊಳದಲ್ಲಿ ಬಿಲ್ವ ಪತ್ರೆಯನ್ನು ಹಾಕಿದ್ರೆ ಅದು ಮುಳುಗುತ್ತದೆ. ಎಷ್ಟು ಬೇಗ ಆ ಪತ್ರೆ ಮೇಲೆ ಬಂದು ತೇಲುತ್ತದೋ ಅಷ್ಟು ಬೇಗ ಸಮಸ್ಯೆಗಳು ಪರಿಹಾರವಾಗುತ್ತವಂತೆ. ತಡವಾಗಿ ಬಂದರೆ ಸಮಸ್ಯೆಗಳು ಕೂಡ ನಿಧಾನವಾಗಿ ದೂರವಾಗುತ್ತವೆ ಅನ್ನೋ ನಂಬಿಕೆ ಇದೆ. 

ಒಂದು ವೇಳೆ ಅಂದುಕೊಂಡಿದ್ದು ಆಗೋದಿಲ್ಲ ಅನ್ನೋದಾದ್ರೆ ಆ ಪತ್ರೆ ಯಾವುದೇ ಕಾರಣಕ್ಕೂ ತೇಲೋದಿಲ್ಲವಂತೆ. ಮುಳುಗಿಯೇ ಇರುತ್ತದಂತೆ. ಇದ್ರ ಜೊತೆಗೆ ಇಲ್ಲಿ ಇನ್ನೊಂದು ಅದ್ಭುತವೇ ನಡೀತಾ ಇದೆ.. ಅದು ಭಕ್ತರು ನಂಬೋದಕ್ಕೂ ಆಗದ ವಿಸ್ಮಯಕಾರಿ ಘಟನೆ..

ಇದನ್ನು ಸಹ ಓದಿ : ದೇಶದ ಅತಿದೊಡ್ಡ ಸೆಕ್ಸ್ ರಾಕೆಟ್ ಬಯಲು/ 14 ಸಾವಿರಕ್ಕೂ ಹೆಚ್ಚು ಮಹಿಳೆಯರ ರಕ್ಷಣೆ/

ಚಿಲುಮೆಯಿಂದ ಮೇಲೆ ಬರುವ ಗುಳ್ಳೆಗಳು. ಮನುಷ್ಯ ಮಾತಾಡಿದ್ರೆ, ಚಪ್ಪಾಳೆ ತಟ್ಟಿದ್ರೆ ನೀರಿನಲ್ಲಿ ಗುಳ್ಳೆ ಬರೋದನ್ನ ನೀವು ಎಲ್ಲೂ ಕೇಳಿರೋದಕ್ಕೆ ನೋಡಿರೋದಕ್ಕೆ ಸಾಧ್ಯವೇ ಇಲ್ಲ. ಆದ್ರೆ, ಇಲ್ಲಿ ಮಾತ್ರ ಚಪ್ಪಾಳೆ ತಟ್ಟಿದ ತಕ್ಷಣ ನೀರಿಂದ ಗುಳ್ಳೆಗಳು ಮೇಲೆ ಬರುತ್ತವೆ. ಅಚ್ಚರಿ ಹುಟ್ಟಿಸಿ ಕುತೂಹಲವನ್ನ ಗರಿಗೆದರುವಂತೆ ಮಾಡುತ್ತಿವೆ.  

ಪ್ರತಿ ಶಬ್ದಕ್ಕೆ ಪ್ರತಿಕ್ರಿಯೆ ಎಂಬಂತೆ ಗುಳ್ಳೆಗಳು ಮೇಲೇಳುತ್ತವೆ. ಜೋರಾಗಿ ಚಪ್ಪಾಳೆ ತಟ್ಟಿದಂತೆ ಅಷ್ಟೇ ವೇಗದಲ್ಲಿ ಗುಳ್ಳೆಗಳು ಮೇಲಕ್ಕೇಳುತ್ತವೆ. ಒಂದು ವೇಳೆ ಇಲ್ಲಿ ಕಟ್ಟಿರೋ ಪಾಚಿಯನ್ನ ಸ್ವಚ್ಛಗೊಳಿಸಿದರೆ ಒಂದೇ ದಿನದಲ್ಲಿ ಯಥಾ ಪ್ರಕಾರ ಪಾಚಿ ಬೆಳೆದುಕೊಂಡಿರುತ್ತಂತೆ. ಚಪ್ಪಾಳೆ ತಟ್ಟಿದಾಗ ಯಾಕೆ ಗುಳ್ಳೆಗಳು ಮೇಲೆ ಬರುತ್ತವೆ ಅನ್ನೋದು ಇಂದಿಗೂ ನಿಗೂಢವಾಗಿಯೇ ಇದೆ. ಅದಕ್ಕೆ ನಿರ್ದಿಷ್ಟವಾದ ಕಾರಣ ಏನು ಅನ್ನೋದು ತಜ್ಞರಿಗೂ ತಿಳಿದಿಲ್ಲ.ಈ ಗುಳುಗುಳಿ ಶಂಕರ ದೇವಸ್ಥಾನದ ಸುತ್ತಮುತ್ತ ದಟ್ಟವಾದ ಕಾಡೇ ಇದೆ. ಆ ಕಾರಣದಿಂದಾಗಿ ತೀರ್ಥದಲ್ಲಿ ಔಷಧೀಯ ಗುಣಗಳು ತೀರ್ಥದಲ್ಲಿ ಸೇರಿಕೊಂಡು ಕಾಯಿಲೆಗಳಿಗೆ ಅದುವೇ ಮದ್ದಾಗಿ ಪರಿಣಮಿಸಿರಬಹುದು

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

 ಮಲೆನಾಡಿನ ಸಾಕಷ್ಟು ಕುತೂಹಲ ಕಾರಿಯಾದ ಮಾಹಿತಿಗಳು ಮಲೆನಾಡು ಟುಡೆ.ಕಾಂ ಮಲೆನಾಡು ಹಾಗೂ ರಾಜ್ಯದ ಜನರಿಗೆ ನೀಡುತ್ತಿದ್ದೇವೆ. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ ಕ್ಲಿಕ್ ಮಾಡಿ ಬೆಂಬಲಿಸಿ

Leave a Comment