ಭದ್ರಾವತಿಯಲ್ಲಿ ಟಿಪ್ಪುನಗರ ನಿವಾಸಿ ಕೊಲೆ ಕೇಸ್ | ಮಹಾರಾಷ್ಟ್ರ ಗಡಿಯಲ್ಲಿ ನಾಲ್ವರು ಅರೆಸ್ಟ್

Malenadu Today

KARNATAKA NEWS/ ONLINE / Malenadu today/ Oct 28, 2023 SHIVAMOGGA NEWS

BHADRAVATI |  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಗೌಡ್ರಳ್ಳಿಯ ತೋಟವೊಂದರಲ್ಲಿ ಕೊಲೆಯಾದ ಶಿವಮೊಗ್ಗದ ಟಿಪ್ಪುನಗರ ನಿವಾಸಿ ಸೈಯದ್ ರಾಝಿಕ್​ ನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. 

RELATED STORY | ಶಿವಮೊಗ್ಗದ ಟಿಪ್ಪುನಗರದ ರಾಜೀಕ್​​, ಭದ್ರಾವತಿ ಗ್ರೌಡಳ್ಳಿ ತೋಟದಲ್ಲಿ ಕೊಲೆಯಾಗೋದಕ್ಕೆ ಕಾರಣವೇನು? EXCLUSIVE

ದಿನಾಂಕ:20-10-2023 ರಂದು ಭದ್ರಾವತಿ ತಾ: ಗೌಡ್ರಳ್ಳಿ, ಗ್ರಾಮದಲ್ಲಿ, ಶಿವಮೊಗ್ಗ ಟಿಪ್ಪುನಗರ ವಾಸಿ ರೌಡಿಶೀಟರ್ ಸೈಯದ್ ರಾಕ್ ಎಂಬುವನನ್ನು ಭದ್ರಾವತಿ ತಾಲ್ಲೂಕು ತಿಪ್ಪಾಪುರ ಕ್ಯಾಂಪ್ ಗ್ರಾಮದ ವಾಸಿಗಳಾದ ಸಮೀರ್, ಜಮೀರ್ @ ಸಮೀರ್, ನ್ಯಾಮತ್ ಅಲಿ ಮಹಮ್ಮದ್ ಶಫಿವುಲಾ ಮತ್ತು ಇತರ 4 ಜನರು ಸೇರಿ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದರು. 

ಈ ಸಂಬಂಧ  ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮೃತನ ಅಕ್ಕ ಗುಲ್ಮಾಜ್ ಬಾನು ರವರು ದೂರು ನೀಡಿದ್ದರು. ಪೂರಕವಾಗಿ ಭದ್ರಾವತಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಸಂಖ್ಯೆ 253/2023 ರಲ್ಲಿ ಪ್ರಕರಣ ದಾಖಲಾಗಿತ್ತು.  ಗಂಭೀರವಾದ ಪ್ರಕರಣದಲ್ಲಿ ಶಿವಮೊಗ್ಗ SP ಮಿಥುನ್​ ಕುಮಾರ್  ಗ್ರಾಮಾಂತರ ಪೊಲೀಸ್ ಠಾಣೆಯ ಜಗದೀಶ್ ಸಿ ಹಂಚಿನಾಳ್, ಪೊಲೀಸ್ ಇನ್ಸ್ ಪೆಕ್ಟರ್ ರವರ ನೇತೃತ್ವದಲ್ಲಿ, ಶ್ರೀಶೈಲಕೆಂಚಣ್ಣವರ, ಪಿ.ಎಸ್.ಐ ಮತ್ತು 2 ಹೆಚ್.ಸಿ 195 ಮಂಜುನಾಥ, ಸಿಪಿಸಿ 1269 ಈರಯ್ಯ, ಮತ್ತು ಸಿ.ಪಿ.ಸಿ 1474 ಶಿವಪ್ಪ ರವರನ್ನೊಳಗೊಂಡ ವಿಶೇಷ ತಂಡ ರಚನೆ ಮಾಡಿದ್ದರು. 

ಸದ್ಯ ಈ ತನಿಖಾ ತಂಡ  ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ದಿನಾಂಕ: 25-10-2023 ರಂದು 8 ಜನ ಆರೋಪಿತರ ಪೈಕಿ ಸಮೀರ್, ಜಮೀರ್ @ ಸಮೀರ್, ನ್ಯಾಮತ್ ಅಲಿ, ಮತ್ತು ಮಹಮ್ಮದ್ ಶಫೀವುಲಾ ಎಂಬುವರನ್ನು ಪತ್ತೆ ಮಾಡಿ ಅರೆಸ್ಟ್ ಮಾಡಿದೆ. 

ಅಲ್ಲದೆ  ಆರೋಪಿತರಿಂದ ಕೃತ್ಯ ವೆಸಗಲು ಉಪಯೋಗಿಸಿದ ಮಾರಕಾಸ್ತ್ರಗಳನ್ನು ಮತ್ತು ಕೃತ್ಯ ವೆಸಗಿ ತಪ್ಪಿಸಿಕೊಂಡು ಹೋಗಲು ಉಪಯೋಗಿಸಿದ್ದು ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿದೆ. ಉಳಿದ ಆರೋಪಿತರ ಪತ್ತೆ ಕಾರ್ಯ ಜಾರಿಯಲ್ಲಿದೆ.


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!


Share This Article