shimoga police news/ ರಾತೋರಾತ್ರಿ ಮನೆ ಬಾಗಿಲಿಗೆ ಬಂದು ವಾರ್ನಿಂಗ್​ ನೀಡಿದ ಎಸ್​ಪಿ ಮಿಥುನ್ ಕುಮಾರ್! ಶಿವಮೊಗ್ಗ ಜಿಲ್ಲೆಯಿಡಿ ನಿನ್ನೆ ರಾತ್ರಿ ನಡೆದಿದ್ದು ಕ್ವಿಕ್​ ಪೊಲೀಸ್ ರೇಡ್​

Malenadu Today

KARNATAKA NEWS/ ONLINE / Malenadu today/ Sep 11, 2023 SHIVAMOGGA NEWS   

shimoga police news  / ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ಶಿವಮೊಗ್ಗ ಎಸ್​ಪಿ ಖುದ್ದು ಪೀಲ್ಡ್​ಗೆ ಇಳಿದಿದ್ದಾರೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆ ರೌಡಿ ಪರೇಡ್​ಗಳನ್ನ ನಡೆಸುತ್ತದೆ. ಆದರೆ ಶಿವಮೊಗ್ಗ ಪೊಲೀಸ್ ಇಲಾಖೆ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು, ನಿನ್ನೆ ರಾತ್ರಿ ವಿವಿಧ ರೌಡಿಶೀಟರ್ಸ್​​ ಮನೆಗೆ ಖುದ್ದು  ಎಸ್​ಪಿ ಮಿಥನ್​ ಕುಮಾರ್ ಭೇಟಿ ಕೊಟ್ಟು ವಾರ್ನಿಂಗ್ ಕೊಟ್ಟಿದ್ದಾರೆ. 

Malenadu Today

ಶಿವಮೊಗ್ಗ ಸಿಟಿಯಲ್ಲಿ ಎಸ್​ಪಿ ರೌಂಡ್ಸ್​ 

Malenadu Today

ನಿನ್ನೆ  ರಾತ್ರಿ ಖುದ್ದು ಫೀಲ್ಡ್​ಗೆ ಇಳಿದ ಎಸ್​ಪಿ ಮಿಥುನ್ ಕುಮಾರ್​ ರವರು ವಿವಿಧ ರೌಡಿಶೀಟರ್​ಗಳ ಮನೆಗೆ ಭೇಟಿ ನೀಡಿದರು.ಮನೆ ಬಾಗಿಲಿಗೆ ಎಸ್​ಪಿಯವರೇ ಬಂದಿರುವುದನ್ನ ನೋಡಿ ರೌಡಿ  ಶೀಟರ್ಸ್​ ಭಯಬಿದ್ದಿದ್ದಾರೆ. ಅವರ ಭಯವನ್ನು ನಿವಾರಣೆ ಮಾಡಿದ ಎಸ್​ಪಿ  ಸೌಹಾರ್ದತೆಗೆ ದಕ್ಕೆತರುವಂತಹ / ಶಾಂತಿಗೆ ಭಂಗವನ್ನುಂಟು ಮಾಡುವಂತಹ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗದಂತೆ ಸೂಕ್ತ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಕಾನೂನ ಬಾಹಿರ ಕೃತ್ಯಗಳಲ್ಲಿ ಭಾಗಿಯಾಗದಂತೆ ಸೂಚನೆ ಕೊಟ್ಟಿದ್ದಾರೆ. 

Malenadu Today

ರೌಡಿಶೀಟರ್ಸ್​ಗೆ ಎಚ್ಚರಿಕೆ ನೀಡಿದ್ದಷ್ಟೆ ಅಲ್ಲದೆ ಅವರ ಪೂರ್ವಪರವನ್ನು ವಿಚಾರಿಸಿದ ಎಸ್​ಪಿ ಮಿಥುನ್ ಕುಮಾರ್, ಠಾಣೆಗಳಲ್ಲಿ ಅವರುಗಳ ಹಾಜರಾತಿಯನ್ನು ಸಹ ಪರಿಶೀಲಿಸಿದರು. ಪ್ರಸ್ತುತ ಮಾಡುತ್ತಿರುವ ಕೆಲಸದ ಬಗ್ಗೆ ವಿಚಾರಿಸಿ, ಬುದ್ದಿ ಮಾತುಗಳನ್ನು ಸಹ ಹೇಳಿದ್ದಾರೆ. ಇನ್ನೂ ಇದೇ ವೇಳೆ ರೌಡಿಶೀಟರ್ಸ್​ ಮನೆಯಲ್ಲಿ ಮಾರಕಾಸ್ತ್ರಗಳು, ಮಾಧಕವಸ್ತುಗಳು ಇರುವ ಸಾಧ್ಯತೆಯನ್ನು ಸಿಬ್ಬಂದಿಯ ಮೂಲಕ ಪರಿಶೀಲನೆ ನಡೆಸಿದ್ದಾರೆ. 

Malenadu Today

ಶಿವಮೊಗ್ಗ-ಭದ್ರಾವತಿ- ಸಾಗರ-ಶಿಕಾರಿಪುರ-ತೀರ್ಥಹಳ್ಳಿ ಸೇರಿ ಜಿಲ್ಲೆಯೆಲ್ಲೆಡೆ ಪರಿಶೀಲನೆ 

ಶಿವಮೊಗ್ಗ ಅಷ್ಟೆ ಅಲ್ಲದೆ,ಭದ್ರಾವತಿಯಲ್ಲಿಯು ನಿನ್ನೆ ಪೊಲೀಸರು ವಿವಿಧ ರೌಡಿಶೀಟರ್ಸ್​ ಮನೆಗೆ ಪರಿಶೀಲನೆಗೆಂದು ತೆರಳಿದ್ದರು. ಖದ್ದು  ಮಿಥುನ್ ಕುಮಾರ್ ಜಿ.ಕೆ  ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ, ಶಿವಮೊಗ್ಗ ಎ ಉಪ ವಿಭಾಗದಲ್ಲಿ  ಪರಿಶೀಲನೆ ನಡೆಸಲಾಗಿದೆ .

Malenadu Today

ಬಾಲರಾಜ್, ಪೊಲೀಸ್ ಉಪಾಧಿಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗದಲ್ಲಿ   ಸುರೇಶ್ ಎಂ, ಪೊಲೀಸ್ ಉಪಾಧಿಕ್ಷಕರು, ಭದ್ರಾವತಿ ಉಪ ವಿಭಾಗದಲ್ಲಿ   ನಾಗರಾಜ್, ಪೊಲೀಸ್ ಉಪಾಧಿಕ್ಷಕರು, ಸಾಗರ ಉಪ ವಿಭಾಗದಲ್ಲಿ,   ಗೋಪಾಲಕೃಷ್ಣ ತಿಮ್ಮಣ್ಣ ನಾಯ್ಕ್, ಪೊಲೀಸ್ ಉಪಾಧಿಕ್ಷಕರು, ಶಿಕಾರಿಪುರ ಉಪ ವಿಭಾಗದಲ್ಲಿ   ಶಿವಾನಂದ್ ಮದರಖಂಡಿ, ಪೊಲೀಸ್ ಉಪಾಧಿಕ್ಷಕರು ಮತ್ತು

Malenadu Today

ತೀರ್ಥಹಳ್ಳಿ ಉಪ ವಿಭಾಗದಲ್ಲಿ   ಗಜಾನನ ವಾಮನ ಸುತಾರ, ಪೊಲೀಸ್ ಉಪಾಧಿಕ್ಷಕರು ಹಾಗೂ ಆಯಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ ಸಿಬ್ಬಂಧಿಗಳನ್ನೊಳಗೊಂಡ ಪ್ರತ್ಯೇಖ ತಂಡಗಳು ಏಕಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ರೌಡಿ ಆಸಾಮಿಗಳ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. 

Malenadu Today

ಎಲ್ಲೆಲ್ಲಿ ಎಷ್ಟು ಮನೆಗಳ ಮೇಲೆ ರೇಡ್ 

ಶಿವಮೊಗ್ಗ ಎ ಉಪ ವಿಭಾಗದಲ್ಲಿ – 39, ಶಿವಮೊಗ್ಗ ಬಿ ಉಪ ವಿಭಾಗದಲ್ಲಿ – 38, ಭದ್ರಾವತಿ ಉಪ ವಿಭಾಗದಲ್ಲಿ – 72, ಸಾಗರ ಉಪ ವಿಭಾಗದಲ್ಲಿ – 21, ಶಿಕಾರಿಪುರ ಉಪ ವಿಭಾಗದಲ್ಲಿ – 27, ತೀರ್ಥಹಳ್ಳಿ ಉಪ ವಿವಭಾಗದಲ್ಲಿ – 44 ಸೇರಿ ಜಿಲ್ಲೆಯಾದ್ಯಂತ ಒಟ್ಟು 241 ರೌಡಿ ಆಸಾಮಿಗಳ  ಮನೆಗಳನ್ನು ತಪಾಸಣೆ ನಡೆಸಲಾಗಿದೆ. 

Malenadu Today


ಇನ್ನಷ್ಟು ಸುದ್ದಿಗಳು 


 

Share This Article