ಶಿವಮೊಗ್ಗ ನಗರ ಶಾಸಕರಿಂದ ಉದ್ಘಾಟನೆಗೊಂಡ TS ಸರ್ಕಲ್! ಇಲ್ಲಿರೋ ವಿಶೇಷ ಏನು ಗೊತ್ತಾ?

Malenadu Today

KARNATAKA NEWS/ ONLINE / Malenadu today/ Aug 12, 2023 SHIVAMOGGA NEWS 

ಶಿವಮೊಗ್ಗ ನಗರದ ಗೋಪಿವೃತ್ತದ ಅಧಿಕೃತ ಹೆಸರು ಸರ್ಕಲ್​ನಲ್ಲಿ ಆಕರ್ಷಕ ರೂಪದಲ್ಲಿ ಸ್ಥಾಪನೆಗೊಂಡಿದೆ. ನಿನ್ನೆ ಟಿ.ಸೀನಪ್ಪ ಶೆಟ್ಟಿ ವೃತ್ತ ಎಂದು ಬರೆದಿರುವ ಕಲ್ಲಿನ  ನಾಮಫಲಕವನ್ನು ಶಾಸಕ ಎಸ್.ಎನ್‌.ಚನ್ನಬಸಪ್ಪ  (SN Channabasappa)  ಉದ್ಘಾಟಿಸಿದ್ದಾರೆ. 

ಇದೇ ವೇಳೆ ಮಾತನಾಡಿದ  ಶಾಸಕರು ಈ ಮೊದಲು ಗೋಪಿವೃತ್ತ ಎಂದು ಸರ್ಕಲ್ ನ್ ಕರೆಯಲಾಗ್ತಿತ್ತು. ಆದರೆ, ಬಹಳಷ್ಟು ಮಂದಿಗೆ ಮಾಹಿತಿಯಿಲ್ಲ. 1956 ರಲ್ಲಿಯೇ ಈ ವೃತ್ತಕ್ಕೆ ಟಿ. ಸೀನಪ್ಪ ಶೆಟ್ಟಿ ವೃತ್ತಕ್ಕೆ ಎಂದು ಹೆಸರಿಡಲು ಅಂದಿನ ಪುರಸಭೆ ಒಪ್ಪಿಗೆ ನೀಡಿತ್ತು. ಸೀನಪ್ಪ ಶೆಟ್ಟಿ ಕುಟುಂಬದವರು ಈ ವೃತ್ತಕ್ಕಾಗಿಯೇ ಆಗಿನ ಕಾಲದಲ್ಲಿ 25 ಸಾವಿರ ರೂಪಾಯಿ ಕೊಟ್ಟಿದ್ದರು ಎಂದರು. ಅಂದಿನ ಕಾಲದಲ್ಲಿ ಇದು ಕಡಿಮೆ ಹಣವೇನಲ್ಲ , ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಇಲ್ಲಿನ ಕಾರಂಜಿ ಯನ್ನು ಸ್ಥಳಾಂತರ ಮಾಡಲಾಗಿತ್ತು. ಇನ್ನೂ  ಮುಂದೆ ಈ ವೃತ್ತವನ್ನು ಗೋಪಿ ವೃತ್ತ ಎಂದು ಕರೆಯದೇ ಸೀನಪ್ಪ ಶೆಟ್ಟಿ ವೃತ್ತ ಎಂದೇ ಕರೆಯಬೇಕು ಎಂದರು.  


BREAKING NEWS / ಅರಶಿನ ಗುಂಡಿ ಘಟನೆ ಮಾಸುವ ಮುನ್ನವೆ ಮತ್ತೊಬ್ಬ ಯುವಕ ನೀರಿನಲ್ಲಿ ನಾಪತ್ತೆ! ಶಿವಮೊಗ್ಗದ ತುಂಗಾ ಡ್ಯಾಂ ಬಳಿ ಹುಡುಕಾಟ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಸಮೀಪ ನಿನ್ನೆ ಕಾರು ಬೈಕ್​ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ಧಾನೆ. ರಿಪ್ಪನ್​ಪೇಟೆಯ  ಹೊಸನಗರ ರಸ್ತೆಯ ಶರ್ಮಣ್ಯಾವತಿ ನದಿ ಸೇತುವೆ ಬಳಿಯಲ್ಲಿ ಘಟನೆ ಸಂಭವಿಸಿದೆ. ಹೊಸನಗರದ ಕಡೆಗೆ ತೆರಳುತಿದ್ದ ಬೈಕ್ ಹಾಗೂ ಹೊಸನಗರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಕಾರು ಪರಸ್ಪರ ಡಿಕ್ಕಿಯಾಗಿವೆ.  ಹೊಸನಗರ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿ ಘಟನೆಯಲ್ಲಿ ಗಾಯಗೊಂಡಿದ್ದು, ಇನ್ನೊಬ್ಬ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರಿಗೂ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಇನ್ನೂ ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ರಿಪ್ಪನ್​ ಪೇಟೆ ಪೊಲೀಸರು ಗಾಯಾಳು ವಿದ್ಯಾರ್ಥಿಗಳನ್ನ ತಮ್ಮ ಜೀಪ್​ನಲ್ಲಿಯೇ ರಿಪ್ಪನ್​ ಪೇಟೆ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಪೊಲೀಸರ ತುರ್ತುಸೇವೆಗೆ ಸ್ಥಳೀಯರು ಧನ್ಯವಾದ ತಿಳಿಸಿದ್ದಾರೆ.  

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Share This Article