ಶಿವಮೊಗ್ಗ ಜಿಲ್ಲಾ ಪಂಚಾಯತ್​ ಗೇಟ್​ ಬಳಿಯಲ್ಲಿ ಹೈ ಸೆಕ್ಯುರಿಟಿ! ಬ್ಯಾರಿಕೇಡ್​ ಹಾಕಿ ಕಾಯುತ್ತಿರುವ ಇನ್​ಸ್ಪೆಕ್ಟರ್ಸ್​! ಕಾರಣವೇನು?

Malenadu Today

KARNATAKA NEWS/ ONLINE / Malenadu today/ Aug 5, 2023 SHIVAMOGGA NEWS 

ಈ ಹಿಂದೆ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದಿದ್ದ ಉಸ್ತುವಾರಿ ಸಚಿವರ ಪರಿಶೀಲನಾ ಸಭೆ ವೇಳೆ ಬಿಜೆಪಿ ಯುವ ಮೋರ್ಚಾ ಸದಸ್ಯರು ಕಪ್ಪುಪಟ್ಟಿ ಪ್ರದರ್ಶನ ಮಾಡಲಾಗಿತ್ತು. ಇದು ಪೊಲೀಸ್ ಇಲಾಖೆಗೂ ಇರಸು ಮುರುಸು ಉಂಟುಮಾಡಿತ್ತು. ಈ ಹಿನ್ನೆಲೆಯಲ್ಲಿ ಇವತ್ತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 

ಇವತ್ತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶರಾವತಿ ಸಂತ್ರಸ್ಥರ ಕುರಿತು ಅಧಿಕಾರಿಗಳೊಂದಿಗೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಮಾಲೋಚನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವತಃ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಜಿಲ್ಲಾ ಪಂಚಾಯತ್ ಸಭಾಂಗಣದ ಸುತ್ತಮುತ್ತಲಿನ ಭದ್ರತೆಯ ಉಸ್ತುವಾರಿ ನೋಡಿಕೊಳ್ತಿದ್ದಾರೆ. ಜಿಲ್ಲೆ ವಿವಿಧ ಠಾಣೆಯ ಇನ್​ಸ್ಪೆಕ್ಟರ್​ ಗಳು ಸಬ್​ಇನ್ಸ್ಪೆಕ್ಟರ್​ಗಳು ಜಿಲ್ಲಾ ಪಂಚಾಯತ್​ನ ಮುಖ್ಯ ಗೇಟ್​ನ ಬಳಿ ಕಾವಲು ನಿಂತಿದ್ದಾರೆ. 


ಭದ್ರಾವತಿ ಭದ್ರಗಿರಿ, ಶಿವಮೊಗ್ಗ ಗುಡ್ಡೆಕಲ್​ ಆಡಿ ಕೃತ್ತಿಕೆ ಜಾತ್ರೆ! ಯಾವಾಗ ಗೊತ್ತ ಭರಣಿ ಕಾವಡಿ ಉತ್ಸವ?

ಶಿವಮೊಗ್ಗ ಜಿಲ್ಲೆ  ಭದ್ರಾವತಿ ತಾಲ್ಲೂಕಿನ  ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಿನ್ನೆ ಶುಕ್ರವಾರ ಆಡಿ ಕೃತ್ತಿಕೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿದೆ. ಧ್ವಜಾರೋಹಣದೊಂದಿಗೆ ಜಾತ್ರೆಗೆ ಚಾಲೆ ನೀಡಲಾಗಿದ್ದು, ಇದೇ ಆಗಸ್ಟ್ 8  ರಂದು ಭರಣಿ ಕಾವಡಿ ಉತ್ಸವ ಮತ್ತು  9 ರಂದು ಆಡಿ ಕೃತಿಕೆ ಜಾತ್ರೆ ನಡೆಯಲಿದೆ. ಇನ್ನೂ ಶಿವಮೊಗ್ಗದಲ್ಲಿ  ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ನಿಂದ ಗುಡ್ಡೇಕಲ್‌ನ ದೇವಸ್ಥಾನದಲ್ಲಿ ಇದೇ ಆಗಸ್ಟ್​ ರಂದು ಭರಣಿ, ಕಾವಡಿ ಉತ್ಸವ ಹಾಗೂ 9ರಂದು ಆಡಿಕೃತ್ತಿಕೆ ಹರೋಹರ ಜಾತ್ರೆ ನಡೆಯಲಿದೆ. ಅಂದು ಬೆಳಗ್ಗೆ 4 ಗಂಟೆಯಿಂದಲೇ ಕಾವಡಿ ಹೊತ್ತ ನೂರಾರು ಭಕ್ತರು ಕುಟುಂಬ ಸಮೇತ ನಗರದ ನಾನಾ ಭಾಗದಿಂದ ಪಾದಯಾತ್ರೆ ಮೂಲಕ ಬಂದು ಹರಕೆ ತೀರಿಸಲಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ 2 ವರ್ಷ ಜಾತ್ರೆ ಅದ್ಧೂರಿಯಾಗಿ ನಡೆದಿರಲಿಲ್ಲ. ಈ ಬಾರಿ ಜಾತ್ರೆಗೆ 2 ಲಕ್ಷಕ್ಕಿಂತ ಅಧಿಕ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ.  

ಬೊಮ್ಮನಕಟ್ಟೆ ಅಡ್ರೆಸ್ ಕೇಳಿ, ಬೈಕ್​ ಸವಾರನ ಮುಖಕ್ಕೆ ಗುದ್ದಿದ ದುಷ್ಕರ್ಮಿಗಳು ಚಾಕು ತೋರಿಸಿ! ಮೊಬೈಲ್​, ದುಡ್ಡು ಕಿತ್ಕೊಂಡು ಪರಾರಿ! ಆತಂಕ ಮೂಡಿಸಿದ ಘಟನೆ

ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಳಾಸ ಕೇಳುವ ನೆಪದಲ್ಲಿ  ಬೈಕ್​ ಸವಾರನೊಬ್ಬನನ್ನ ಸುಲಿಗೆ ಮಾಡಲಾಗಿದೆ. ಶಿವಮೊಗ್ಗ ನಗರದ ರೈಲ್ವೆ ಸ್ಟೇಷನ್​ ಸಮೀಪವೇ ಈ ಘಟನೆ ಸಂಭವಿಸಿದೆ. ದಿನಾಂಕ:- 02-08-2023 ರಂದು ನಡೆದ ಘಟನೆ ಇದಾಗಿದೆ. ಘಟನೆ ನಡೆದ ದಿನ ಬಿದರೆಯಿಂದ ಬೈಕ್​ ಸವಾರರೊಬ್ಬರು  100 ಅಡಿ ರಸ್ತೆಯಲ್ಲಿ ಬರುತ್ತಿದ್ದರು. ಈ ವೇಳೇ ಅವರನ್ನು ಹಿಂದಿನಿಂದ ಫಾಲೋ ಮಾಡಿದ್ದ ಇಬ್ಬರು  ಬೊಮ್ಮನಕಟ್ಟೆ ಹೋಗುವುದು ಹೇಗೆ ಎಂದು ವಿಚಾರಿಸಿದ್ದಾರೆ. ಈ ವೇಳೆ, ದೂರುದಾರ ಬೈಕ್​ ನಿಲ್ಲಿಸಿ ಅಡ್ರೆಸ್ ಹೇಳಿದ್ದಾರೆ. ಅಷ್ಟರಲ್ಲಿ ಬೈಕ್​ನಿಂದ ಇಳಿದ ದುಷ್ಕರ್ಮಿ, ಸಂತ್ರಸ್ತ ನಾಗರಾಜ್​ರ  ಬೈಕ್ ಕೀ ತೆಗೆದುಕೊಂಡು ಅವರ  ಮುಖಕ್ಕೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಇನ್ನೊಬ್ಬ ದುಷ್ಕರ್ಮಿ ಚಾಕು ನಾಗರಾಜ್​ರಿಂದ  ಮೊಬೈಲ್ ಹಾಗೂ  ಹಣ ಕಿತ್ತುಕೊಂಡಿದ್ದಾರೆ.  10000/- ರೂ ನಗದು ಹಣ ವೀವೋ ಕಂಪನಿಯ  ಮೊಬೈಲ್ ಅನ್ನು ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿ ನಾಗರಾಜ್​ರಿಗೆ ಮೆಗ್ಗಾನ್​ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ಧಾರೆ. ಆನಂತರ ನಾಗರಾಜ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.  


ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

Share This Article