ಕದ್ದೊಯ್ದ ಎತ್ತುಗಳ ದಾರಿ ಕಾಯುತ್ತಾ ಕೊಟ್ಟಿಗೆಯಲ್ಲಿ ಕಣ್ಣೀರಿಡ್ತಿದ್ಧಾನೆ ಅನ್ನದಾತ! ಮನಕಲಕುತ್ತದೆ ಮಣ್ಣಿನ ಮಗನ ಕಥೆ

KARNATAKA NEWS/ ONLINE / Malenadu today/ Jul 15, 2023 SHIVAMOGGA NEWS 

ಮನೆ ಮಕ್ಕಳಂತೆ ಎತ್ತುಗಳನ್ನು ಸಾಕುತ್ತಾರೆ ನಮ್ಮ ರೈತರು. ಅದಕ್ಕೆ ನೋವಾದ್ರೆ, ಅನ್ನದಾತ ಕಣ್ಣೀರು ಹಾಕುತ್ತಾನೆ. ಅಂತಹ ಬಾಂದವ್ಯ ಹೊಂದಿದ್ದ ಎತ್ತನ್ನು ತಮ್ಮಿಂದ ದೂರ ಮಾಡಿದರೆ, ರೈತನೊಬ್ಬ ಹಾಕುವ ಶಾಪ ತಟ್ಟದೆ ಇರದು. ಸದ್ಯ ದಾವಣಗೆರೆ ಜಿಲ್ಲೆ ನ್ಯಾಮತಿಯಲ್ಲಿನ ರೈತರೊಬ್ಬರು ಹೀಗೆ ತಮ್ಮ ಎತ್ತುಗಳನ್ನ ಕದ್ದೊಯ್ದವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೆ ತಮ್ಮ ಎತ್ತುಗಳು ವಾಪಸ್ ಬರುತ್ತವೆ ಎಂದು ಕೊಟ್ಟಿಗೆಯಲ್ಲಿಯೇ ಕುಳಿತು ಕಣ್ಣೀರು ಹಾಕುತ್ತಿದ್ದಾರೆ. 

ನಡೆದಿದ್ದೇನು?

ನ್ಯಾಮತಿಯ ಕಂಕನಹಳ್ಳಿಯಲ್ಲಿನ ನಿವಾಸಿ ಲೋಕನಗೌಡ ಎಂಬವರಿಗೆ ಸೇರಿದ ಎತ್ತುಗಳನ್ನು ರಾತೋರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ. ಜೀವಕ್ಕೆ ಜೀವ ಎನ್ನುವಷ್ಟು ಪ್ರೀತಿಸ್ತಿದ್ದ ಎತ್ತುಗಳನ್ನ ಕದ್ದೊಯ್ದಿದ್ದರಿಂದ ಕುಗ್ಗಿರುವ ರೈತ, ಅದನ್ನ ಹುಡುಕಿಕೊಡಿ ಎಂದು ಪೊಲೀಸರಿಗೂ ದೂರುಕೊಟ್ಟಿದ್ದಾರೆ. ತಮಗೆ ತಿಳಿದ ಜಾಗದಲ್ಲೆಲ್ಲಾ ಹುಡುಕಾಡಿದ್ದಾರೆ, ತಮ್ಮವರಿಗೆ ತಿಳಿದ ಸೋಶಿಯಲ್ ಮೀಡಿಯಾದಲ್ಲಿ ಫಟೋ ಹಾಕಿ ಹುಡುಕಿ ತಿಳಿಸುವಂತೆ ಮನವಿ ಮಾಡಿದ್ಧಾರೆ. ಕೊನೆಗೆ ದಾರಿ ಕಾಣದೇ ಎತ್ತುಗಳ ಕೊಟ್ಟಿಗೆಯಲ್ಲಿ ಕುಳಿತು ಕಣ್ಣಿರು ಹಾಕುತ್ತಿದ್ದಾರೆ. ಇವರ ಪರಿಸ್ಥಿತಿಯನ್ನು ನೋಡಲಾಗದೇ ಊರಿನವರು ಸಹ ಎತ್ತುಗಳನ್ನ ಯಾರಾದರೂ ತೆಗೆದುಕೊಂಡು ಹೋಗಿದ್ದರೆ, ವಾಪಸ್ ತಂದುಬಿಡಲಿ ಎಂದು ಮನವಿ ಮಾಡುತ್ತಿದ್ದಾರೆ. 


ಶಿವಮೊಗ್ಗ ಸಿಟಿಯಲ್ಲಿ ವೀಲಿಂಗ್! ಕಾಲೇಜುಗಳ ಬಳಿಯಲ್ಲಿ ಬೈಕ್​ ಸ್ಟಂಟ್ ಮಾಡ್ತಿದ್ದ ಯುವಕರಿಗೆ ಪೊಲೀಸರು ನೀಡಿದ್ರು ಶಾಕ್

ಸಾಗರ ತಾಲ್ಲೂಕಿನ ಐಗಿನಬೈಲ್​ನಲ್ಲಿ ಅಪಘಾತಕ್ಕೀಡಾಡ ಖಾಸಗಿ ಬಸ್​! ಅನುಮಾನಕ್ಕೂ ಕಾರಣವಾಯ್ತು ಮಾಂಸದ ಮೂಟೆ!

ಅಧಿಕಾರಿಗಳ ಆಟ, ಜನಪ್ರತಿನಿಧಿಗಳಿಗೆ ಜೀವ ಸಂಕಟ! ಹೊಸನಗರದಲ್ಲಿ ಇದೆಂಥಾ ಅವಸ್ಥೆ ಮಾರಾಯ್ರೆ

!ಶಿವಮೊಗ್ಗಕ್ಕೂ ಬಂದ ಕೃತಕ ಸುಂದರಿ! ವಿದ್ಯಾರ್ಥಿಗಳ ಪ್ರಯತ್ನದಲ್ಲಿ ಸೃಷ್ಟಿಯಾದ ಗೀತಾ? ಯಾರಿವಳು ಸಹ್ಯಾದ್ರಿ ನ್ಯೂಸ್ ಆ್ಯಂಕರ್​ ಗೊತ್ತಾ?

 

 

Leave a Comment