ದೇವರ ಮುಂದೆ ಅಜ್ಜಿ ಮರ್ಡರ್​/ ಕೇಳೋರೆ ಇಲ್ಲದ ಅನಾಥೆ ಸಾವಿಗೆ, ನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್​/ EXCLUSIVE JP REPORT

Malenadu Today

ದೇವಸ್ಥಾನದ ಹುಂಡಿ ಕದಿಯಲು ಬಂದವನು ಭಿಕ್ಷುಕಿಯನ್ನು ಕೊಲೆ ಮಾಡಿದ್ದು ಹೇಗೆ ? ಸಿಸಿ ಕ್ಯಾಮರದಲ್ಲಿನ ನಡಿಗೆಯ ಶೈಲಿ ಕೊಲೆ ಆರೋಪಿಯ ಸುಳಿವು ನೀಡಿದ್ದು ಹೇಗೆ ಗೊತ್ತಾ ? ಕರುಣೆ ಇಲ್ಲದ ಕೊಲೆಗಾರ, ಭಿಕ್ಷುಕಿಯನ್ನು ಕೊಲೆ ಮಾಡಿ ಯಾವ ಸುಳಿವನ್ನು ನೀಡದೆ ಹೋದಾಗ ಆನಾಥೆಯ ಸಾವಿಗೆ ನ್ಯಾಯ ಕೊಟ್ಟ ದೇವರು ಯಾರು ಅಂತಿರಾಇತ್ತಿಚ್ಚಿನ ದಿನಗಳಲ್ಲಿ ಭದ್ರಾವತಿ ಪೊಲೀಸರು ಭೇದಿಸಿದ ಎವಿಡೆನ್ಸ್ ಇಲ್ಲದ ಅಪರೂಪದ ಪ್ರಕರಣದ ಕಂಪ್ಲೀಟ್ ಸ್ಟೋರಿ ಇಲ್ಲಿದೆ

ಇದನ್ನು ಸಹ ಓದಿ :ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

Malenadu Today

ಜೆಪಿ ಬರೆಯುತ್ತಾರೆ

ಜೀವನದ ಇಳಿ ಸಂಜೆಯಲ್ಲೂ ಭಿಕ್ಷೆ ಬೇಡಿ ದೇವಸ್ಥಾನದಲ್ಲಿ ಆಶ್ರಯ ಪಡೆಯುತ್ತಿದ್ದ ಮಹಾ ತಾಯಿ ಅವಳು. ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಬದುಕಿದ್ದ ಅವಳಿಗೆ ದೇವಸ್ಥಾನದ ಆಂಜನೇಯನೇ ಶ್ರೀರಕ್ಷೆಯಾಗಿದ್ದನು. ದಿನವಿಡೀ ಭಿಕ್ಷೆ ಬೇಡಿ ರಾತ್ರಿ ದೇವಸ್ಥಾನದಲ್ಲಿ ಆಶ್ರಯ ಪಡೆಯುತ್ತಿದ್ದ ವೃದ್ಧೆಗೆ ಅಂದು ದೇವರೂ ಕೂಡ ಕಾಪಾಡಲು ಸಾಧ್ಯವಾಗಲಿಲ್ಲ. ಸಹಾಯ ಹಸ್ತ ಬೇಡಿ ಬಂದವನೇ..ಆಕೆಯ ಬಳಿ ಇದ್ದ ಬಿಡಿಗಾಸನ್ನು ನೋಡಿ ರಕ್ಕಸ ಕೃತ್ಯ ಎಸಗಿದ್ದ. ಎದೆಗೆ ಕಾಲು ಅದುಮಿ, ಕೊಲೆ ಮಾಡಿ ಭಿಕ್ಷುಕಿಯ ಬಳಿ ಇದ್ದ ಹಬಣವನ್ನು ದೋಚಿ, ಸ್ಥಳದಲ್ಲಿ ಯಾವ ಕ್ಲೂ ಅನ್ನು ಬಿಡದೆ ಬರಾರಿಯಾಗಿದ್ದ. ಭಿಕ್ಷುಕಿ ಕೊಲೆಗೆ ನ್ಯಾಯ ಕೊಡಿ ಎಂದು ಯಾರು ಹೋರಾಟ ಪ್ರತಿಭಟನೆ ಮಾಡಿರಲಿಲ್ಲ..ಇಲ್ಲಿ ಪೊಲೀಸರು ಕೂಡ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವಂತ ಪ್ರಸಂಗ ಕೂಡ ಎದುರಾಗಲಿಲ್ಲ. ಆದರೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಪ್ರಕರಣವನ್ನು ಗಂಭೀರವಾಗಿಯೇ ಪರಿಗಣಿಸಿ, ಅನಾಥೆಯ ಸಾವಿಗೂ ನ್ಯಾಯ ಕೊಡಿಸಿದ್ದಾರೆ..ಇಂತಹ ಅಪರೂಪದ ಪ್ರಕರಣದ ಸಂಪೂರ್ಣ ಡಿಟೇಲ್ಸ್​ ಹೇಳ್ತೀನಿ…ವೀಕ್ಷಕರೇ ಓದಿ.. 

Malenadu Today

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ಪೇಪರ್ ಟೌನ್​ನಲ್ಲಿ ನಡೆದಿತ್ತು ಅಜ್ಜಿ ಮರ್ಡರ್

02-12-22 ರಂದು ಭದ್ರಾವತಿ ಪೇಪರ್ ಟೌನ್ ವ್ಯಾಪ್ತಿಯ ಸುಣ್ಣದ ಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಭಿಕ್ಷೆ ಬೇಡಿ ಬದುಕುತ್ತಿದ್ದ ಶಂಕರಮ್ಮ ನಿಗೆ ಅಂದು ದೇವರು ಕೂಡ ಕಾಪಾಡಲು ಸಾಧ್ಯವಾಗಲಿಲ್ಲ. ಯಾವುದೇ ಭಯವಿಲ್ಲದೆ ನಿರ್ಭೀತಿಯಿಂದ ಮಲಗುತ್ತಿದ್ದ ಶಂಕರಮ್ಮ ಮಾರನೇ ದಿನ ಇದ್ದಕಿದ್ದ ಹಾಗೇ. ದೇವಸ್ಥಾನದ ಎದುರಿನ ಅಂತರಘಟ್ಟಮ್ಮ ದೇವರ ಗುಡಿ ಕಾಂಪೌಂಡ್ ಬಳಿ ಶವವಾಗಿದ್ದರು. ಶಂಕರಮ್ಮ ಸಾವಿನ ಸುದ್ದಿ, ಗ್ರಾಮಸ್ಥರಿಗೆ ಆಘಾತವನ್ನು ನೀಡಿತ್ತು.

Malenadu Today

ಗ್ರಾಮಸ್ಥರು ಶಂಕ್ರಮಮ್ಮನ ಸಾವಿಗೆ ಮರುಗಿದರು.ಕತ್ತು ಹಿಸುಕಿ ಶಂಕರಮ್ಮಳನ್ನು ಕೊಲೆ ಮಾಡಲಾಗಿತ್ತು. ಭದ್ರಾವತಿ ಪೇಪರ್ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು. ಎಸ್ಪಿ ಮಿಥುನ್ ಕುಮಾರ್ ಅನಾಥ ವೃದ್ಧೆಯ ಸಾವಿಗೆ ನ್ಯಾಯ ಕೊಡಿಸಬೇಕೆಂಬ ಒಂದಂಶದ ಕಾರ್ಯದಡಿ, ಭದ್ರಾವತಿ .ಎಸ್.ಪಿ ಜಿತೇಂದ್ರ ಕುಮಾರ್​ರಿಗೆ ತನಿಖೆ ಚುರುಕು ಗೊಳಿಸಬೇಕೆಂದು ಸೂಚಿಸಿದರು. ಅದರಂತೆ .ಎಸ್.ಪಿಯವರು ಠಾಣೆಯ ಪಿಐ ಮಂಜುನಾಥ್ . ನೇತೃತ್ವ ಪಿ.ಎಸ್. ಶಿಲ್ಪಾ ನಾಯನೇಗಲಿ,ಮತ್ತು ಸಿಬ್ಬಂದಿಗಳಾದ ರತ್ನಾಕರ್, ವಾಸುದೇವ್, ಚಿನ್ನನಾಯ್ಕ, ಹನುಮಂತ ಅವಟಿ, ಆದರ್ಶ ಶೆಟ್ಟಿ, ಮೌನೇಶ್, ಅರುಣ್ ಮತ್ತು ವಿಕ್ರಂ ರವನ್ನು ಒಳಗೊಂಡ ತಂಡ ರಚನೆ ಮಾಡಿದ್ರು.

Malenadu Today

ಇದನ್ನು ಸಹ ಓದಿ : ರೈತರೇ ಎಚ್ಚರ, ಜೇಡಿಮಣ್ಣು ಕೊಟ್ಟು ಗೊಬ್ಬರ ಅಂತಾರೆ …ಹುಷಾರ್..ಇಲ್ಲಿದೆ ನೋಡಿ ಸಾಕ್ಷಿ 

ದೇವಸ್ಥಾನದ ಸಿಸಿ ಕ್ಯಾಮರಾದಲ್ಲಿ ಸಿಗದ ಸುಳಿವು

ಭಿಕ್ಷುಕಿ ಶಂಕ್ರಮ್ಮ ಕೊಲೆಯಾದ ಸಂದರ್ಭದಲ್ಲಿ ತನಿಖೆಗೆ ಮುಂದಾದ ಇನ್ ಸ್ಪೆಕ್ಟರ್ ಮಂಜುನಾಥ್ ರವರ ತಂಡಕ್ಕೆ ದೇವಸ್ಥಾನದ ಬಳಿ ಯಾವ ಕ್ಲೂ ಕೂಡ ಸಿಗಲಿಲ್ಲ. ದೇವಸ್ಥಾನದ ಸಿಸಿ ಕ್ಯಾಮರಾ ಹಾಳಾಗಿ ವಾರವಾಗಿತ್ತು. ಆರೋಪಿಯ ಯಾವ ಸುಳಿವು ಪೊಲೀಸರ ಬಳಿ ಇರಲಿಲ್ಲ. ಬರಿಗೈಯಲ್ಲಿ ಬೇಸಿಕ್ ಪೊಲೀಸಿಂಗ್ ಗೆ ಇಳಿಯಬೇಕಾದ ಅನಿವಾರ್ಯತೆ ಮಂಜುನಾಥ್ ತಂಡಕ್ಕೆ ಎದುರಾಯಿತು. ಸುಣ್ಣದಹಳ್ಳಿಯಿಂದ ಮೇನ್ ರೋಡ್ ವರೆಗೆ ಮನೆಗಳೂ ಕಡಿಮೆ. ಶನಿವಾರ ದಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭಕ್ತರು ಬರುವುದು ಬಿಟ್ಟರೇ, ಇಲ್ಲಿ ಜನಸಂಚಾರ ಕಡಿಮೆ.Malenadu Today

ಶಂಕ್ರಮ್ಮ ಕೊಲೆಯಾದ  ರಾತ್ರಿಯ ಸಿಸಿ ಕ್ಯಾಮರಾ ಫೂಟೆಜ್ ಇನ್ನೆಲ್ಲಿ ಸಿಗಬಹುದು ಎಂಬ ಉದ್ದೇಶದಿಂದ ಪೊಲೀಸರು ತರೀಕೆರೆ, ಬಾರಂದೂರು ಕ್ರಾಸ್ ಮತ್ತು ಭದ್ರಾವತಿ ಮಾರ್ಗದಲ್ಲಿ ಅಂದು ರಾತ್ರಿ ಸಂಚರಿಸಿದ ವ್ಯಕ್ತಿ ಮತ್ತು ವಾಹನಗಳ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿದ್ರು, ಕೊಲೆಯಾದ ಶಂಕ್ರಮ್ಮಳ ಹಂತಕನ ಜಾಡು ಹಿಡಿದು ಡಾಗ್ ಸ್ಕ್ವಾಡ್​ ಭದ್ರಾವತಿ ಮಾರ್ಗವನ್ನು ಸೂಚಿಸಿತ್ತು. ಅದರಂತೆ ಪೊಲೀಸರು ಕೂಡ ಭದ್ರಾವತಿ ಮಾರ್ಗವನ್ನು ಕೂಡ ಕೇಂದ್ರೀಕರಿಸಿದ್ರು.ಭದ್ರಾವತಿ ನೈಟ್ ರೌಂಡ್ ನಲ್ಲಿರುವ ಎಲ್ಲಾ ಸಿಸಿ ಕ್ಯಾಮರಾಗಳನ್ನು ಕೂಡ ಚೆಕ್ ಮಾಡಲಾಗಿತ್ತು. ಈ ವೇಳೆ ಒಂದು ಸಿಸಿ ಕ್ಯಾಮರಾದಲ್ಲಿದ್ದ ಒಂದು ದೃಶ್ಯ ಪೊಲೀಸರ ಅನುಮಾನಕ್ಕೆ ಕಾರಣವಾಯ್ತು.

ಇದನ್ನು ಸಹ ಓದಿ : ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್​ಪೋಸ್ಟ್​ನಲ್ಲಿ 46 ಕೇಸ್​/ ಏನಿದು? ವಿವರ ನೋಡಿ

ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಇಟ್ರು ನಿಗಾ

ಹೌದು ಪೊಲೀಸರಿಗೆ ಕ್ರೈಂ ನಲ್ಲಿ ಒಂದು ಸಣ್ಣ ಸುಳಿವು ಸಿಕ್ರೂ ಆರೋಪಿ ಅಂದರ್ ಗ್ಯಾರಂಟಿ ಅನ್ನೋ ಹಾಗೆ. ಪ್ರಕರಣದಲ್ಲಿ ಹದಿನೈದು ದಿನಗಳಿಂದ ಹಗಲು ರಾತ್ರಿ ನಿದ್ದೆಗೆಟ್ಟು ಭಿಕ್ಷುಕಿಯ ಕೊಲೆಗೆ ನ್ಯಾಯ ಕೊಡಿಸಬೇಕೆಂದು ಪಣತೊಟ್ಟಿದ್ದ ಎಸ್ಪಿ ಮಿಥುನ್ ಕುಮಾರ್ ತಂಡಕ್ಕೆ ಸಿಸಿ ಕ್ಯಾಮರಾದಲ್ಲಿ ಸಣ್ಣ ಕ್ಲೂ ಸಿಕ್ಕಿತ್ತುಭದ್ರಾವತಿ ಟೆಂಪೋ ಸ್ಟಾಂಡ್ ಬಳಿಯಿದ್ದ ಸಿಸಿ ಕ್ಯಾಮರದಲ್ಲಿ ಓರ್ವ ವ್ಯಕ್ತಿ ಕೊಲೆಯಾದ ರಾತ್ರಿ ನಡೆದುಕೊಂಡು ಬರುತ್ತಿದ್ದ ದೃಶ್ಯ ಕಂಡಿತ್ತು. ಸಿಸಿ ಕ್ಯಾಮರಾದ ಪೂಟೇಜ್ ಹತ್ತಿರದಿಂದ ನೋಡಿದಾಗ ಅದು ಬ್ಲರ್ ಆಗಿತ್ತು. ಮುಖ ಸರಿಯಾಗಿ ಕಾಣುತ್ತಿರಲಿಲ್ಲ. ಆದ್ರೆ ಆತ ನಡೆಯುವ ಶೈಲಿಯನ್ನು ಪೊಲೀಸರು ಗಮನಿಸಿದ್ರು ಹಾಗೂ ಅಂದಾಜಿಸಿದ್ದರು.

Malenadu Today

ಪೊಲೀಸ್​ ಎಂ..ಬಿ ಶೀಟ್ ನಲ್ಲಿ ರೀತಿ ನಡೆಯುವವರು ಯಾರು ಎಂಬುದನ್ನು ಕ್ರೈಂ ಪೊಲೀಸ್ರು  ತಡಕಾಡಿದ್ರು. ರೀತಿಯ ವ್ಯಕ್ತಿಗಳನ್ನು ವಾಚ್ ಅಂಡ್ ಗಾರ್ಡ್ ಮಾಡಿದ್ರು. ಅಂತಿಮವಾಗಿ ಪೊಲೀಸರ ಪರಿಶ್ರಮಕ್ಕೆ ಫಲ ಸಿಕ್ಕಿತ್ತು. ಸಾರ್ ರೀತಿ ನಡೆಯುವ ವ್ಯಕ್ತಿ ನಮ್ ಅಪರಂಜಿ ಬಡಾವಣೆಯಲ್ಲಿದ್ದಾನೆ. ಅವನ ಮೇಲೆ ಪೋಕ್ಸೋ ಕೇಸ್ ಕೂಡ ಇದೆ ಸಾರ್ ಅಂತಾ ಕ್ರೈಂ ಸಿಬ್ಬಂದಿಗಳು ಹೇಳಿದ್ರು. ತಕ್ಷಣ ವ್ಯಕ್ತಿಯನ್ನು ಎರಡು ದಿನ ವಾಚ್ ಮಾಡಿ, ಬಂಧಿಸಿದಾಗ ಆತ ಸತ್ಯವನ್ನು ಬಾಯ್ಬಿಟ್ಟ.

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ಕರುಣೆಯಿಲ್ಲದ ಕರುಣಾಕರ

ಶಂಕ್ರಮ್ಮಳನ್ನು ಕೊಲೆ ಮಾಡಿದ ಆರೋಪಿ ಕರುಣಾಕರ(23) ನನ್ನು ಪೊಲೀಸ್ರು ಬಂಧಿಸಿದ್ರು. ಆತ ವಿಚಾರಣೆಯಲ್ಲಿ ಬಾಯ್ಬಿಟ್ಟ ಸತ್ಯ ಪೊಲೀಸರನ್ನು ದಂಗಾಗುವಂತೆ ಮಾಡಿತ್ತು. ಈತ ಮೂಲತಃ ಉಡುಪಿ ಜಿಲ್ಲೆಯ ಕಂಬದ ಕೋಣೆ ಗ್ರಾಮನದವನು. ಭದ್ರಾವತಿ ಅಪರಂಜಿ ಬಡಾವಣೆಯಯಲ್ಲಿ ಕಳೆದ ಮೂರು ವರ್ಷಗಳಿಂದ ವಾಸವಿದ್ದ. ಇಲ್ಲಿ ಯುವತಿಯೊಬ್ಬಳ ವಿಷಯದಲ್ಲಿ ಪೋಕ್ಸೋ ಕೇಸ್ ಎದುರಿಸುತ್ತಿದ್ದ ದೇವಸ್ಥಾನ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳು ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ.

Malenadu Today

ನ್ಯಾಯಾಲಯಕ್ಕೆ ಹಾಜರಾಗಬೇಕಾದ ಆರೋಪಿ ಹಿಂದಿನ ದಿನ ನಡೆಸಿದ್ದ ಹೀನ ಕೃತ್ಯ

ಕರುಣಾಕರ ಕರುಣೆ ಇಲ್ಲದ ಆರೋಪಿ. ಈತ ಡಿಸೆಂಬರ್ ಮೂರರಂದು ಭದ್ರಾವತಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದ್ರೆ ಆತನ ಬಳಿ ಬಿಡಿಗಾಸು ಇರಲಿಲ್ಲ. ಅಂದು ರಾತ್ರಿ ಯಾವುದಾದ್ರೂ ದೇವಸ್ಥಾನದ ಹುಂಡಿ ಕದಿಯಲು ಸ್ಕೆಚ್ ಹಾಕಿದ್ದ. ಎಣ್ಣೆ ಮತ್ತಿನಲ್ಲಿ ನಡೆದುಕೊಂಡೇ ಸುಣ್ಣದ ಹಳ್ಳಿಯ ಅಂಜನೇಯ ದೇವಸ್ಥಾನದ ಬಳಿ ಬಂದಿದ್ದ.

ದೇವಸ್ಥಾನದ ಎದುರಿನ ಅಂತರಘಟ್ಟಮ್ಮ ಗುಡಿಯ ಕಾಂಪೌಂಡ್ ನಲ್ಲಿ ಭಿಕ್ಷೆ ಬೇಡುತ್ತಿದ್ದ ಶಂಕ್ರಮ್ಮ ಮಲಗಿದ್ದಳು. ಅಲ್ಲೇ ಮದ್ಯವನ್ನು ಸೇವಿಸಲು ಶಂಕ್ರಮ್ಮಳ ಬಳಿ ನೀರನ್ನು ಕೇಳಿದ್ದಾನೆ. ಶಂಕ್ರಮ್ಮ ಎದ್ದು ತಗಾ ಮಗಾ ನೀರು ಎಂದು ನೀಡಿದ್ದಾಳೆ. ಕುಶಲೋಪಚರಿ ವಿಚಾರಿಸಿದ್ದಾಳೆ. ಆಗ ಶಂಕ್ರಮ್ಮಳ ಬಳಿ ಒಡವೆ ಹಣವಿರುವುದನ್ನು ಕರುಣಾಕರ ಖಾತ್ರಿ ಮಾಡಿಕೊಂಡಿದ್ದಾನೆ.

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ – ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

 ವೃದ್ಧೆ ಎದೆ ಮೇಲೆ ಕಾಲಿಟ್ಟು ಕೊಲೆ

ಶಂಕ್ರಮ್ಮಳ ಬಳಿಯಿದ್ದ ಹಣ ಮತ್ತು ಒಡವೆಯನ್ನು ನೋಡಿದ ಕರುಣಾಕರ ದೇವಸ್ಥಾನ ಹುಂಡಿ ಮೇಲಿನ ಆಸೆ ಬಿಟ್ಟಿದ್ದಾನೆ. ಶಂಕ್ರಮ್ಮಳ್ಳ ಬಾಯಿಗೆ ಕೈಯಿಟ್ಟು. ಆಕೆಯ ಎದೆ ಮೇಲೆ ಎರಡು ಕಾಲ್ಗಳ್ಳನ್ನಿಟ್ಟು ಉಸಿರು ಗಟ್ಟಿಸಿದ್ದಾನೆ. ಶಂಕ್ರಮ್ಮ ಕಿರುಚಿಕೊಂಡರೂ ಯಾರು ಅಲ್ಲಿ ಬರೋ ಸ್ಥಿತಿಯಲ್ಲಿರಲಿಲ್ಲ.ಯಮಸ್ವರೂಪಿ ಮುಂದೆ ಶಂಕ್ರಮ್ಮ ಉಸಿರು ಚೆಲ್ಲಿದ್ದಾಳೆ.

ಆಕೆಯ ಕೊಲೆಯನ್ನು ಆಂಜನೇಯ ಮತ್ತು ಅಂತರಘಟ್ಟಮ್ಮ ದೇವರುಗಳು ಮಾತ್ರ ಮೂಕ ಪ್ರೇಕ್ಷರರಾಗಿ ಅಂದು ನೋಡಿದ್ದಾರಷ್ಟೆ. ಅನಾಥೆಯ ಸಾವಿಗೆ ಪೊಲೀಸರಿಂದ ನ್ಯಾಯ ಕೊಡಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು. ಏನೇ ಆಗಲಿ ಕ್ಲೂ ಇಲ್ಲದ ಪ್ರಕರಣವನ್ನು ಬೇಸಿಕ್ ಪೊಲೀಸಿಂಗ್ ಮಾಡಿ ಭದ್ರಾವತಿ ಪೇಪರ್ ಟೌನ್ ಪೊಲೀಸರು ಭೇದಿಸಿದ್ದು ನಿಜಕ್ಕೂ ಶ್ಲಾಘನೀಯ. ನೊಂದವರಿಗೆ ನ್ಯಾಯ ಎನ್ನುವ ಮಾತನ್ನು ಎಸ್ಪಿ ಮಿಥುನ್ ಕುಮಾರ್ ಸಾರ್ವಜನಿಕರಿಗೆ ಮೂಲಕ ಅರ್ಥೈಸಿದ್ದಾರೆ.

ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

 

 

 

 

 

 

 

 

 

Share This Article