ಫ್ರೀಡಂ ಪಾರ್ಕ್​ ನಲ್ಲಿ ಯುವನಿಧಿ ಕಾರ್ಯಕ್ರಮ! ಎಷ್ಟೊತ್ತಿಗೆ ಕಾರ್ಯಕ್ರಮ! ಹೇಗಿದೆ ಸಿದ್ದತೆ! ರೂಟ್ ಮ್ಯಾಪ್​ ವಿವರ

Yuva Nidhi Scheme event at Freedom Park tomorrow ! How is the preparation! Rootmap Details

ಫ್ರೀಡಂ ಪಾರ್ಕ್​ ನಲ್ಲಿ ಯುವನಿಧಿ ಕಾರ್ಯಕ್ರಮ! ಎಷ್ಟೊತ್ತಿಗೆ ಕಾರ್ಯಕ್ರಮ! ಹೇಗಿದೆ ಸಿದ್ದತೆ! ರೂಟ್ ಮ್ಯಾಪ್​ ವಿವರ
Yuva Nidhi Scheme event at Freedom Park tomorrow ! How long is the program! How is the preparation! Rootmap Details

SHIVAMOGGA |  Jan 12, 2024  |  ರಾಜ್ಯ ಸರ್ಕಾರದ ಮಹತ್ಷಕಾಂಕ್ಷೆಯ 5ನೇ ಗ್ಯಾರಂಟಿ ಘೋಷಣೆ ಯುವ ನಿಧಿ ಯೋಜನೆಯಡಿ ಫಲಾನುಭವಿಗಳಿಗೆ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರ ಸಜ್ಜಾಗಿದೆ. 

ಯುವಜನರ ಆಶಾಕಿರಣವಾದ ಸ್ವಾಮಿ ವಿವೇಕಾನಂದ ಜನ್ಮ ದಿನವಾದ ಶುಕ್ರವಾರ ಅಂದರೆ ಜನವರಿ. 12 ರಂದು ನಡೆಯುವ ಈ ಐತಿಹಾಸಿಕ ಸಮಾರಂಭಕ್ಕೆ  ಫ್ರೀಡಂ ಪಾರ್ಕ್‌( ಹಳೆ ಜೈಲ್‌ ಆವರಣ) ನ ವಿಶಾಲವಾದ ಜಾಗದಲ್ಲಿ ಬೃಹತ್‌ ವೇದಿಕೆ ನಿರ್ಮಾಣವಾಗಿದೆ. 85  ಸಾವಿರಕ್ಕೂ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. 

ಕಾರ್ಯಕ್ರಮಕ್ಕೆ ಒಂದುವರೆ ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ. ಅಲ್ಲದೆ ನೆರೆಹೊರೆ ಜಿಲ್ಲೆಯಿಂದಲೂ ವಾಹನಗಳಲ್ಲಿ ಜನರು ಬರಲಿದ್ದಾರೆ. ಅವರಿಗಾಗಿ ವಿವಿಧ ವ್ಯವಸ್ಥೆಗಳನ್ನ ಕಲ್ಪಿಸಲಾಗಿದೆ. 

ಗೂಗಲ್ ರೂಟ್​ ಮ್ಯಾಪ್​

ಸಿಎಂ ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ ಪಾರ್ಕಿಂಗ್ ವಿವರ & Google ರೂಟ್ ಮ್ಯಾಪ್ ಇಲ್ಲಿದೆ! ಈ ಲಿಂಕ್​ ಕ್ಲಿಕ್ ಮಾಡಿದ್ದಲ್ಲಿ, ನಾಳಿನ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಕೈಗೊಂಡ ವಿವರಗಳು ಸಿಗಲಿದೆ.  ಇದರಲ್ಲಿ ಪೊಲೀಸ್ ಇಲಾಖೆ ನೀಡಿರುವ ಪಾರ್ಕಿಂಗ್ ಹಾಗೂ ರೂಟ್ ಮ್ಯಾಪ್​ ನ ಗೂಗಲ್​ ಮ್ಯಾಪ್ ಸಿಗಲಿದೆ. ಅದರ ಮೇಲೆ ಕ್ಲಿಕ್ ಮಾಡಿದರೇ ಪೂರ್ಣ ವಿವರಗಳನ್ನ ನೋಡಬಹುದು. 

ವಾಹನ ಸಂಚಾರ ಮಾರ್ಗ ಬದಲಾವಣೆ

ಇನ್ನೂ ಯುವನಿಧಿ ಕಾರ್ಯಕ್ರಮ! ವಾಹನ ಸಂಚಾರದ ಮಾರ್ಗ ಬದಲಾವಣೆ! ಮಾಡಲಾಗಿದ್ದು ಓಡಾಡುವ ದಾರಿಯ ವಿವರ ಇಲ್ಲಿ ಲಿಂಕ್​ ನಲ್ಲಿ ನೀಡಲಾಗಿದೆ. ಓದುಗರು ಇದರ ಮೇಲೆ ಕ್ಲಿಕ್ ಮಾಡಿದರೇ ಯಾವೆಲ್ಲಾ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಕಾರ್ಯಕ್ರಮ ನಡೆಯುವ ಹೊತ್ತಿನಲ್ಲಿ ಯಾವ ದಾರಿಯಲ್ಲಿ ಸಾಗಬೇಕು ಎಂಬುದಕ್ಕೆ ವಿವರಣೆ ಸಿಗಲಿದೆ 

ಎಲ್ಲೆಲ್ಲಿ ಗೊತ್ತಾ ನೋ ಪಾರ್ಕಿಂಗ್

ಅಂತಿಮವಾಗಿ ಫ್ರೀಡಂಪಾರ್ಕ್​ನಲ್ಲಿ ಸಿಎಂ ಕಾರ್ಯಕ್ರಮ! ಹಿನ್ನೆಲೆಯಲ್ಲಿ  ಶಿವಮೊಗ್ಗದಲ್ಲಿ ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ? ವಿವರ ಇಲ್ಲಿನ ಲಿಂಕ್​ ಕ್ಲಿಕ್ ಮಾಡಿದರೆ ಸುಲಭವಾಗಿ ಸಿಗುತ್ತದೆ. ಉಳಿದಂತೆ   ಹಳೆ ಜೈಲು ಆವರಣದ ಪ್ರೀಡಂ ಪಾರ್ಕ್ ನಲ್ಲಿ ಬೃಹತ್ ವೇದಿಕೆ ಸಿದ್ದಗೊಂಡಿದ್ದು, ಕಾರ್ಯಕ್ರಮದ ವೀಕ್ಷಣೆಗೆ ಬೃಹತ್ ಎಲ್ ಇಡಿ ವಾಲ್ ಆಳವಡಿಸಲಾಗಿದೆ

ಎಷ್ಟೊತ್ತಿಗೆ ಕಾರ್ಯಕ್ರಮ 

ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಶಿವಮೊಗ್ಗ ,ದಾವಣಗೆರೆ, ಚಿತ್ರದುರ್ಗಾ, ಚಿಕ್ಕಮಗಳೂರು, ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳು ಹಾಗೂ ಅಷ್ಟೆ ಸಂಖ್ಯೆಯ ಜನರು ಪಾಲ್ಗೊಳ್ಳಲಿದ್ದಾರೆ.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. 

ಶಿವಮೊಗ್ಗ ಹಾಗೂ ನೆರೆಯ ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಯುವ ವಿದ್ಯಾರ್ಥಿಗಳನ್ನು ಸಮಾರಂಭ ಸ್ಥಳಕ್ಕೆ ಕರೆತರಲು ರಸ್ತೆ ಸಾರಿಗೆ ನಿಗಮ ಮತ್ತ ಖಾಸಗಿ ಒಡೆತನದ ಬಸ್ ಹಾಗೂ ಇತರೆ ವಾಹನಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಕಾರ್ಯಕ್ರಮದ ವ್ಯವಸ್ಥಿತ ಆಯೋಜನೆಗಾಗಿ ಅಧಿಕಾರಿಗಳ ತಂಡಗಳನ್ನು ನಿಯೋಜಿಸಲಾಗಿದೆ, ಪ್ರತಿ ಬಸ್‌ ಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದಲ್ಲದೇ, ಸುರಕ್ಷತೆಯ ದೃಷ್ಟಿಯಿಂದ ಪ್ರತಿ ವಿದ್ಯಾರ್ಥಿಯ ಹೆಸರು ಮತ್ತು ಮೊಬೈಲ್ ನಂಬರ್ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.