ತಂದೆ-ತಾಯಿಯಿಲ್ಲದ ಕೊರಗು | ನೇಣಿಗೆ ಶರಣಾದ ಯುವಕ | ತುಂಗಾನದಿಯಲ್ಲಿ ಶವ ಪತ್ತೆ

Malenadu Today

KARNATAKA NEWS/ ONLINE / Malenadu today/ Oct 27, 2023 SHIVAMOGGA NEWS

HOLEHONNURU  | ಭದ್ರಾವತಿ ತಾಲೂಕಿನ ಸೈದರಕಲ್ಲಹಳ್ಳಿ ಗ್ರಾಮದ ಯುವಕ ವೀರೇಶ್ (21) ಗ್ರಾಮದ ದೇವೇಂದ್ರಪ್ಪ ಎಂಬುವರಿಗೆ ಸೇರಿದ ಅಡಕೆ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ದೇವೆಂದ್ರಪ್ಪರ ತೋಟದ ಅಂಚಿನಲ್ಲಿರುವ ಮಾವಿನ ಮರಕ್ಕೆ ಒಂದು ಬಿಳಿ ಪಂಚೆಯನ್ನು ಕುತ್ತಿಗೆಗೆ ಬಿಗಿದುಕೊಂಡು ಮೃತ ಪಟ್ಟಿದ್ದು, ವೀರೇಶನು ತಂದೆ-ತಾಯಿ ಇಲ್ಲದ ಕೊರಗಿನಿಂದ ಜಿಗುಪ್ಪೆಗೊಂಡಿದ್ದರು ಎನ್ನಲಾಗಿದೆ. ಈ ಸಂಬಂಧ   ಠಾಣೆಯಲ್ಲಿ ದೂರು ದಾಖಲಾಗಿದೆ.

 

Malenadu Today

ತುಂಗಾನದಿಯಲ್ಲಿ ಶವ ಪತ್ತೆ

ತೀರ್ಥಹಳ್ಳಿ: ಪಟ್ಟಣದಲ್ಲಿ ಹಾಲು ಮಾರಾಟ ಮಾಡುತ್ತಿದ್ದ ದೇವರಾಜ್ (52) ಎಂಬುವವರ ಶವ ತುಂಗಾನದಿಯಲ್ಲಿ ಗುರುವಾರ ಪತ್ತೆಯಾಗಿದೆ. ಕುವೆಂಪು ರಸ್ತೆ ವಾಸಿಯಾಗಿದ್ದ ಮೃತರು ಮಂಗಳವಾರದಿಂದ ಕಾಣೆಯಾಗಿದ್ದರು ಎನ್ನಲಾಗಿದೆ. ಫಿಟ್ಸ್‌ ಕಾಯಿಲೆಯಿಂದ ನರಳುತ್ತಿದ್ದ ಇವರ ಸಾವಿಗೆ ಖಚಿತ ಕಾರಣ ತಿಳಿದು ಬಂದಿಲ್ಲಾ. ಪತ್ನಿ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

Malenadu Today

 


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!


 

Share This Article