ಕಾಂಗ್ರೆಸ್​ ಸರ್ಕಾರ ಬಂದ್ಮೇಲೆ ಮಳೆ ಹೋಯ್ತಾ? ಮುಂದೆ ದೇವರೇ ಕಾಪಾಡಬೇಕಾ? ಶಿವಮೊಗ್ಗದಲ್ಲಿ CT ರವಿ ಹೇಳಿದ್ದೇನು?

Speaking in Shimoga, BJP leader CT Ravi criticized the Congress governmentಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸಿಟಿ ರವಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ

ಕಾಂಗ್ರೆಸ್​ ಸರ್ಕಾರ ಬಂದ್ಮೇಲೆ ಮಳೆ ಹೋಯ್ತಾ? ಮುಂದೆ ದೇವರೇ ಕಾಪಾಡಬೇಕಾ? ಶಿವಮೊಗ್ಗದಲ್ಲಿ CT  ರವಿ ಹೇಳಿದ್ದೇನು?

 

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS

ಸದ್ದಿಲ್ಲದೇ ಬಿಜೆಪಿ ಇನ್ನೊಂದು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಂಸತ್ ಚುನಾವಣೆಗೆ ಸಿದ್ಧತೆ ನಡೆಸ್ತಿರುವ ಬಿಜೆಪಿ ನನ್ನ ಮಣ್ಣು, ನನ್ನ ದೇಶ ಅಭಿಯಾನ ಕೈಗೊಂಡ ಬೆನ್ನಲ್ಲೆ ಇವತ್ತು ಶಿವಮೊಗ್ಗದಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಸಿದೆ.  ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯನ್ನು ಉದ್ಘಾಟಿಸಿದ ಸಿ.ಟಿ.ರವಿ ನಮ್ಮ ದೇಶವನ್ನು ಆಳಿದ ರಾಷ್ಟ್ರವನ್ನು ಮೀರಿ ನಮ್ಮ ದೇಶ ವಿಶ್ವದ ಐದನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದಿದ್ದಾರೆ. ಕೆಲವರು ದೇಶವನ್ನು ಹಿಂದಕ್ಕೆ ಎಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅವರು ಗುಲಾಮಸ್ಥಿತಿಯ ಮನಸ್ಥಿತಿಯಿಂದ ಹೊರಬಂದಿಲ್ಲ ಎಂದು ತೋರುತ್ತದೆ ಎಂದ ಸಿಟಿ ರವಿ, ಅಂತಹವರನ್ನು ಆ ಮಾನಸಿಕತೆಯಿಂದ ಹೊರತರುವ ಜವಾಬ್ದಾರಿ ನಮ್ಮ ಮೇಲಿದೆ ಎಂದಿದ್ದಾರೆ. 

ಭಾರತ ಅಂದಾಕ್ಷಣ ಕೆಲವರಿಗೆ ದಿಗಿಲು ಶುರುವಾಗಿದೆ. ಪ್ರತಿ ವ್ಯಕ್ತಿಗಿರುವಂತೆ ದೇಶಕ್ಕೂ ಅಸ್ಮಿತೆ ಎಂಬ ಆತ್ಮವಿದೆ, ಭಾರತೀಯತೆ ಈ ದೇಶದ ಆತ್ಮವಾಗಿದೆ ಎಂದ ಸಿಟಿ ರವಿ, ಜಗತ್ತಿನ ಅತ್ಯಂತ ಬಲಾಢ್ಯ ರಾಷ್ಟ್ರಗಳು ಅಂತಾ ಪರಿಭಾವಿಸುವ ರಾಷ್ಟ್ರಗಳ ನಾಯಕರು ಕೂಡ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮುಕ್ತ ಕಂಠದಿಂದ ಹೊಗಳುತ್ತಿದೆ. ನಾಯಕತ್ವದ ಪ್ರಭಾವ ಹೇಗಿರಬೇಕು ಎಂದು ಪ್ರಧಾನಿ ಮೋದಿ ತೋರಿಸಿಕೊಟ್ಟಿದ್ದಾರೆ. ಯಾರು ಭಾರತವನ್ನು ನಮ್ಮದು ಅಂತ ಭಾವಿಸುತ್ತಾರೆ ಎಂದಿದ್ದಾರೆ.

ಚುನಾವಣೆಯ ಸೋಲು, ಚುನಾವಣೆಯಲ್ಲಿನ ಸೋಲು ನಮ್ಮ ತತ್ವ ಸಿದ್ಧಾಂತದ ಸೋಲು ಅಲ್ಲ ಎಂದ ಸಿಟಿ ರವಿ ಸಿಟಿ ರವಿ ಜಿ20 ಸಮಾವೇಶದಲ್ಲಿ ನಮ್ಮ ದೇಶದ ಪ್ರಾಚಿನತೆಯನ್ನು ಪ್ರದರ್ಶನ ಮಾಡಿದ್ದಷ್ಟೆ ಅಲ್ಲದೆ ಜಗತ್ತಿಗೆ ನಮ್ಮ ದೇಶದ ನಾಯಕತ್ವವನ್ನು ಪ್ರದರ್ಶನ ಮಾಡಿತು. ಅಲ್ಲದೆ ಜಗತ್ತಿನ ಪ್ರಬಲ ರಾಷ್ಟ್ರಗಳ ನಾಯಕರು ನರೇಂದ್ರ ಮೋದಿಯವರ ನಾಯಕತ್ವದ ಗುಣವನ್ನು ಹೊಗಳಿದ್ದಾರೆ. ನರೇಂದ್ರ ಮೋದಿಯವರು ತಮ್ಮನ್ನ ಜಾಗತಿಕ ನಾಯಕರನ್ನಾಗಿ ರೂಪಿಸಿಕೊಂಡಿದ್ದಾರೆ ಎಂಬುದಕ್ಕೆ ಸಮ್ಮೇಳನ ಸಾಕ್ಷಿಯಾಗಿದೆ. 



ಭಾರತವನ್ನು ನಮ್ಮದು ಎಂದು ಭಾವಿಸಿ, ನಾವು ಭಾರತೀಯರು ಎಂದು ಭಾವಿಸಿದ್ದಾರೋ, ಭಾರತದ ಉನ್ನತಿಯನ್ನು ಸಂಭ್ರಮಿಸುತ್ತಾರೋ ಅವರಿಗೆ ಭಾರತ ಎಂಬುದು ಸಂಭ್ರಮ ತಂದಿದೆ. ಅವರು ಆಸ್ಟ್ರೇಲಿಯಾ ಪ್ರಧಾನಿ ನರೇಂದ್ರ ಮೋದಿಯವರನ್ನ ಬಾಸ್ ಎಂದಾಗ ಸಂಭ್ರಮಿಸುತ್ತಾರೆ. ಆದರೆ ಕೆಲವು ಸಣ್ಣಮನಸ್ಸಿನವರಿಗೆ ಭಾರತ ಮತ್ತು ಮೋದಿಯವರನ್ನು ಬಾಸ್ ಎಂದಿದ್ದು ಸರಿಯೆನಿಸುತ್ತಿಲ್ಲ 

ನೂರು ದಿನ ನೂರಾರು ತಪ್ಪುಗಳು ಎಂಬ ಚಾರ್ಜ್​ಶೀಟ್​ ತಂದಂತೆ, ಈ ಸರ್ಕಾರ ಅಧಿಕಾರಕ್ಕೆ ಬಂದು ನಲವತ್ತು ದಿನಕ್ಕೆ ಹಲವು ಶಾಸಕರು ಪತ್ರ ಬರೆಯುತ್ತಾರೆ. ಅದು ಪ್ರೇಮಪತ್ರ ಆಗಿರಲಿಲ್ಲ. ಸಂಕಟ, ಆಕ್ರೋಶದ ಪತ್ರವಾಗಿತ್ತು. ಏನು ಇಲ್ಲ ಎನ್ನುವಂತೆ, ಆ ಪತ್ರಕ್ಕೆ ಸ್ಪಂದಿಸುವ ಅನಿವಾರ್ಯತೆಯಿಂದಾಗಿ ಸಿಎಂ ರವರು ಶಾಸಕಾಂಗ ಪಕ್ಷದ ಸಭೆಯನ್ನು ಕರಯಲಾಗಿತ್ತು. ಇದನ್ನ ನೋಡಿದರೆ ಸರ್ಕಾರದಲ್ಲಿ ಒಳಬೇಗುದಿ ಎಂಬುದು ಸ್ಪಷ್ಟ. ಇನ್ನು ಎಂಎಲ್​ಸಿ ಆಯ್ಕೆ ವಿಚಾರಕ್ಕೆ ಹಿರಿಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನೂ ಹರಿಪ್ರಸಾದ್​ ರವರು ಒಂದು ಸಭೆಯನ್ನು ನಡೆಸಿದ್ದಾರೆ. ಹೊಬ್ಲೋಟ್​ ವಾಚ್​ ಕಟ್ಕೊಂಡು ಪಂಚೆ ಉಟ್ಕೊಂಡು ಸಮಾಜವಾದ ಎನ್ನುತ್ತಾರೆ,ಈ ಪದಗಳು ಯಾರ ಬಗ್ಗೆ ಉಲ್ಲೇಖ ಮಾಡಿದ್ದಾರೆ ಎಂಬುದು ಅರ್ಥವಾಗಿಲ್ಲ. ಆದರೆ  ಸರ್ಕಾರದೊಳಗೆ ಭೂಕಂಪನದ ಕೇಂದ್ರ ಇದ್ದು, ಭೂಕಂಪನದ ಮುನ್ಸೂಚನೆಯನ್ನು ನೀಡುತ್ತಿದೆ ಎಂದರು.. 



ಜನರು ಈ ಕಾಂಗ್ರೆಸ್​ ಬಂದಮೇಲೆ ಮಳೆ ಹೋಯ್ತು ಎಂದು ಜನರು ಆಡುವ ಮಾತನಾಗಿದೆ. ಇದು ಕಾಕಾತಾಳೀಯವು ಆಗಿರಬಹುದು. ಜನರು ಹೇಳುವ ಮಾತನ್ನು ನಾವು ಹೇಳುತ್ತಿದ್ದೇವೆ ಅಷ್ಟೆ. ಕಾಂಗ್ರೆಸ್​ ನವರು ಅಧಿಕಾರಕ್ಕೆ ಬರುತ್ತಲೇ ಕರೆಂಟ್ ದರ ಏರಿಸಿದ್ದರು, ಸುಂಕ ಹೆಚ್ಚಿಸಿದರು, ಬಸ್ ದರ ಏರಿಸಿದರು. ಎಣ್ಣೆ ದರವನ್ನು ಸಹ ಏರಿಸಿದರು. ಈಗಾಗಲೇ ಹಳ್ಳಿಗಳಲ್ಲಿ ಕರೆಂಟ್ ಸಿಂಗಲ್ ಫಿಜ್​ ಇದ್ದು, ಇನ್ನೂ ಕೆಲವೇ ದಿನಗಳಲ್ಲಿ ಕರೆಂಟ್​ ಇಲ್ಲಾ  ಆದರೆ ಫ್ರೀ ಕರೆಂಟ್ ಎಂಬ ವಿಚಾರ ಬರುತ್ತದೆ ಎಂದ ಸಿಟಿ ರವಿ, ಬಸ್​ ಗಳಲ್ಲಿ ಈಗ ರಶ್ ಕಡಿಮೆಯಾಗಿದೆ. ಆದರೆ ದರ ಏರಿಕೆಯಾಗಿದೆ. ಹೇಳಬೇಕಾದರೇ ಮಹಾದೇವಪ್ಪ ನಿನಗೂ ಪ್ರೀ ಎಂದಿದ್ದರು.. ಆದರೆ ಈಗ ದರ ಏರಿಕೆ ಬಿಸಿ ತಟ್ಟುತ್ತಿದ್ದಾರೆ. ಈಗ ಎಣ್ಣೆ ದರವನ್ನ ಸಹ ಹೆಚ್ಚಿಸಲಾಗಿದೆ. ಮನೆಗೊಬ್ಬ ಎಣ್ಣೆ ಕುಡಿದರು, ದಿನಕ್ಕೆ ಸಾವಿರ ರೂಪಾಯಿ ಹೋಗುತ್ತದೆ ಎಂದು ವ್ಯಂಗ್ಯವಾಡಿದರು. 



ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದರು, ಆದರೆ ಎಲ್ಲಿದೆ. ಆದರೆ ನರೇಂದ್ರ ಮೋದಿ ಸರ್ಕಾರ ನೀಡುತ್ತಿರುವ ಐದು ಕೆಜಿ ಅಕ್ಕಿಯಲ್ಲಿ ಅಂಗನವಾಡಿ ಹಾಗೂ ಕುಟುಂಬಗಳಿಗೆ ಹಂಚಲಾಗುತ್ತಿದೆ. ಆರ್ಥಿಕ ವ್ಯವಸ್ಥೆ ಸುಸ್ಥಿರವಾಗಿದೆ ಎಂದು ಸಿಎಂ ರವರು ಹೇಳಿಕೆ ನೀಡಿದ್ದರು, ಎಲೆಕ್ಷನ್ ಆಗಲಿ ನಾಲ್ಕು ತಿಂಗಳು ಆಗುತ್ತಾ ಬಂದಿವೆ. ಸುಸ್​ಥಿರ ಆರ್ಥಿಕ ಸ್ಥಿತಿ ಇದ್ದಲ್ಲಿ ಗುತ್ತಿಗೆ ಕಾರ್ಮಿಕರಿಗೆ ಯಾಕೆ ಸಂಬಳವನ್ನು ನೀಡಲಾಗುತ್ತಿಲ್ಲ. ಶಿಶುಕೇಂದ್ರಗಳನ್ನು ನಿಲ್ಲಿಸಲಾಗುತ್ತಿದೆ. ರೈತರಿಗೆ ನೀಡುತ್ತಿದ್ದ ಸಹಾಯ ಬಂದ್ ಮಾಡಲಾಗಿದೆ. ರೈತರ ಸಾವುಗಳಿಗೆ ಸಮರ್ಪಕ ಪರಿಹಾರವನ್ನು ನೀಡುತ್ತಿಲ್ಲ. 



ಈ ಮೂರು ತಿಂಗಳಿನಲ್ಲಿ ಯಾವುದೇ ಒಂದು ಹೊಸ ಯೋಜನೆಯನ್ನು ಈ ಸರ್ಕಾರ ಘೋಷಿಸಿಲ್ಲ ಎಂದು ಟೀಕಿಸಿದ ಸಿಟಿ ರವಿ, ಈ ಬೇಸಿಗೆಯಲ್ಲಿ  ಪರಿಸ್ಥಿತಿಯನ್ನು ದೇವರೇ ಕಾಪಾಡಬೇಕು ಎಂದರು. ಹೊಸ ಕಾರು ತೆಗೆದುಕೊಳ್ಳಲು ತರಾತುರಿ ತೋರುವ ಸರ್ಕಾರಕ್ಕೆ ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಲು ಮಾತ್ರ ತರಾತುರಿ ತೋರತ್ತಿಲ್ಲ. ಸೆಪ್ಟೆಂಬರ್​ ಅಂತ್ಯದಿಂದ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಚುನಾವಣೆಗೆ ಎನ್ರೋಲ್​ಮೆಂಟ್ ಆರಂಭವಾಗುತ್ತದೆ. ಎಲ್ಲಾ ಕಾರ್ಯಕರ್ತರು ಈ ನಿಟ್ಟಿನಲ್ಲಿ ಹೆಚ್ಚಿನ ಗಮನವನ್ನು ಹರಿಸಬೇಕು ಎಂದು ವಿನಂತಿ ಮಾಡಿದರು.


ಇನ್ನಷ್ಟು ಸುದ್ದಿಗಳು