KSRTC ಬಸ್‌ ಟಿಕೆಟ್‌ ದರ ಹೆಚ್ಚಳ | ಎಲ್ಲಿಂದ ಎಲ್ಲಿಗೆ ಎಷ್ಟಾಗಿದೆ ಟಿಕೆಟ್‌ ರೇಟು | ಇಲ್ಲಿದೆ ಮಾಹಿತಿ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 5, 2025 ‌‌  ನಿನ್ನೆಯಿಂದೆ KSRTC ಬಸ್‌ ದರ ಜಾಸ್ತಿಯಾಗಿದೆ. ಈಗಿರುವ ಟಿಕೆಟ್‌ ಬೆಲೆಗೆ ಅನ್ವಯಿಸಿ 15 ಪರ್ಸೆಂಟ್‌ ಹೆಚ್ಚಳ ಮಾಡಲಾಗಿದೆ. ಈ ನಿರ್ಣಯದಿಂದ ಶಿವಮೊಗ್ಗದಿಂದ ಹೊರಡು ಬಸ್‌ಗಳಲ್ಲಿ ಟಿಕೆಟ್‌ ದರ ಎಷ್ಟಾಗಲಿದೆ ಎನ್ನುವ ಮಾಹಿತಿಯನ್ನು ತಿಳಿಸುವ ಪ್ರಯತ್ನ ಇಲ್ಲಿದೆ.  ದರ ಏರಿಕೆಯಿಂದ ಶಿವಮೊಗ್ಗದಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ ದರ 359 ರೂಪಾಯಿ ಆಗಲಿದೆ. ಸದ್ಯ ಸಾಮಾನ್ಯ ಸರ್ಕಾರಿ ಸಾರಿಗೆಯಲ್ಲಿ ಈ ದರ 312 ರೂಪಾಯಿ … Read more

ಮೆಗ್ಗಾನ್‌ನಲ್ಲಿ ಬಾಣಂತಿ ಸಾವು | ಏನಾಗಿತ್ತು? ಈ ವಿಚಾರಕ್ಕೆ ಯಾರು ಏನಂದ್ರು | ಇಲ್ಲಿದೆ ವಿವರ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 5, 2025 ‌‌  ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಹೆರಿಗೆಯಾದ ಕೆಲವೇ ಗಂಟೆಗಳಲ್ಲಿಯೇ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ. ಎನ್ನಲಾಗಿದೆ. ಅವರನ್ನು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಶಂಶೀಪುರ ನಿವಾಸಿ ಕವಿತಾ (24) ಎಂದು ಗುರುತಿಸಲಾಗಿದೆ. ಜಿಲ್ಲೆಯ ಮೈದೊಳಲು ಮಲ್ಲಾಪುರ ಗ್ರಾಮದಲ್ಲಿದ್ದ ಕವಿತಾ ಅವರು, ಎರಡನೇ ಹೆರಿಗಾಗಿ ಜನವರಿ 1ರಂದು ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್‌ಗೆ ದಾಖಲಾಗಿದ್ದರು. ಆ ಬಳಿಕ ಜನವರಿ 3ರಂದು ಬೆಳಗ್ಗೆ … Read more

ಮುತ್ತಿನಕೊಪ್ಪ ಸಮೀಪ ತೋಟದ ಕೆರೆ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ | ಸಂಶಯ ಸತ್ಯ?

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 5, 2025 ‌‌  ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ನಡೆಸಿರುವ ಬಗ್ಗೆ ಮಾಹಿತಿಯೊಂದು ಲಭ್ಯವಾಗಿದೆ. ಈ ಘಟನೆ ಮುತ್ತಿನಕೊಪ್ಪದ ಮುಂದೆ ಸಿಗುವ ತೋಟದ ಕೆರೆ ಬಳಿ ನಿನ್ನೆ ರಾತ್ರಿ ಏಳು ಮೂವತ್ತರ ಹೊತ್ತಿಗೆ ನಡೆದಿದೆ. ಘಟನೆಯಲ್ಲಿ ಶಶಿಧರ್‌ ಎಂಬವರು ಗಾಯಗೊಂಡಿದ್ದು, ಅವರನ್ನ ಸ್ಥಳೀಯ ಹಳ್ಳಿಯವರು ಉಪಚರಿಸಿದ್ದಾರೆ. ಆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.  ಶಶಿಧರ್‌ ಎಂಬವರು ನಿನ್ನೆ ದಾವಣಗೆರೆಗೆ … Read more

ಎಚ್ಚರ | ಕೃಷಿ ಇಲಾಖೆಯ ಹೆಸರಿನಲ್ಲಿ ಬರುತ್ತಿದೆ ಅಕೌಂಟ್‌ ಖಾಲಿ ಮಾಡುವ PHONE CALL | ಅಧಿಕಾರಿಗಳಿಂದ ಮಹತ್ವದ ಸೂಚನೆ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 4, 2025 ‌‌  ಡಿಜಿಟಲ್‌ ಅರೆಸ್ಟ್‌ ಬೆನ್ನಲ್ಲೆ ಇದೀಗ ಶಿವಮೊಗ್ಗದಲ್ಲಿ ರೈತರಿಗೆ ಅನಾಮದೇಯ ಕಾಲ್‌ಗಳು ಬರುತ್ತಿದ್ದು ಕೃಷಿ ಇಲಾಖೆಯ ಹೆಸರಿನಲ್ಲಿ ದುಡ್ಡು ಪಡೆದು ಮೋಸಲಾಗುತ್ತಿದೆ ಎಂಬ ವಿಷಯ ಸ್ವತಃ ಇಲಾಖೆಯಿಂದ ಬಹಿರಂಗಗೊಂಡಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಈ ರೀತಿ ಅನಾಮದೇಯ ಕರೆಗಳಿಗೆ ಪ್ರತಿಕ್ರಿಯಿಸದಂತೆ ಪ್ರಕಟಣೆ ಮೂಲಕ ತಿಳಿಸಲಾಗಿದೆ.  ಕೃಷಿ ಇಲಾಖೆಯ ಪ್ರಕಟಣೆ  ಇತ್ತೀಚೆಗೆ ತಾಲ್ಲೂಕಿನಾದ್ಯಂತ ವಿವಿಧ ರೈತರಿಗೆ ಕೆಲವು ಅನಾಮಧೇಯ … Read more

ಕಾರ್ಪೊರೇಟರ್‌ ಕಿರುಕುಳ | ಪಾಲಿಕೆಯಲ್ಲಿ ಪೌರ ಕಾರ್ಮಿಕರ ಮುಷ್ಕರ | ಸ್ಥಳಕ್ಕೆ ಶಾಸಕರು, ಎಸ್‌ಪಿ ದೌಡು

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 4, 2025 ‌‌  ಕಾರ್ಪೊರೇಟರ್‌ ಒಬ್ಬರ ಕಿರುಕುಳ ಆರೋಪ ಸಂಬಂದ ವಿಷದ ಬಾಟಲಿ ಹಿಡಿದು ವಿಡಿಯೋ ಮಾಡಿದ ಶಿವಮೊಗ್ಗ ಪಾಲಿಕೆಯ ನೌಕರರನ ಪರವಾಗಿ ಇವತ್ತು ಶಿವಮೊಗ್ಗ ನಗರ ಪಾಲಿಕೆಯಲ್ಲಿ ಪೌರಕಾರ್ಮಿಕರು ಪ್ರತಿಭಟನೆ ನಡೆಸ್ತಿದ್ದಾರೆ.    ಪಾಲಿಕೆಯ ಆವರಣದಲ್ಲಿಯೇ ಇವತ್ತು ಒಗ್ಗೂಡಿದ ನೌಕರರು ಶಾಮಿಯಾನ ಕಟ್ಟಿ ಅದರ ನೆರಳಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಅಷ್ಟೆಅಲ್ಲದೆ ತಮಗಾಗುತ್ತಿರುವ ಅನ್ಯಾಯಗಳನ್ನ ಖಂಡಿಸಿದ ಕಾರ್ಮಿಕರು ದಲಿತ ನೌಕರ ಮೂರ್ತಿಯ ಪರಿಸ್ಥಿತಿಗೆ ಕಾರಣವಾದ … Read more

ಈ ತಾಯಿ ಹಾಗೂ ಮಗಳ ಬಗ್ಗೆ ಸುಳಿವು ಕೊಡಿ | ಪೊಲೀಸ್‌ ಪ್ರಕಟಣೆ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 4, 2025 ‌‌  ಕಳೆದ ಡಿಸೆಂಬರ್‌ನಲ್ಲಿ ಕಾಣೆಯಾಗಿರುವ ತಾಯಿ ಹಾಗೂ ಮಗಳ ಹುಡುಕಾಟವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಸಂಬಂದ ಪೊಲೀಸ್‌ ಪ್ರಕಟಣೆಯನ್ನು ನೀಡಿದ್ದು ಪ್ರಕಟಣೆಯ ಯಥಾವತ್ತು ವಿವರ ಹೀಗಿದೆ. ಉತ್ತರ ಕನ್ನಡ ಜಿಲ್ಲೆ ಕುಮಟಾ ನಗರದ ವಾಸಿ ಮಹಾದೇವ ಭೋವಿ ಎಂಬುವವರ ಪತ್ನಿ 30 ವರ್ಷದ ಹೊನ್ನಮ್ಮ ಎಂಬುವವರು 8 ವರ್ಷದ ತಮ್ಮ ಮಗಳು ದೀಪ್ತಿಯನ್ನು ಕರೆದುಕೊಂಡು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ನೆಗವಾಡಿ ತಾಂಡದಲ್ಲಿರುವ … Read more

ವಿಷದ ಬಾಟಲಿ ವಿಡಿಯೋಕ್ಕೆ ಕ್ಲೈಮ್ಯಾಕ್ಸ್‌ | ಪತ್ತೆಯಾದ ಪಾಲಿಕೆ ನೌಕರರ | ಏನೆಲ್ಲಾ ಆಯ್ತು

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 4, 2025 ‌‌  ನಿನ್ನೆದಿನ ಮರಗಳ ನಡುವೆ ಕುಳಿತು ವಿಷದ ಬಾಟಲಿ ಹಿಡಿದು ವಿಡಿಯೋ ಮಾಡಿದ್ದ ಶಿವಮೊಗ್ಗ ಪಾಲಿಕೆ ನೌಕರನ ಪ್ರಕರಣ ಸುಖಾಂತ್ಯ ಪಡೆದುಕೊಂಡಿದೆ. ಪಾಲಿಕೆ ನೌಕರರ ಕಾರ್ಪೊರೇಟರ್‌ ಒಬ್ಬರ ವಿರುದ್ಧ ಆರೋಪಿಸಿ ವಿಷ ಕುಡಿಯುವುದಾಗಿ ಹೇಳಿದ್ದ. ಆ ಬಳಿಕ ನಾಪತ್ತೆಯಾಗಿದ್ದ. ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು. ಇದೆಲ್ಲದರ ಬೆನ್ನಲ್ಲೆ ನೌಕರ ಮೂರ್ತಿ, ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದರು.  ಕಿರುಕುಳ ಆರೋಪ | ವಿಷದ ಬಾಟಲಿ ಹಿಡಿದು ಪಾಲಿಕೆಯ … Read more

ಕಿರುಕುಳ ಆರೋಪ | ವಿಷದ ಬಾಟಲಿ ಹಿಡಿದು ಪಾಲಿಕೆಯ ದಲಿತ ನೌಕರನ ವಿಡಿಯೋ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 3, 2025 ‌‌  ಶಿವಮೊಗ್ಗ ನಗರಪಾಲಿಕೆಯ ಸಿಬ್ಬಂದಿಯ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿ ಕಾರ್ಪೊರೇಟರ್‌ ಹಾಗೂ ಅವರ ಕಡೆಯವರ ಕಿರುಕುಳದಿಂದ ಸಾಯುವುದು ಬಿಟ್ಟರೆ ನನಗೆ ಬೇರೆ ದಾರಿಯಿಲ್ಲ ಎಂದು ವಿಷದ ಬಾಟಲಿಯೊಂದನ್ನ ತೋರಿಸುತ್ತಿರುವ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿಯನ್ನು ಮೂರ್ತಿ ಎಂದು ಹೇಳಲಾಗಿದೆ. ಇವರು ನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿದ್ದು ವಾರ್ಡ್‌ ವೊಂದರಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಇವರನ್ನ ಮೂಲ ಕೆಲಸಕ್ಕೆ ಅಂದರೆ ಸ್ವಚ್ಚತಾ … Read more

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಯುವ ಸವಿಷ್ಕಾರ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 3, 2025 ‌ ಶಿವಮೊಗ್ಗ |  ಎಲ್ಲ ವಿದ್ಯಾರ್ಥಿಗಳಲ್ಲಿ ತಮ್ಮದೇ ಆದ ಗುರಿ, ಕನಸು ಮತ್ತು ಪ್ರತಿಭೆಗಳು ಇರುತ್ತವೆ. ಸಮರ್ಪಕವಾದ ಯೋಜನೆ ರೂಪಿಸಿಕೊಂಡು ಅವುಗಳನ್ನು ವಿದ್ಯಾರ್ಥಿಗಳು ಸಾಧಿಸಬೇಕೆಂದು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯಾನಾಯ್ಕ ಹೇಳಿದರು. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ನವುಲೆಯ ಕೃಷಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ 10 ನೇ ಅಂತರ ಮಹಾವಿದ್ಯಾಲಯಗಳ ಯುವ … Read more

ಶಿವಮೊಗ್ಗ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ  ಹಿರಿಯ ಸದಸ್ಯರಿಗೆ ಸನ್ಮಾನ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 3, 2025 ‌ ಶಿವಮೊಗ್ಗ | ಶಿವಮೊಗ್ಗ ಜಿಲ್ಲಾ ಸರ್ಕಾರಿ ನಿವೃತ್ತ ನೌಕಾರರ ಸಂಘದ ವತಿಯಿಂದ 2022-23ನೇ ಸಾಲಿನ ಸರ್ವ ಸದಸ್ಯರ 55 ನೆ ವಾರ್ಷಿಕ ಮಹಾಸಭೆ ಹಿರಿಯ ಸದಸ್ಯರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭವನ್ನು ಜನವರಿ 6 ರಂದು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮ ಜಿಲ್ಲಾ ಸರ್ಕಾರಿ ನೌಕರರ ಭವನ ಶಿವಮೊಗ್ಗದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ … Read more