ಎಚ್ಚರ | ಕೃಷಿ ಇಲಾಖೆಯ ಹೆಸರಿನಲ್ಲಿ ಬರುತ್ತಿದೆ ಅಕೌಂಟ್‌ ಖಾಲಿ ಮಾಡುವ PHONE CALL | ಅಧಿಕಾರಿಗಳಿಂದ ಮಹತ್ವದ ಸೂಚನೆ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 4, 2025 ‌‌ 

ಡಿಜಿಟಲ್‌ ಅರೆಸ್ಟ್‌ ಬೆನ್ನಲ್ಲೆ ಇದೀಗ ಶಿವಮೊಗ್ಗದಲ್ಲಿ ರೈತರಿಗೆ ಅನಾಮದೇಯ ಕಾಲ್‌ಗಳು ಬರುತ್ತಿದ್ದು ಕೃಷಿ ಇಲಾಖೆಯ ಹೆಸರಿನಲ್ಲಿ ದುಡ್ಡು ಪಡೆದು ಮೋಸಲಾಗುತ್ತಿದೆ ಎಂಬ ವಿಷಯ ಸ್ವತಃ ಇಲಾಖೆಯಿಂದ ಬಹಿರಂಗಗೊಂಡಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಈ ರೀತಿ ಅನಾಮದೇಯ ಕರೆಗಳಿಗೆ ಪ್ರತಿಕ್ರಿಯಿಸದಂತೆ ಪ್ರಕಟಣೆ ಮೂಲಕ ತಿಳಿಸಲಾಗಿದೆ. 

ಕೃಷಿ ಇಲಾಖೆಯ ಪ್ರಕಟಣೆ 

ಇತ್ತೀಚೆಗೆ ತಾಲ್ಲೂಕಿನಾದ್ಯಂತ ವಿವಿಧ ರೈತರಿಗೆ ಕೆಲವು ಅನಾಮಧೇಯ ಮತ್ತು ಅನಧಿಕೃತ ವ್ಯಕ್ತಿಗಳಿಂದ ನಾವು ಕೃಷಿ ಇಲಾಖೆಯಿಂದ ಕರೆ ಮಾಡುತ್ತಿದ್ದು, ಸ್ಪ್ರಿಂಕ್ಲರ್ ಸೆಟ್ ಮತ್ತು ಟಾರ್ಪಾಲಿನ್ ಅನ್ನು ನಿಮಗೆ ನೀಡಲಾಗುತ್ತದೆ, ಇದಕ್ಕೆ ನೀವು ಫೋನ್‌ಪೇ, ಅಥವಾ ಗೂಗಲ್ ಪೇ ಮೂಲಕ ಹಣವನ್ನು ಪಾವತಿಸಲು ತಿಳಿಸ್ತಿದ್ದಾರೆ. 

ಹೀಗೆ ದೂರವಾಣಿ ಸಂಖ್ಯೆ 7259260962 ಟ್ರೂಕಾಲರ್‌ನಲ್ಲಿ China Sharnago ಕೃಷಿ ಇಲಾಖೆ ಎಂದು ತೋರಿಸುತ್ತಿದೆ. ಆದರೆ ವಾಸ್ತವವಾಗಿ ಕೃಷಿ ಇಲಾಖೆಯಿಂದ ಯಾವುದೇ ಸವಲತ್ತು ಪಡೆಯಬೇಕಾದರೆ ನಿಮ್ಮ ರೈತ ಸಂಪರ್ಕ ಕೇಂದ್ರಗಳಿಗೆ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. 

ಜೊತೆಗೆ ಅರ್ಹರಿದ್ದಲ್ಲಿ ಇಲಾಖೆಯಿಂದ ಹಣ ವರ್ಗಾವಣೆಗೆ ಪತ್ರವನ್ನು ಪಡೆದು ರೈತರು ತಮ್ಮ ಖಾತೆಯಿಂದ ನೇರವಾಗಿ ಸಂಸ್ಥೆಯ ಖಾತೆಗೆ ರೈತರ ವಂತಿಕೆ ಮೊತ್ತವನ್ನು ಪಾವತಿಸಿ, ನಂತರ ಪಾವತಿಸಿದ ದಾಖಲೆಯನ್ನು ಸಲ್ಲಿಸಿದ ನಂತರವೇ ನಿಮಗೆ ಸೌಲಭ್ಯವನ್ನು ರೈತ ಸಂಪರ್ಕ ಕೇಂದ್ರದಲ್ಲಿಯೇ ವಿತರಿಸಲಾಗುವುದು.

ಆದ್ದರಿಂದ ಈ ರೀತಿಯ ಅನುಮಾನಾಸ್ಪದ ಕರೆಗಳು ಬಂದಾಗ ಯಾವುದೇ ರೀತಿಯಾಗಿ ಹಣ ವರ್ಗಾವಣೆಯನ್ನು ವ್ಯಕ್ತಿಗೆ ಮಾಡಬಾರದು ಹಾಗೂ ಅಂತಹವರ ಕರೆಯನ್ನು ರೆಕಾರ್ಡ್ ಮಾಡಿಕೊಂಡು ಪೋಲೀಸ್ ಇಲಾಖೆಯ ಸೈಬರ್ ಕ್ರೈಮ್ ವಿಭಾಗಕ್ಕೆ (ಸಂಪರ್ಕ ಸಂಖ್ಯೆ 1930) ಕರೆಮಾಡಿ ದೂರನ್ನು ಸಲ್ಲಿಸಬೇಕೆಂದು ಶಿವಮೊಗ್ಗ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

SUMMARY |  After the digital arrest, farmers are now receiving fake calls in the name of the Agriculture Department. Agriculture Department Announcement

KEY WORDS | After the digital arrest, farmers receiving fake calls, Agriculture Department, Agriculture Department Announcement

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor