ಸಂಸಾರ ತಾಪತ್ರಯಕ್ಕೆ ವಶೀಕರಣದ ಮಂತ್ರ! ಜ್ಯೋತಿಷಿಯ ಮಡಿಕೆಯಿಂದ ನಂಬಿಕೆ ದ್ರೋಹ! ದುರ್ಗಿಗುಡಿಯ ಕಥೆ

ajjimane ganesh

ನವೆಂಬರ್, 03, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದಲ್ಲಿ ವಶೀಕರಣದ ಮೂಲಕ ದಾಂಪತ್ಯ ಕಲಹವನ್ನು ಬಗೆಹರಿಸುವುದಾಗಿ ವಂಚಿಸಲಾಗಿದೆ.  

ದುರ್ಗಿಗುಡಿಯ ಜ್ಯೋತಿಷಿಯ ಮಾತು ನಂಬಿ ಕೆಟ್ಟ ದಂಪತಿ

ಶಿವಮೊಗ್ಗ ನಗರದ ನಿವಾಸಿಯೊಬ್ಬರು ತಮ್ಮ ಪತಿಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ವಶೀಕರಣ ಜ್ಯೋತಿಷಿಯೊಬ್ಬರ ಬಳಿ ಹೋಗಿದ್ದರು. ದುರ್ಗಿಗುಡಿಯಲ್ಲಿ ಕಚೇರಿ ಮಾಡಿಕೊಂಡಿದ್ದ ಈ ಜ್ಯೋತಿಷಿ, ಸಮಸ್ಯೆ ಪರಿಹಾರಕ್ಕಾಗಿ 61 ಗ್ರಾಂ ಚಿನ್ನಾಭರಣವನ್ನು ತರುವಂತೆ ಸೂಚಿಸಿದ್ದ. ಅದರಂತೆ, ಮಹಿಳೆಯು ತಮ್ಮ ಬಳಿ ಇದ್ದ 51 ಗ್ರಾಂ ಚಿನ್ನ ಮತ್ತು ತಮ್ಮ ಸ್ನೇಹಿತೆಯ ಬಳಿಯಿಂದ 10 ಗ್ರಾಂ ಚಿನ್ನಾಭರಣವನ್ನು ಸೇರಿಸಿ ಒಟ್ಟು 61 ಗ್ರಾಂ ಚಿನ್ನವನ್ನು ಜ್ಯೋತಿಷಿಗೆ ಒಪ್ಪಿಸಿದ್ದರು.

- Advertisement -
 Shivamogga Astrologer Cheats Woman of 61g Gold in Vashikarana
Shivamogga Astrologer Cheats Woman of 61g Gold in Vashikarana

ಅಡಿಕೆ ದೋಟಿಗೆ ವಿದ್ಯುತ್​​ ಸ್ಪರ್ಶಿಸಿ ಗೊನೆಗಾರ ಸಾವು

ಮಡಿಕೆಗೆ ದಾರ ಕಟ್ಟಿ ಪೂಜಿಸಲು ತಿಳಿಸಿದ್ದ ಜ್ಯೋತಿಷಿ

ಸಂತ್ರಸ್ತ ಮಹಿಳೆ ನೀಡಿದ್ದ ಚಿನ್ನವನ್ನು ಪಡೆದ ಜ್ಯೋತಿಷಿ  ಸುಹಾನ್‌ ಎಂಬಾತ ( Shivamogga Astrologer Cheats Woman) ದಂಪತಿಯ ಫೋಟೊ ಮತ್ತು ತಂದಿದ್ದ ಚಿನ್ನಾಭರಣಗಳನ್ನು ಒಂದು ಮಡಿಕೆಯಲ್ಲಿ ಇರಿಸಿ, ಅದಕ್ಕೆ ಕೆಂಪು ದಾರದ ಕಟ್ಟಿ, ಮುಚ್ಚಿಟ್ಟು ಮಡಿಕೆಯನ್ನು ರಹಸ್ಯವಾದ ಜಾಗದಲ್ಲಿಟ್ಟು 5 ದಿನ ಪೂಜೆ ಮಾಡುವಂತೆ ಸೂಚಿಸಿದ್ದ. ತಮ್ಮ ಸಮಸ್ಯೆಗೆ ಪರಿಹಾರಕ್ಕಾಗಿ ಬಂದಿದ್ದ ಮಹಿಳೆ ಜ್ಯೋತಿಷಿಯ ಮಾತನ್ನ ನಂಬಿ ಮಡಿಕೆಯನ್ನು ಮನೆಗೆ ಕೊಂಡೊಯ್ದು ಪೂಜೆ ಮಾಡಿದ್ದರು.

 Shivamogga Astrologer
Shivamogga Astrologer

ತೀರ್ಥಹಳ್ಳಿ : ಬೇರೆ ಅಂಗಡಿಯಲ್ಲಿ ಪಟಾಕಿ ಖರೀದಿಸಿದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ

2 ದಿನಗಳ ಬಳಿಕ ಮಹಿಳೆಗೆ ಮೂಡಿತು ಅನುಮಾನ 

ಆದರೆ ಎರಡು ದಿನ ಕಳೆದಂತೆ ಮಹಿಳೆಗೆ ಅನುಮಾನ ಮೂಡಿದೆ. ಯಾವುದಕ್ಕೂ ಇರಲಿ ಎಂದುಕೊಂಡು ಮಡಿಕೆಯ ಕಟ್ಟು ಬಿಚ್ಚಿ ತೆರೆದು ನೋಡಿದಾಗ, ಆಘಾತವಾಗಿದೆ. ಏಕೆಂದರೆ ಮಡಿಕೆಯೊಳಗೆ ಚಿನ್ನಾಭರಣಗಳ ಬದಲು ಕೇವಲ ಮಣ್ಣಿನ ಹೆಂಟೆಗಳಿದ್ದವು. ಕೂಡಲೇ ಮಹಿಳೆ ದುರ್ಗಿಗುಡಿಯಲ್ಲಿರುವ ಜ್ಯೋತಿಷಿಯ ಕಚೇರಿಗೆ ಹೋಗಿದ್ದಾಳೆ. ಆದರೆ ಕಚೇರಿಗೆ ಬೀಗ ಹಾಕಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನ ವಿಚಾರಿಸಿದಾಗ ಜ್ಯೋತಿಷಿ ಲಕನೌಗೆ ಪರಾರಿಯಾಗಿರುವ ವಿಚಾರ ಗೊತ್ತಾಗಿದೆ. ಹಾಗಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದಾರೆ. ಪೊಲೀಸರು ಈ ಸಂಬಂಧ ತನಿಖೆ ನಡೆಸ್ತಿದ್ದಾರೆ.  

 Shivamogga Astrologer
Shivamogga Astrologer

ಮೇಯುತ್ತಿದ್ದ ಹಸುವಿನ ಮೇಲೆ ಒಣಮರ ಬಿದ್ದು ಸಾವು: ರೈತ ಮಹಿಳೆಗೆ ಪರಿಹಾರಕ್ಕೆ ಆಗ್ರಹ

ನವೆಂಬರ್, 02, 2025, ಹೊಸನಗರ, ಮಲೆನಾಡು ಟುಡೆ ಸುದ್ದಿ: ಮೇಯುತ್ತಿದ್ದ ವೇಳೆ ಒಣಗಿದ ಮರವೊಂದು ಬಿದ್ದ ಪರಿಣಾಮ, ಹಸುವೊಂದು ಮೃತಪಟ್ಟ ಘಟನೆ ಹೊಸನಗರ ತಾಲ್ಲೂಕಿನ ಸಂಕೂರು ಗ್ರಾಮದಲ್ಲಿ ಸಂಭವಿಸಿದೆ. ಸಂಕೂರು ಗ್ರಾಮದ ರೈತ ಮಹಿಳೆ ಪುಷ್ಪಾ ಎಂಬುವವರಿಗೆ ಸೇರಿದ ಹಸು ಸಾವನ್ನಪ್ಪಿದೆ. ಹಸುವಿನಿಂದಲೇ ಆದಾಯ ಕಾಣುತ್ತಿದ್ದ ಕುಟುಂಬ ಇದೀಗ ಪರಿಹಾರ ಒದಗಿಸುವಂತೆ  ತಾಲ್ಲೂಕು ಆಡಳಿತವನ್ನು ಕೋರಿದೆ. 

ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಂಜುನಾಥ ನಾಯಕ್ ಬೆಳಗಾವಿಗೆ ವರ್ಗಾವಣೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ರಾಮನಗರದ ಒಬ್ಬ, ಶಿವಮೊಗ್ಗ ನಾಲ್ವರು, ನ್ಯಾಮತಿ ರಂಗನಾಥಸ್ವಾಮಿ ದೇವಸ್ಥಾನದ ಸಮೀಪ ಅರೆಸ್ಟ್!

 Shivamogga Astrologer Cheats Woman of 61g Gold in Vashikarana

Share This Article