ಮಹಿಳಾ ಸ್ಟೇಷನ್​ನೊಳಗೆ ಆತಂಕ ಮೂಡಿಸಿದ ಹಾವು! ಊರು ಬದಿಯಲ್ಲಿ ಸಿಕ್ಕ ಕಾಡುಪಾಪದ ವಿಶೇಷತೆ ಏನು ಗೊತ್ತಾ?

Shimoga News: A snake was found in the woman's police stationಶಿವಮೊಗ್ಗ ನ್ಯೂಸ್: ಮಹಿಳಾ ಪೊಲೀಸ್​ ಸ್ಟೇಷನ್​ನಲ್ಲಿ ( woman's police station)ಹಾವೊಂದು ಕಾಣಸಿಕ್ಕಿದೆ

ಮಹಿಳಾ  ಸ್ಟೇಷನ್​ನೊಳಗೆ ಆತಂಕ ಮೂಡಿಸಿದ ಹಾವು!  ಊರು ಬದಿಯಲ್ಲಿ ಸಿಕ್ಕ ಕಾಡುಪಾಪದ ವಿಶೇಷತೆ ಏನು ಗೊತ್ತಾ?

KARNATAKA NEWS/ ONLINE / Malenadu today/ Sep 24, 2023 SHIVAMOGGA NEWS’

ಶಿವಮೊಗ್ಗ ನಗರದ ಮಹಿಳಾ ಪೊಲೀಸ್ ಸ್ಟೇಷನ್​ನೊಳಗೆ ಹಾವೊಂದು ಇವತ್ತು ಬಂದು ಸೇರಿಕೊಂಡಿತ್ತು. ಇದಿರಿಂದಾಗಿ ಸ್ಟೇಷನ್​ನಲ್ಲಿ ಸಿಬ್ಬಂದಿಗೆ ಕೆಲಸ ಮಾಡಲು ಕಸಿವಿಸಿಯಾಗುತ್ತಿತ್ತು. 

ಹಾವೊಂದು ಸ್ಟೇಷನ್​ ಒಳಗೆ ಹರಿದಾಡುತ್ತಾ ಬಂದಿದ್ದರಿಂದ ಪೊಲೀಸ್ ಸಿಬ್ಬಂದಿಗೂ ಆತಂಕ ಉಂಟಾಗಿತ್ತು. ಈ ನಡುವೆ ವಿಷಯ ತಿಳಿದು ಸ್ಟೇಷನ್​ ಸ್ನೇಕ್ ಸಂರಕ್ಷರೊಬ್ಬರು ಬಂದಿದ್ದಾರೆ. ಕೆಲವು ಹೊತ್ತು ಸ್ಟೇಷನ್​ನಲ್ಲಿ ಹಾವಿಗಾಗಿ ಅರಸಿದ ಅವರು, ಆನಂತರ ಅದನ್ನು ಸುರಕ್ಷಿತವಾಗಿ ಹಿಡಿದು ಠಾಣೆಯಿಂದ ಹೊರಕ್ಕೆ ತಂದಿದ್ದಾರೆ. 

ಆ ಬಳಿಕ ಪ್ಲಾಸ್ಟಿಕ್ ಚೀಲವೊಂದರಲ್ಲಿ ಹಾವನ್ನು ತುಂಬಿ, ಅದನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿ ಬಿಟ್ಟಿದ್ದಾರೆ.

ದಾರಿಯಲ್ಲಿ ಸಿಕ್ಕ ಕಾಡುಪಾಪ

ಇನ್ನೂ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿಗಂದೂರು ರಸ್ತೆಯಲ್ಲಿ ಕಾಡುಪಾಪವೊಂದು ಕಾಣಿಸಿಕೊಂಡಿದೆ.ಹಾರಲಾಗದ ಓಡಲಾಗದ ಕಾಡುಪಾಪ ಸಂರಕ್ಷಿತ ಜೀವಿಯಾಗಿದೆ. ಇನ್ನೂ ಈ ಭಾಗದಲ್ಲಿ ಅಪರೂಪಕ್ಕೆ ಒಮ್ಮೆ ಕಾಣಿಸಿಕೊಳ್ಳುವ ಈ ಕಾಡುಪಾಪವನ್ನು ಅರಣ್ಯ ಸಿಬ್ಬಂದಿ ಹಿಡಿದು ಮತ್ತೆ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಸಣ್ಣಪುಟ್ಟ ಜೀವಿಗಳನ್ನ ತಿಂದು ಬದುಕವ ಕಾಡುಪಾಪಕ್ಕೆ ಹಗಲು ಹೊತ್ತಿನಲ್ಲಿ ಕಣ್ಣು ಕಾಣುವುದಿಲ್ಲ. ದಟ್ಟ ಕಾಡಿನಲ್ಲಷ್ಟೆ ಇವುಗಳು ವಾಸ ಮಾಡುತ್ತವೆ.  


ಇನ್ನಷ್ಟು ಸುದ್ದಿಗಳು