ಶಿವಮೊಗ್ಗ-ದಕ್ಷಿಣ ಕನ್ನಡ-ಉಡುಪಿ ಜನರಿಗೆ ಸೂಚನೆ/ ಹುಲಿಕಲ್ ಘಾಟಿ ಬಂದ್​ ಇನ್ನಷ್ಟು ದಿನ ವಿಸ್ತರಣೆ/ ಪರ್ಯಾಯ ಮಾರ್ಗ ಇಲ್ಲಿದೆ

Shimoga-Dakshina Kannada-Udupi people notice/ Hulikal Ghat bandh extended by more days/ Here's the alternative route/ shivamogga live news/ malenadutoday news

ಶಿವಮೊಗ್ಗ-ದಕ್ಷಿಣ ಕನ್ನಡ-ಉಡುಪಿ ಜನರಿಗೆ ಸೂಚನೆ/ ಹುಲಿಕಲ್ ಘಾಟಿ ಬಂದ್​ ಇನ್ನಷ್ಟು ದಿನ ವಿಸ್ತರಣೆ/ ಪರ್ಯಾಯ ಮಾರ್ಗ ಇಲ್ಲಿದೆ
ಶಿವಮೊಗ್ಗ-ದಕ್ಷಿಣ ಕನ್ನಡ-ಉಡುಪಿ ಜನರಿಗೆ ಸೂಚನೆ/ ಹುಲಿಕಲ್ ಘಾಟಿ ಬಂದ್​ ಇನ್ನಷ್ಟು ದಿನ ವಿಸ್ತರಣೆ/ ಪರ್ಯಾಯ ಮಾರ್ಗ ಇಲ್ಲಿದೆ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ -52 ರ ಬಾಳೆಬರೆ ಘಾಟ್ (Balebare ghat)  ನಲ್ಲಿ ಕಾಂಕ್ರಿಟ್​ ಪೇವ್​ಮೆಂಟ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ಹೆದ್ದಾರಿ ಬಂದ್ ಮಾಡಲಾಗಿತ್ತು. 

ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಶಿವಮೊಗ್ಗ ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದ್ದು, ಹೆಚ್ಚುವರಿಯಾಗಿ ಹತ್ತು ದಿನಗಳ ಕಾಲ ಘಾಟಿ ರಸ್ತೆಯನ್ನ ಬಂದ್​ ಮಾಡಲಾಗುತ್ತಿದೆ ಎಂದು ತಿಳಿಸಿದೆ. 

ಬಾಳೆಬರೆ ಘಾಟಿಯಲ್ಲಿನ ಕಾಮಗಾರಿ 

ಇಲ್ಲಿನ ಹುಲಿಕಲ್ ಅಥವಾ ಬಾಳೆಬರೆ ಘಾಟಿಯಲ್ಲಿ, ತೀರ್ಥಹಳ್ಳಿ-ಕುಂದಾಪುರದ ಹೆದ್ದಾರಿಯ  36.00 ರಿಂದ 38.00 ಕಿ.ಮೀ ಹಾಗೂ 40.50 ರಿಂದ 41.60 ಕಿ.ಮೀ ರಲ್ಲಿ ಎರಡು ಭಾಗಗಳಲ್ಲಿ1490 ಮೀ 1080 ಮೀ ಒಟ್ಟು 2570.00 ಮೀಟರ್ ಉದ್ದದ ಕಾಂಕ್ರೀಟ್ ಪೇವ್ ಮೆಂಟ್ ನಿರ್ಮಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ಹೆದ್ದಾರಿ ಬಂದ್ ಆಗಿತ್ತು. ಕಳೇದ  ಫೆಬ್ರವರಿ 5 ರಿಂದ ಏಪ್ರಿಲ್ 5ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿತ್ತು.  ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದರು. 

ನಿರ್ಬಂಧದ ವಿಸ್ತರಣೆಯೇಕೆ? 

ಆದರೆ ಕಾಮಗಾರಿ ಇನ್ನೂ ಸಹ ಮುಗಿದಿಲ್ಲ. ಕಾಮಗಾರಿಗೆ ಬಳಸಿದ್ದ ಯಂತ್ರೋಪಕರಣಗಳು ಪದೇಪದೇ ದುರಸ್ತಿಗೆ ಬಂದಿದ್ದರಿಂದ ಕಾಮಗಾರಿ ವಿಳಂಭವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕಾಂಕ್ರಿಟ್ ಪೇವ್​ಮೆಂಟ್​ನ ಕ್ಯೂರಿಂಗ್ ಅವಧಿಗಾಗಿ 15-04-2023 ರವರೆಗೂ ಪಿಡಬ್ಲ್ಯುಡಿ ಇಲಾಖೆಯವರು ಸಮಯಾವಕಾಶವನ್ನು ಕೇಳಿದ್ದಾರೆ. ಇದೇ ಕಾರಣಕ್ಕೆ ಘಾಟಿ ನಿರ್ಬಂಧವನ್ನು 10 ದಿನಗಳ ಕಾಲ ವಿಸ್ತರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. 

ಬದಲಿ ಮಾರ್ಗಗಳು ಯಾವುದು!? 

  1. ರಾಜ್ಯ ಹೆದ್ದಾರಿ 52ರಲ್ಲಿ ತೀರ್ಥಹಳ್ಳಿಯಿಂದ ಕುಂದಾಪುರ ಕಡೆಗೆ ಹೋಗುವ ಲಘು ವಾಹನಗಳು ತೀರ್ಥಹಳ್ಳಿ – ಹಾಲಾಡಿ – ಬಸ್ರೂರು – ಕುಂದಾಪುರ ರಸ್ತೆಗೆ ತಲುಪಬಹುದು ಅಥವಾ ತೀರ್ಥಹಳ್ಳಿ – ಹೆಬ್ರಿ – ಉಡುಪಿ – ಕುಂದಾಪುರ ರಸ್ತೆಯಲ್ಲಿ ಸಂಚರಿಸಬಹುದು.
  2. ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆಗೆ ಹೋಗುವ ಭಾರಿ ವಾಹನಗಳು ತೀರ್ಥಹಳ್ಳಿ -ಕಾನುಗೋಡು – ನಗರ – ಕೊಲ್ಲೂರು – ಕುಂದಾಪುರ ಮಾರ್ಗದಲ್ಲಿ ಸಂಚರಿಸಬಹುದು ಎಂದು ತಿಳಿಸಲಾಗಿದೆ.
  3. ಶಿವಮೊಗ್ಗ, ಸಾಗರ ಕಡೆಯಿಂದ ಹೊಸನಗರದ ಮೂಲಕ ಕುಂದಾಪುರ ಕಡೆಗೆ ಹೋಗು ಲಘು ಮತ್ತು ಭಾರಿ ವಾಹನಗಳು ಹೊಸನಗರ – ನಗರ – ಕೊಲ್ಲೂರು ರಸ್ತೆಯಲ್ಲಿ ಸಂಚರಿಸಲು ಸೂಚಿಸಲಾಗಿದೆ

Read/ ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್  ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ 



read/ ELECTION 2023 / ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​, ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/ ಧರ್ಮಸ್ಥಳ ದೇವರ ದುಡ್ಡು ಜಪ್ತಿ

 

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.

 

Read/ BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸರೆ? ಸಿಕ್ಕಿದ್ದೇಗೆ ಗೊತ್ತಾ

 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

 

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

 

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 




HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamoggaChikkamagaluru balebare ghat,hulikal ghat,agumbe ghat,charmadi ghat,ghat section,balebare ghat ride,balebare ghat scenes,ksrtc on balebare ghat,shiradi ghat,balebare,balebare ghat hairpin bends,chasing bus on balebare ghat,balebare ghat hairpin curves,careful driving balebare ghat,balebare falls,western ghat,ghat,sampaje ghat,dhimbam ghat,balebai ghat,western ghats,ghats,ghat road,hulikal ghat road,hulikal ghat video,baalebare