ಶಿವಮೊಗ್ಗದಲ್ಲಿಯು ಆರಂಭವಾಯ್ತು #SAVEVISL ಹೋರಾಟ! ಹೆಮ್ಮೆಯ ಕಾರ್ಖಾನೆ ಉಳಿಸುವಂತೆ ಒತ್ತಾಯ

#SAVEVISL campaign launched in Shivamogga, demands to save proud factory

ಶಿವಮೊಗ್ಗದಲ್ಲಿಯು ಆರಂಭವಾಯ್ತು #SAVEVISL ಹೋರಾಟ! ಹೆಮ್ಮೆಯ ಕಾರ್ಖಾನೆ ಉಳಿಸುವಂತೆ ಒತ್ತಾಯ
ಶಿವಮೊಗ್ಗದಲ್ಲಿಯು ಆರಂಭವಾಯ್ತು #SAVEVISL ಹೋರಾಟ! ಹೆಮ್ಮೆಯ ಕಾರ್ಖಾನೆ ಉಳಿಸುವಂತೆ ಒತ್ತಾಯ

MALENADUTODAY.COM | SHIVAMOGGA NEWS  

ಆಧುನಿಕ ಮೈಸೂರು ನಿರ್ಮಾತೃಗಳಲ್ಲೊಬ್ಬರಾದ ಸರ್.ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಸ್ಥಾಪನೆಯಾಗಿದ್ದ ಭದ್ರಾವತಿಯ ವಿ.ಐ.ಎಸ್.ಎಲ್. ಕಾರ್ಖಾನೆಯನ್ನು  ಮುಚ್ಚುವ ನಿರ್ಧಾರವನ್ನು ಖಂಡಿಸಿ  ಜಿಲ್ಲಾ ಎನ್.ಎಸ್.ಯು.ಐ. ಇವತ್ತು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದೆ. 

ವಿ.ಐ.ಎಸ್.ಎಲ್. ಕಾರ್ಖಾನೆಯು ಏಷ್ಯಾದಲ್ಲಿಯೇ ಉತ್ಕೃಷ್ಟ ಕಬ್ಬಿಣ ಮತ್ತು ಉಕ್ಕು ತಯಾರಿಕೆಗೆ ಪ್ರಸಿದ್ಧಿ ಪಡೆದಿದ್ದಂತ ಕಾರ್ಖಾನೆ. ಈ ಕಾರ್ಖಾನೆಯ ಉತ್ಪನ್ನಗಳಿಗೆ ಬೇಡಿಕೆ ಮತ್ತು ಮಾರುಕಟ್ಟೆಯಿತ್ತು. ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿದ್ದ ವಿಐಎಸ್‍ಎಲ್ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಉದ್ದೇಶಕ್ಕೆ ಯಾವುದೇ ಷರತ್ತು ಇಲ್ಲದೇ ಕೇಂದ್ರ ಸರ್ಕಾರದ ಸೈಲ್‍ಗೆ ವಹಿಸಿಕೊಡಲಾಗಿತ್ತು. ಸೈಲ್ ಕಾರ್ಖಾನೆ ಅಭಿವೃದ್ಧಿ ಪಡಿಸುವ ಬದಲಿಗೆ ಕಾರ್ಖಾನೆಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸದೇ ಇರುವುದರಿಂದ ಇಂದು ವಿಐಎಸ್‍ಎಲ್ ಕಾರ್ಖಾನೆಯನ್ನು ಮುಚ್ಚಲು ಮುಂದಾಗಿದೆ.  

ಕಲ್ಪತರು ನಾಡಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ! ಸ್ವಾಗತಕ್ಕೆ ಅಡಿಕೆ ಹಾರ ಹಾಗೂ ಪೇಟ! ಏನಿದರ ವಿಶೇಷ ಇಲ್ಲಿದೆ ನೋಡಿ

ವಿಐಎಸ್‍ಎಲ್ ಕಾರ್ಖಾನೆ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡುವ ಮೂಲಕ ಈ ಭಾಗದ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತಲೇ ಬಂದಿದೆ. ಆದರೆ, ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗೆ ಗಣಿ ಒದಗಿಸುವಲ್ಲಿ, ಅಗತ್ಯ ಯಂತ್ರೋಪಕರಣಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದು, ಕಾರ್ಖಾನೆ ನಷ್ಟದ ಹಾದಿ ಹಿಡಿಯಲು ಕಾರಣವಾಗಿದೆ. ಇದೀಗ ಕಾರ್ಖಾನೆಯನ್ನು ಮುಚ್ಚುವ ಪ್ರಯತ್ನ ನಡೆಸುತ್ತಿದ್ದು, ಇದರಿಂದ ಸಾವಿರಾರು ಕಾರ್ಮಿಕರು ಬೀದಿಗೆ ಬೀಳುತ್ತಿದ್ದಾರೆ. ಜಿಲ್ಲೆಯ ಆರ್ಥಿಕ ಚಟುವಟಿಕೆಯೂ ಕುಸಿಯುತ್ತಿದೆ. ಇದಕ್ಕೆಲ್ಲ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಎನ್​ಎಸ್​ಯುಐ ಆರೋಪಿಸಿದೆ. ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿಕೊಳ್ಳುತ್ತಲೇ ಅಧಿಕಾರಕ್ಕೆ ಬಂದ ಬಿಜೆಪಿ ಉದ್ಯೋಗ ಸೃಜಿಸುವ ಬದಲು, ಸರ್ಕಾರಿ ಸ್ವಾಮ್ಯದ ಒಂದೊಂದೇ ಉದ್ಯಮಗಳನ್ನು ಮುಚ್ಚುತ್ತಾ ಮತ್ತಷ್ಟು ನಿರುದ್ಯೋಗ ಸೃಷ್ಟಿಗೆ ಕಾರಣವಾಗಿದೆ. 

shivamogga : ನಡು ರೋಡಲ್ಲಿ, ಪ್ರೀತ್ಸೆ..ಪ್ರೀತ್ಸೆ! ಅಪ್ತಾಪ್ತೆಗೆ ಯುವಕನ ಹಿಂಸೆ ದಾಖಲಾಯ್ತು ಕೇಸ್​

ಗೌರವಾನ್ವಿತ ರಾಷ್ಟ್ರಪತಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ಭದ್ರಾವತಿಯ ವಿಐಎಸ್‍ಎಲ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ, ಸರ್ಕಾರಿ ಸ್ವಾಮ್ಯದಲ್ಲೇ ಮುಂದುವರೆಸುವಂತೆ ಸರ್ಕಾರಕ್ಕೆ ಆದೇಶ ನೀಡಬೇಕು. ಹಾಗೆಯೇ ಎಂಪಿಎಂ ಕಾರ್ಖಾನೆ ಪುನಶ್ಚೇತನಕ್ಕೂ ನಿರ್ದೇಶನ ನೀಡಬೇಕು ಎಂದು ಎನ್​ಎಸ್​ಯು ಐ ಒತ್ತಾಯಿಸಿದೆ. 

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷರಾದ ಎಚ್ಎಸ್ ಸುಂದರೇಶ್, ಮಾಜಿ ಶಾಸಕರಾದ ಕೆ ಬಿ ಪ್ರಸನ್ನ ಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಎಸ್ ಪಿ ದಿನೇಶ್, ರಾಜ್ಯ ವಕ್ತಾರರಾದ ರಮೇಶ ಹೆಗಡೆ, ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ದೀಪಕ್ ಸಿಂಗ್ ಹಾಗೂ ಕಲೀಮ್ ಪಾಷಾ, ಮಹಮದ್ ನಿಹಾಲ್, ಆರಿಫ್,ಕಾಂಗ್ರೆಸ್  ಮುಖಂಡರುಗಳಾದ ಪ್ರಮೋದ್, ಅಕ್ಬರ್, ರಘು, ಚಂದನ್,  ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಎನ್ ಎಸ್ ಯು ಐ ನ ಅಧ್ಯಕ್ಷರಾದ ವಿಜಯಕುಮಾರ್ ಅವರು ಮಾತನಾಡಿ ವಿಐಎಸ್‍ಎಲ್ ಉಳಿವಿಗೆ ಹೋರಾಡುತ್ತಿರುವ ಕಾರ್ಮಿಕರ ಜೊತೆ ಎನ್.ಎಸ್.ಯು.ಐ. ಸದಾ ಇರಲಿದೆ. ಕೂಡಲೇ ಸರ್ಕಾರ ವಿಐಎಸ್‍ಎಲ್ ಕಾರ್ಖಾನೆ ಉಳಿವಿಗೆ ಕ್ರಮ ಕೈಗೊಳ್ಳದಿದ್ದಲ್ಲಿ, ಎನ್.ಎಸ್.ಯು.ಐ. ವತಿಯಿಂದ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಈ ಮೂಲಕ ಎಚ್ಹರಿಸುತಿದ್ದೇವೆ ಈ ಪ್ರತಿಭಟನೆಯಲ್ಲಿ ಎನ್ ಎಸ್ ಯು ಐ ನ ರವಿ ಕಾಟಿಕೆರೆ, ಚರಣ್, ಹರ್ಷಿತ್ ,ವಿಕ್ರಂ, ರವಿ,ಚಂದ್ರು ಜಿ ರಾವ್ ,ತೌಫಿಕ್, ಹೇಮಂತ್, ಚರಣ್, ದೀಕ್ಷಿತ್ ಪ್ರದೀಪ್ ,ವರುಣ್ ವಿ ಪಂಡಿತ್, ನಾಗೇಂದ್ರ, ಸಾಗರ್, ಹಾಗೂ ಯುವ ಕಾಂಗ್ರೆಸ್ ನ , ಬಸವರಾಜ್, ಮಲಗಪ್ಪ ಶಿವು, ಅಬ್ದುಲ್, ಗಿರೀಶ್, ಆಕಾಶ್, ಗೌತಮ್ ನೂರಾರು ಯುವಕರು ಪಾಲ್ಗೊಂಡಿದ್ದರು

ದುಸ್ವಪ್ನದಂತೆ ಕಾಡುತ್ತಿರುವ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಭೀತಿ! ತಂಗಿ ಮದುವೆ ಟೈಂನಲ್ಲಿ ಗುತ್ತಿಗೆ ಕಾರ್ಮಿಕ ನೇಣಿಗೆ ಶರಣು! 19 ದಿನದಲ್ಲಿ ಮೂವರ ದುರ್ಮರಣ

 *ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com