ನಟ ದರ್ಶನ್​ ಪ್ರಕರಣದಲ್ಲಿ ರೇಣುಕಾಸ್ವಾಮಿ ಪೋಷಕರ ಸಾಕ್ಷ್ಯ! ಕೋರ್ಟ್​ ಸಮನ್ಸ್​!

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:   ನಟ ದರ್ಶನ್​ ಕೇಸ್​ನಲ್ಲಿ ಮತ್ತೊಂದು ಅಪ್​ಡೇಟ್ ಸುದ್ದಿ ಹೊರಬಿದ್ದಿದೆ. ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಮೃತರ ಪೋಷಕರಿಗೆ ಸಾಕ್ಷ್ಯ ನುಡಿಯಲು ಸಮನ್ಸ್‌ ಜಾರಿ ಮಾಡಲಾಗಿದೆ. ದರ್ಶನ್‌ ತೂಗುದೀಪ ಸೇರಿದಂತೆ ಹಲವರ ವಿರುದ್ಧ ದಾಖಲಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೃತರ ಪೋಷಕರಾದ ತಂದೆ ಕಾಶಿನಾಥಯ್ಯ ಮತ್ತು ತಾಯಿ ರತ್ನಮ್ಮ ಅವರಿಗೆ ಸಾಕ್ಷ್ಯ ನುಡಿಯಲು ಬೆಂಗಳೂರಿನ ಸತ್ರ ನ್ಯಾಯಾಲಯವು ಸಮನ್ಸ್‌ ಜಾರಿಗೊಳಿಸಿದೆ. ಡಿಸೆಂಬರ್‌17 ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವು ಸೂಚಿಸಿದೆ. 

Renukaswamy Case
Renukaswamy Case
Renukaswamy Case
Renukaswamy Case

ಶಿವಮೊಗ್ಗದ ಸುದೀಪ್​ಗೆ ಸ್ವರ್ಣಪದಕ, ಮುಚ್ಚುವ ಪಟ್ಟಿಯಲ್ಲಿ ಜಿಲ್ಲೆಯ 1518 ಶಾಲೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಪ್ರಕರಣದಲ್ಲಿ ಮೃತರ ತಂದೆ ಮತ್ತು ತಾಯಿ ಸಾಕ್ಷಿ ಸಂಖ್ಯೆ 7 ಮತ್ತು 8 ಸಮನ್ಸ್‌ ಜಾರಿಗೊಳಿಸಬೇಕು ಎಂದು ಕೋರಿ ಪ್ರಾಸಿಕ್ಯೂಷನ್‌ ಅರ್ಜಿ ಸಲ್ಲಿಸಿತ್ತು. ನ್ಯಾಯಾಧೀಶ ಐ.ಪಿ. ನಾಯಕ್ ಅವರು ಈ ಅರ್ಜಿಯನ್ನ ಪುರಸ್ಕರಿಸಿದ್ದಾರೆ. ನವೆಂಬರ್‌  3 ರಂದು ದರ್ಶನ್ ಸೇರಿದಂತೆ ಪ್ರಕರಣದ 17 ಆರೋಪಿಗಳ ವಿರುದ್ಧ ಕೊಲೆ, ಅಪಹರಣ, ಹಲ್ಲೆ, ಅಪರಾಧಿಕ ಒಳಸಂಚು, ಅಕ್ರಮ ಕೂಟ ರಚನೆ, ಹಣ ವಸೂಲಿ, ಅಕ್ರಮ ಬಂಧನ ಸೇರಿದಂತೆ ಇನ್ನಿತರ ಆರೋಪಗಳನ್ನ ಕೋರ್ಟ್​ನಲ್ಲಿ ಚಾರ್ಜ್​ ಮಾಡಲಾಗಿತ್ತು.  ನವೆಂಬರ್‌ 10 ರಿಂದ ಪ್ರಕರಣದ ಮುಖ್ಯ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಲಾಗಿತ್ತು. ಇದರ ಬೆನ್ನಲ್ಲೇ ನ್ಯಾಯಾಲಯ ಡಿಸೆಂಬರ್ 17 ರಂದು ಮೊದಲ ಸಾಕ್ಷಿಯನ್ನು ವಿಚಾರಣೆ ನಡೆಸಲಿದೆ. 

ಇಂಡಿಗೋ ವಿಮಾನ ರದ್ದು : ಶಿವಮೊಗ್ಗ ಪ್ರಯಾಣಿಕರ ಪರದಾಟ 

ಈ ಮಧ್ಯೆ ರೇಣುಕಾಸ್ವಾಮಿ (Renukaswamy Case)ಪೋಷಕರ ಸಾಕ್ಷ್ಯ ದಾಖಲಿಸಬೇಕು ಎಂಬ ಪ್ರಾಸಿಕ್ಯೂಷನ್‌ ಮನವಿಗೆ ದರ್ಶನ್‌ ಮತ್ತು ಜಗದೀಶ್‌ ಸೇರಿದಂತೆ ಇತರ ಆರೋಪಿಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಮೊದಲಿಗೆ ದೂರುದಾರರು, ಪ್ರತ್ಯಕ್ಷದರ್ಶಿಗಳು ಮತ್ತು ಸಾಂದರ್ಭಿಕ ಸಾಕ್ಷಿಗಳ ವಿಚಾರಣೆ ನಡೆಸಿದ ನಂತರವೇ ಮೃತನ ತಂದೆ-ತಾಯಿ ಅವರ ಸಾಕ್ಷಿಗಳ ವಿಚಾರಣೆ ನಡೆಸಬೇಕು. ಆದ್ದರಿಂದ ಪ್ರಾಸಿಕ್ಯೂಷನ್​ ಮನವಿ ತಿರಸ್ಕರಿಸಿ, ಮೊದಲು ದೂರುದಾರರ ವಿಚಾರಣೆಗೆ ನಿರ್ದೇಶಿಸಬೇಕು ಎಂದು ಕೋರಿದ್ದರು

 ಶಿವಮೊಗ್ಗದ ಪುರೋಹಿತರ ಕೈ ಹಿಡಿದ ಅಹಮದಾಬಾದ್ ಯುವತಿ, ನೆಂಟಸ್ಥನ  ಬೆಳೆದಿದ್ದು ಹೇಗೆ

ಆದರೆ, ಈ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಪ್ರಾಸಿಕ್ಯೂಷನ್‌ ಮನವಿಯಂತೆ ಸಾಕ್ಷಿಗಳಿಗೆ ಸಮನ್ಸ್‌ ಹೊರಡಿಸಿ ಅವರ ಸಾಕ್ಷ್ಯ ದಾಖಲಿಸಿಕೊಳ್ಳುವುದು ನ್ಯಾಯಾಲಯದ ಕರ್ತವ್ಯ. ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 131 ರ ಪ್ರಕಾರ ಪ್ರಾಸಿಕ್ಯೂಷನ್‌ ಪರವಾಗಿ ಹಾಜರುಪಡಿಸಬಹುದಾದಂತಹ ಸಾಕ್ಷ್ಯವನ್ನು ತೆಗೆದುಕೊಳ್ಳಬಹುದಾಗಿದೆ. ಇಂತಹದ್ದೇ ಸಾಕ್ಷಿಯನ್ನು ಮೊದಲಿಗೆ ಹಾಜರುಪಡಿಸುವಂತೆ ಪ್ರಾಸಿಕ್ಯೂಷನ್‌ಗೆ ನ್ಯಾಯಾಲಯ ನಿರ್ದೇಶನ ನೀಡುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ. 

ಶಿವಮೊಗ್ಗ ಜಿಲ್ಲೆಯಲ್ಲಿ ಭತ್ತ ಖರೀದಿಗೆ MSP ನಿಗದಿ, ನಿಗದಿಪಡಿಸಿದ ಕನಿಷ್ಟ ದರವೆಷ್ಟು..? 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಸದ್ಯ ಟ್ರೆಂಡ್​ನಲ್ಲಿದ್ದಾರೆ 73ರ ಬಾಡಿಬಿಲ್ಡರ್​ ರಾಮಪ್ಪ! ವಯಸ್ಸಿಗೆ ಸೆಡ್ಡು ಹೊಡೆದ ಇವರ ಕಥೆ ಗೊತ್ತಾ! ಇವರು ಶಿವಮೊಗ್ಗದವರು!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ರೇಣುಕಾಸ್ವಾಮಿ ಕೊಲೆ: ಡಿ. 17 ರಂದು ಮೃತನ ಪೋಷಕರಿಗೆ ಸಾಕ್ಷ್ಯ ವಿಚಾರಣೆ ! ನಟ ದರ್ಶನ್​ ತೂಗುದೀಪ Renukaswamy Case Deceaseds Parents Summoned on Dec 17 Court Orders TV Installation in Darshan Cell