ಸಾವಿಗೆ ಸಾವಿರ ದಾರಿ : ಹೀಗೂ ಎದುರಾಗುತ್ತೆ ವಿಧಿ! ನಂಬಿಕೆ ಮೂಡದ ಮರಣದ ಕಥೆ!

ajjimane ganesh

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಸಾವಿಗೆ ಸಾವಿರ ದಾರಿ ಎನ್ನುತ್ತಾರೆ! ಹಣೆಬರಹ ಮುಗಿದ ಮೇಲೆ ಒಂದು ಕ್ಷಣವೂ ಬದುಕಲಾಗದು ಎಂದು ಸಹ ಹೇಳುತ್ತಾರೆ. ಇದು ಹತಾಶೆ ಅಥವಾ ನಿಟ್ಟುಸಿರಿನ ಮಾತಲ್ಲ. ಕೆಲವೊಂದು ಘಟನೆಗಳು ಹಾಗೆ ಅನಿಸುವಂತೆ ಮಾಡುತ್ತವೆ. ಇದಕ್ಕೆ ಉದಾಹರಣೆ ಎಂಬಂತಹ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಮಕ್ಕಳ ಮೇಲೆ ಸಿಟ್ಟಾಗಿ, ತವರಮನೆಗೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಮೇಲೆ, ಯಾರೋ ತಂದು ರೋಡಿಗೆ ಬಿಟ್ಟಿದ್ದ ರಾಟ್ ವೀಲ್ಹರ್​ ನಾಯಿಗಳು ದಾಳಿ ನಡೆಸಿದ್ದರ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ. 

Unusual Deaths in History
Unusual Deaths in History

ಹೊಸನಗರ ಸಂಪೆಕಟ್ಟೆ ಸರ್ಕಲ್​ನಲ್ಲಿ ರಾತ್ರಿ ಸಮಾ ಹೊಡ್ಕೊಂಡ್ರು : ಸಿಸಿ ಟಿವಿಯ ದೃಶ್ಯ ಸೆರೆ

ಎಲ್ಲಿಯದ್ದೋ ನಾಯಿಗಳು! ನಿರೀಕ್ಷೆಯೇ ಇಲ್ಲದೆ ಹೊರಟಿದ್ದ ತಾಯಿ! ಹೊತ್ತಲ್ಲದ ಹೊತ್ತು! ನಡೆದ ಅನಾಹುತ! ವಿದಿಯು ಸಾವು ತರಲು ಪ್ಲಾನ್ ಮಾಡುತ್ತಾನೆಯೇ ಎಂಬ ಆಶ್ಚರ್ಯದ ಆತಂಕವೊಂದು ಮೂಡುತ್ತಿದೆ.  ನಡೆದಿದ್ದೇನು ಎಂಬುದುನ್ನ ನೀವು ಓದಿದರೆ ನಿಮಗೂ ಹಾಗನ್ನಿಸಿಲಕ್ಕೆ ಸಾಕು! Unusual Deaths in History

ಕ್ರಿಕೆಟ್: ಸಾಗರದ ವಿರಾಟ್ ಆರ್. ಗಣ್ಯಗೆ ಕರ್ನಾಟಕ ತಂಡದಲ್ಲಿ ಸ್ಥಾನ

ದಾವಣಗೆರೆ ತಾಲ್ಲೂಕಿನ ಹೊನ್ನೂರು ಗೊಲ್ಲರಹಟ್ಟಿ ಗ್ರಾಮ.  ಮಲ್ಲಶೆಟ್ಟಿಹಳ್ಳಿ ಗ್ರಾಮದ ನಿವಾಸಿ ಅನಿತಾ ಎಂಬವರು ಗುರುವಾರ ರಾತ್ರಿ ಸುಮಾರು 11.30 ರ ವೇಳೆಗೆ ಮನೆಯಲ್ಲಿ ಮಕ್ಕಳೊಂದಿಗೆ ಜಗಳ ಮಾಡಿಕೊಂಡು, ತವರು ಮನೆಗೆ ಹೋಗ್ತಿನೆ ಎಂದು ಕತ್ತಲಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅವರಿಗೆ ತವರಿಗೆ ಹೋಗುವ ಉದ್ದೇಶವಿತ್ತಾ ಅಥವಾ ತಮ್ಮ ಕೋಪ ತಣಿಯಲೆಂದು ನಡೆದು ಹೋಗುತ್ತಿದ್ದರಾ ಗೊತ್ತಿಲ್ಲ. ಆದರೆ, ಹೊನ್ನೂರು ಗೊಲ್ಲರಹಟ್ಟಿ ಬಳಿ ಹೋಗುತ್ತಿದ್ದಾಗ, ಅಲ್ಲಿಯೇ ಬೀದಿಯಲ್ಲಿದ್ದ  ಎರಡು ರಾಟ್‌ವೀಲರ್‌ ನಾಯಿಗಳು ಇವರ ಮೇಲೆ ದಾಳಿ ಮಾಡಿವೆ. ಅಸಹಾಯಕಳಾದ ತಾಯಿ ಕಿರುಚಾಡಿದ್ದರಾದರೂ, ಅಲ್ಲಿ ಸುತ್ತಮುತ್ತ ಹತ್ತಿರದಲ್ಲಿ ಯಾವ ಮನೆ ಇರದ  ಹಿನ್ನೆಲೆಯಲ್ಲಿ ಮಹಿಳೆಯ ಧ್ವನಿ ಯಾರಿಗೂ ಕೇಳಿಲ್ಲ. ದೂರದ ಮನೆಯೊಬ್ಬರಿಗೆ ನಾಯಿ ಕೂಗುತ್ತಿರುವ ಶಬ್ಧ ಕೇಳಿಸಿದೆ, ರಾತ್ರಿ ನಾಯಿಗಳು ಬೊಗಳುವುದು ಸಾಮಾನ್ಯ ಎಂದುಕೊಂಡು ಸುಮ್ಮನಾಗಿದ್ದರು. ತಡರಾತ್ರಿ ಮೂರುವರೆ ಹೊತ್ತಿಗೆ ಹೊಲಕ್ಕೆ ನೀರು ಬಿಡಲು ಅಂತಾ ಇದೇ ದಾರಿಯಲ್ಲಿ ಬಂದಿದ್ದ ರೈತನಿಗೆ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಕಾಣಿಸಿದ್ದಾರೆ. ತಕ್ಷಣವೇ ಅವರು ಗ್ರಾಮಸ್ಥರನ್ನ ಸ್ಥಳಕ್ಕೆ ಕರೆಸಿ ಮಹಿಳೆಯನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಮಾರ್ಗಮಧ್ಯೆ ಅನಿತಾ ಸಾವನ್ನಪ್ಪಿದ್ದರು. 

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್, ಬಿಗ್​ ಸುದ್ದಿ  

ರಾಟ್​ ವೀಲ್ಹರ್​ ನಾಯಿಗಳು ಎಷ್ಟು ಭೀಬತ್ಸವಾಗಿದ್ದವೆಂದರೆ, ಅನಿತಾರಿಗೆ ಸುಮಾರು 50 ಕಡೆಗಳಲ್ಲಿ ಈ ನಾಯಿಗಳು ಕಚ್ಚಿವೆ. ಆಕೆಯನ್ನು ಎಳೆದಾಡಿವೆ. ತೀವ್ರವಾಗಿ ಗಾಯಗೊಂಡಿದ್ದರಿಂದಲೇ ಅನಿತಾ ಸಾವನ್ನಪ್ಪಿದ್ದಾರೆ. ಸಂಗತಿ ಅಂದರೆ, ಯಾವನೋ ಒಬ್ಬ ಈ ರಾಟ್​ ವೀಲ್ಹರ್​ಗಳನ್ನ ತಂದು ಬೀದಿಯಲ್ಲಿ ಬಿಟ್ಟು ಹೋಗಿರುವುದು. ರಾಟ್​ ವೀಲ್ಹರ್​ಗಳು ಊರಿನಲ್ಲಿ ಯಾರಿಗೂ ಸೇರಿದ್ದಾಗಿರರಿಲ್ಲ. ಯಾವನೋ ಇಲ್ಲಿ ಬೀದಿಗೆ ತಂದು ಅದನ್ನು ಬಿಟ್ಟು ಹೋಗಿದ್ದಾನೆ. ಅದೇ ಹೊತ್ತಿಗೆ ಅನಿತಾ ಮನೆ ಬಿಟ್ಟು ಬಂದಿದ್ದಾರೆ. ಆಮೇಲೆ ನಡೆದಿದ್ದು ಈಗಾಗಲೇ ನೀವೆ ಓದಿದ್ದೀರಿ. Unusual Deaths in History

 ಶಿವಮೊಗ್ಗದ ಪುರೋಹಿತರ ಕೈ ಹಿಡಿದ ಅಹಮದಾಬಾದ್ ಯುವತಿ, ನೆಂಟಸ್ಥನ  ಬೆಳೆದಿದ್ದು ಹೇಗೆ

ಸಾವು ಅನಿತಾರಿಗೆ ನಿಶ್ಚಯವಾಗಿತ್ತಾ!? ಹುಚ್ಚಾಟದ ನಾಯಿಗಳು ಆಕೆಯನ್ನು ಬಲಿ ಪಡೆಯಲು,  ಅವನ್ಯಾವನೋ ಅಲ್ಲಿಗೆ ಬಿಟ್ಟುಹೋಗಿದ್ದು ಕಾರಣವಾಯ್ತಾ?! ದೇವರೆ ಬಲ್ಲ! ಆದರೆ ಘಟನೆಯಂತೂ ಆಘಾತ ಮೂಡಿಸುತ್ತೆ.

Malenadu Today

26ರ ಯುವಕನಿಗೆ 2 ದಶಕಗಳ ಕಾಲ ಸೆರೆವಾಸ! 4 ಲಕ್ಷ ಪರಿಹಾರ! ಶಿವಮೊಗ್ಗ ನ್ಯಾಯಾಲಯದ ಮಹತ್ವದ ತೀರ್ಪು!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಶಿವಮೊಗ್ಗ ಜಿಲ್ಲೆಯಲ್ಲಿ ಭತ್ತ ಖರೀದಿಗೆ MSP ನಿಗದಿ, ನಿಗದಿಪಡಿಸಿದ ಕನಿಷ್ಟ ದರವೆಷ್ಟು..? 

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, Unusual Deaths in History
Share This Article