15 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಹಿಂದಿರುಗಿಸಿದ ಬಟ್ಟೆ ಅಂಗಡಿ ಮಾಲೀಕ

ಶಿವಮೊಗ್ಗ : ಕಳೆದುಕೊಂಡ ವಸ್ತುಗಳು ಸಿಕ್ಕಾಗ ಆಗುವ ಸಂತೋಷ ಬೇರೆಯದ್ದೆ ಲೆವಲ್​ನಲ್ಲಿ ಇರುತ್ತದೆ. ಅದೇ ರೀತಿ ಯಾರೋ ಕಳೆದುಕೊಂಡಿದ್ದ ಪ್ರಾಮಾಣಿಕವಾಗಿ ಅವರಿಗೆ ವಾಪಸ್​ ನೀಡುವುದರಲ್ಲಿ ಒಂದು ರೀತಿಯ ತೃಪ್ತ ಸಂತೋಷವಿರುತ್ತದೆ.

ಅಂತಹದ್ದೊಂದು ಸಂತಸದ ಭಾವವನ್ನು ಹೆಚ್ಚಿಸಿ ಸನ್ಮಾನಿಸಿದ ಘಟನೆಯೊಂದಕ್ಕೆ ಶಿವಮೊಗ್ಗ ಪೊಲೀಸ್​ ಇಲಾಖೆ ಸಾಕ್ಷಿಯಾಗಿದೆ.

15 ಲಕ್ಷದ ಚಿನ್ನ ಮರೆತು ಹೋಗಿತ್ತು

ಇಲ್ಲಿನ ದುರ್ಗಿಗುಡಿಯ ಇತಿಹಾಸ್ ಕಲೆಕ್ಷನ್ ಬಟ್ಟೆ ಅಂಗಡಿಯಲ್ಲಿ ಗ್ರಾಹಕರೊಬ್ಬರು ಬಿಟ್ಟು ಹೋಗಿದ್ದ 15 ಲಕ್ಷ ಮೌಲ್ಯದ ಚಿನ್ನಾಭರಣ ಇದ್ದ ವ್ಯಾನಿಟಿ ಬ್ಯಾಗ್ ಹಿಂತಿರುಗಿಸಿ ಮಾಲೀಕರು ಪ್ರಾಮಾಣಿಕತೆ ಮೆರೆದಿದ್ದಾರೆ.

ತರೀಕೆರೆಯ ನಿವಾಸಿ ಗಾಯತ್ರಿ ಎಂಬವರು ಕಳೆದ ಏ.16 ರಂದು ಗಾಯತ್ರಿ ಇತಿಹಾಸ್ ಕಲೆಕ್ಷನ್‌ನಲ್ಲಿ ಬಟ್ಟೆ ಖರೀದಿಸಿದ್ದರು. ಈ ವೇಳೆ ಚಿನ್ನಾಭರಣ ಇದ್ದ ವ್ಯಾನಿಟಿ ಬ್ಯಾಗನ್ನು ಮರೆತು ಅಲ್ಲಿಯೇ ಮರೆತು ಬಿಟ್ಟು ಹೋಗಿದ್ದರು.

Malenadu Today Shivamogga

ಕೆಲಸಗಾರರಿಗೆ ಸಿಕ್ಕಿದ್ದ ಬ್ಯಾಗ್​

ಸಂಜೆ ಅಂಗಡಿ ಸ್ವಚ್ಛಗೊಳಿಸುವಾಗ ಬ್ಯಾಗ್ ಗಮನಿಸಿದ ಕೆಲಸಗಾರರಾದ ಸ್ವಾತಿ ಹಾಗೂ ಸಂಗೀತ ಅದನ್ನು ಮಾಲೀಕರಿಗೆ ಒಪ್ಪಿಸಿದ್ದರು. ಈ ಕಡೆ ಬ್ಯಾಗ್​ ಮರೆತಿದ್ದನ್ನ ನೆನಪು ಮಾಡಿಕೊಂಡ ಬ್ಯಾಗ್​ನ ಮಾಲೀಕರಾದ ಗಾಯತ್ರಿ ಆ ದಿನ ತಾವು ಓಡಾಡಿದ್ದ ಸ್ಥಳಗಳಲ್ಲಿ ಹುಡುಕಿ ಕೊನೆಗೆ ಇತಿಹಾಸ್ ಕಲೆಕ್ಷನ್ ಬಟ್ಟೆ ಅಂಗಡಿಗೆ ಬಂದು ವಿಚಾರಿಸಿದ್ದಾರೆ.

ಪೊಲೀಸ್ ಪರಿಶೀಲನೆ ಬಳಿಕ ಬ್ಯಾಗ್ ವಾಪಸ್​

‘ವ್ಯಾನಿಟಿ ಬ್ಯಾಗ್‌ನಲ್ಲಿ ಏನಿದೆ ಹಾಗೂ ಗಾಯತ್ರಿ ಅವರೇ ಅದರ ಮಾಲೀಕರಾ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಲುವಾರಿ ಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದ ಬಟ್ಟೆ ಅಂಗಡಿಯ ಮಾಲೀಕರು ಬಳಿಕ ಪೊಲೀಸ್ ಸಮಕ್ಷಮದಲ್ಲಿ ಬ್ಯಾಗ್​ನ್ನ ಅದರ ಮಾಲೀಕರಿ ಸುಪರ್ಧಿಗೆ ವಹಿಸಿದ್ದಾರೆ.

Malenadu Today Shivamogga

ಇತಿಹಾಸ್ ಕಲೆಕ್ಷನ್​ ಮಾಲೀಕರಿಗೆ ಸನ್ಮಾನ

ಈ ಬಳಿಕ ಮಾಲೀಕರು ಹಾಗೂ ಅಲ್ಲಿನ ಕೆಲಸಗಾರರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಯನಗರ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್​ ರವಿಪಾಟೀಲ್​ ಇತಿಹಾಸ್ ಕಲೆಕ್ಷನ್ ಬಟ್ಟೆ ಅಂಗಡಿ ಮಾಲೀಕ ಮಾರ್ತಾಂಡ ಹಾಗೂ ಅಂಗಡಿ ಕೆಲಸಗಾರರಾದ ಸ್ವಾತಿ, ಸಂಗೀತ ಸನ್ಮಾನಿಸಿ ಅಭಿನಂದಿಸಿದರು.

Shivamogga Clothing Store Owner Returns Bag with 15 Lakh Gold15 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಹಿಂದಿರುಗಿಸಿದ ಬಟ್ಟೆ ಅಂಗಡಿ ಮಾಲೀಕ
Shivamogga Clothing Store Owner Returns Bag with 15 Lakh Gold15 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಹಿಂದಿರುಗಿಸಿದ ಬಟ್ಟೆ ಅಂಗಡಿ ಮಾಲೀಕ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw