ಆರಗ ಜ್ಞಾನೇಂದ್ರರ ವಿರುದ್ದ ಪೊಲೀಸರಿಗೆ ದೂರು/ ಅರಶಿನ ಗುಂಡಿ ಫಾಲ್ಸ್​ಗೆ ಮಕ್ಕಳನ್ನ ಕಳುಹಿಸಬೇಡಿ/ 5 ಸಾವಿರ ಲಂಚಕ್ಕೆ 3 ವರ್ಷ ಶಿಕ್ಷೆ/ ಭಾಮೈದನ ವಿರುದ್ದ ಭಾವ ಕಂಪ್ಲೆಂಟ್​ TODAY@NEWS

KARNATAKA NEWS/ ONLINE / Malenadu today/ Aug 3, 2023 SHIVAMOGGA NEWS 

ಮಾಜಿ ಗೃಹಸಚಿವರ ವಿರುದ್ಧ ತೀರ್ಥಹಳ್ಳಿ ಪೊಲೀಸರಿಗೆ ದೂರು

ಕಸ್ತೂರಿ ರಂಗನ್​ ವರದಿ ಜಾರಿ ಸಂಬಂಧ ಅರಣ್ಯ ಸಚಿವರು ನೀಡಿದ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಆಡಿದ ಮಾತಿನ ಸಂಬಂಧ  ಕಾಂಗ್ರೆಸ್ ಪಕ್ಷದ ಪಡುವಳ್ಳಿ ಹರ್ಷೇಂದ್ರ ಕುಮಾರ್ ಎಂಬವರು, ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ ಮಾಡುವುದು ಶಿಕ್ಷಾರ್ಹ ಅಪರಾಧ, ಈ ಸಂಬಂಧ ಆರಗ ಜ್ಞಾನೇಂದ್ರರವರು ಹಿರಿಯ ಮುಖಂಡರ ವಿರುದ್ದ ಜಾತಿ ನಿಂದನೆ ಮಾಡಿದ್ದು, ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. 

ರೀಲ್ಸ್​ ಚಟವಿರಲಿಲ್ಲ ಶರತ್​ಗೆ 

ತಮ್ಮ ಮಗನಿಗೆ ರೀಲ್ಸ್​ ಮಾಡುವ ಹುಚ್ಚು ಇರಲಿಲ್ಲ.ಮೇಲಾಗಿ ಅರಶಿನ ಗುಂಡಿ ಫಾಲ್ಸ್​ನವರೆಗೂ ದೂರ ಆತ ನಡೆಯುವವನಲ್ಲ. ಆತನ ಜೊತೆಗಿದ್ದ ಗೆಳೆಯರು ಆತನನ್ನು ಕರೆದುಕೊಂಡು ಹೋಗಿರಬೇಕು ಎಂದು ಭದ್ರಾವತಿಯಲ್ಲಿರುವ ಶರತ್​ ರ ತಂದೆ ಮುನಿಸ್ವಾಮಿ ಮಾದ್ಯಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಆ ಸ್ಥಳ ನೋಡಿದರೇನೆ ಭಯವಾಗುತ್ತದೆ. ಅಂತಹ ಸ್ಥಳಕ್ಕೆ ಯಾರು ಹೋಗದಂತೆ ಸರ್ಕಾರ ಬಂದೋಬಸ್ತ್ ಮಾಡಬೇಕು, ಪೋಷಕರು ಅಂತಹ ಜಾಗಗಳಿಗೆ ತಮ್ಮ ಮಕ್ಕಳನ್ನ ಕಳುಹಿಸಬಾರದು ಎಂದು ಮನವಿ ಮಾಡಿದ್ಧಾರೆ.  

5 ಸಾವಿರ ಲಂಚಕ್ಕೆ ಮೂರು ವರ್ಷ ಶಿಕ್ಷೆ 

ಅಂಗಡಿಯ ಹೆಸರು ಬದಲಾವಣೆ ಮಾಡಿಕೊಡಲು ₹5 ಸಾವಿರ ಲಂಚ ಪಡೆದಿದ್ದ ವಾಣಿಜ್ಯ ತೆರಿಗೆ ಅಧಿಕಾರಿ(ಸಿಟಿಒ) ಟಿ.ಪಾಲಾಕ್ಷಪ್ಪಗೆ ಚಿಕ್ಕಮಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3 ವರ್ಷಗಳ ಸಜೆ ಮತ್ತು ₹40 ಸಾವಿರ ದಂಡ ವಿಧಿಸಿದೆ. ಬಟ್ಟೆ ಅಂಗಡಿಯನ್ನು ಮರಿಯಾ ಫ್ಯಾಷನ್ಸ್ ಎಂದು ಬದಲಿಸಲು ಆರ್‌.ಪಾಂಡು ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕೆ ₹5 ಸಾವಿರ ಲಂಚದ ಬೇಡಿಕೆಯನ್ನು ಪಾಲಕ್ಷಪ್ಪ ಇಟ್ಟಿದ್ದರು ಎಂದು ದೂರುದಾರರು ಆರೋಪಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಲಂಚ ಪಡೆಯುತ್ತಿದ್ದಾಗಲೇ ರೇಡ್ ಮಾಡಿ ಅರೆಸ್ಟ್ ಮಾಡಿದ್ದರು.  ಈ ಪ್ರಕರಣ ಸಂಬಂಧ ಇದೀಗ  ತೀರ್ಪು ಹೊರಬಿದ್ದಿದೆ. 

ಬಾಮೈದನ ವಿರುದ್ಧ ಬಾವನ ದೂರು

ಅಕ್ಕನ ಗಂಡನ ಬೈಕ್​ಗೆ ಡಿಕ್ಕಿ ಹೊಡೆದು ಸಾಯಿಸುವ ಪ್ರಯತ್ನ ಮಾಡಿದ ಆರೋಪ ಸಂಬಂಧ ಭಾವ ತಮ್ಮ ಭಾಮೈದನ ವಿರುದ್ಧ ದೂರು ದಾಖಲಿಸಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ನಲ್ಲಿ ಈ ಸಂಬಂದ 307 ಕೇಸ್ ದಾಖಲಾಗಿದೆ. ಉಪನ್ಯಾಸಕರಾಗಿರುವ ದೂರುದಾರರು ಹಾಗೂ ಅವರ ಪತ್ನಿ ನಡುವೆ ಆಸ್ತಿ ವಿಚಾರದಲ್ಲಿ ಜಗಳ ನಡೆಯುತ್ತಿತ್ತಂತೆ.. ಈ ವಿಚಾರದಲ್ಲಿ  ಲಗೇಜ್​ ವಾಹನವೊಂದರಲ್ಲಿ ಬಂದಿದ್ದ ಬಾಮೈದ, ಉಪನ್ಯಾಸಕರ ಬೈಕ್​ಗೆ ವಾಹನವನ್ನು ಡಿಕ್ಕಿ ಹೊಡೆಸಿದ್ದಾರೆ ಎಂದು ಆರೋಪಿಸಲಾಗಿದೆ.  

ಶಿಕ್ಷಕಿಗೆ ಕಡ್ಡಾಯ ರಜೆ

ಬಿಸಿಯೂಟಕ್ಕೆ ಕೊಳೆತ ತರಕಾರಿ ಬಳಸಿದ ಹೊಳಲೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆಯ ಮುಖ್ಯಶಿಕ್ಷಕಿಯವರಿಗೆ ಶೋಕಾಸ್ ನೋಟಿಸ್ ನೀಡಿ ರಜೆಯ ಮೇಲೆ ಕಳುಹಿಸಲಾಗಿದೆ.ಶಾಲೆಯಲ್ಲಿ ಕೊಳೆತ ತರಕಾರಿ ಬಳಸಿ ಅಡುಗೆ ತಯಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಶಿವಮೊಗ್ಗ ಬಿಇಒ ನಾಗರಾಜ್ ನೇತೃತ್ವದ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ಈ ವೇಳೆ ಗ್ರಾಮಸ್ಥರು ಸಾಲು ಸಾಲು ಆರೋಪ ಮಾಡಿದ್ದಾರೆ. ದೂರನ್ನ ಆಲಿಸಿದ ಅಧಿಕಾರಿಗಳು  ಮುಖ್ಯ ಶಿಕ್ಷಕಿಯನ್ನ ರಜೆ ಮೇಲೆ ಕಳುಹಿಸಿದ್ದಾರೆ.   

ಇನ್ನಷ್ಟು ಸುದ್ದಿಗಳು 

 

Malenadu Today

 ​ 

 

 

Leave a Comment