ತೀರ್ಥಹಳ್ಳಿ ಪಟ್ಟಣದಲ್ಲಿ ಕುಡಿದು ಮಚ್ಚು ಬೀಸಿದ ದುಷ್ಕರ್ಮಿಗಳು...

ತೀರ್ಥಹಳ್ಳಿ ಪಟ್ಟಣದಲ್ಲಿ ಕುಡಿದು  ಮಚ್ಚು ಬೀಸಿದ ದುಷ್ಕರ್ಮಿಗಳು...

KARNATAKA NEWS/ ONLINE / Malenadu today/ Jul 11, 2023 SHIVAMOGGA NEWS   

ತೀರ್ಥಹಳ್ಳಿ : ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಭರಣ ಜ್ಯುವೆಲ್ಲರಿ ಬಳಿ ರಾಷ್ಟ್ರೀಯ ಹೆದ್ದಾರಿಯ ಮದ್ಯ ರಸ್ತೆಯಲ್ಲಿ ತಲ್ವಾರ್ ಹಿಡಿದು ಯುವಕರು ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿದ್ದು ಜೀವಿತ್ ಹಾಗೂ ಆಫ್ರಜ್  ಎಂಬುವರಿಗೆ ಪೆಟ್ಟಾಗಿದೆ.

ಕಮ್ಮರಡಿಯ ಯುವಕ ರಸ್ತೆ ದಾಟುತ್ತಿದ್ದಾಗ ಕುಡಿದ ಮಟ್ಟಿನಲ್ಲಿದ್ದ ನಾಲ್ವರು ಸೀನಿಮಿಯ ರೀತಿಯಲ್ಲಿ ರಸ್ತೆಯಲ್ಲೇ ತಲ್ವಾರ್ ಹಿಡಿದು ಗಲಾಟೆ ಮಾಡಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


ನಿಮ್ಮ ಮೊಬೈಲ್​ಗೂ ಬಂದಿರುತ್ತೆ ಈ ಮೆಸೇಜ್​! ನಂಬಿದ್ರೆ ನಾಮ ಗ್ಯಾರಂಟಿ! ಇಲ್ಲಿದೆ ಸಾಕ್ಷಿ ಓದಿ!

ಶಿವಮೊಗ್ಗ/ ಎಷ್ಟೆ ಬುದ್ದಿವಂತರಿದ್ದರೂ, ಟೆಕ್ನಾಲಿಜಿಯ ಸವಲತ್ತು ಹಾಗೂ ಉತ್ಪನ್ನಗಳಲ್ಲಿ ಯಾವಾಗ ಬೇಕಾದರೂ ಮೋಸವಾಗಬಹುದು.  ನಿಮ್ಮ ಮೊಬೈಲ್​ಗೆ ಬರುವ ಒಂದೇ ಒಂದು ಮೆಸೇಜ್​, ಆಸೆ ತೋರಿಸಿ ನಿಮ್ಮ ಅಕೌಂಟ್​ನ್ನೆ ಖಾಲಿ ಮಾಡಬಹುದು. ಇದಕ್ಕೆ ಪೂರಕವೆಂಬಂತಹ ಘಟನೆಯೊಂದು ಶಿವಮೊಗ್ಗದ ಪೊಲೀಸ್​ ಸ್ಟೇಷನೊಂದರ ವ್ಯಾಪ್ತಿಯಲ್ಲಿ ನಡೆದಿದೆ. 

ಏನಿದು ಪ್ರಕರಣ?

ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾದ ಕೇಸ್​ನಲ್ಲಿ ಬೊಮ್ಮನ ಕಟ್ಟೆಯ ನಿವಾಸಿಯೊಬ್ಬರು ವರ್ಕ್​ ಫ್ರಾಂ ಹೋಂ ಕೆಲಸವನ್ನು ಹುಡುಕುತ್ತಿದ್ದರು. 

ಈ ಸಂದರ್ಭದಲ್ಲಿ ಅವರಿಗೆ ಟೆಲಿಗ್ರಾಂ ಆ್ಯಪ್​ನಲ್ಲಿ ವಿಕ್ಕಿ ಎಂಬ ಹೆಸರಿನಲ್ಲಿ ಮೆಸೇಜ್​ ಬಂದಿದ್ದು, ಟಾಸ್ಕ್​ ಓರಿಯೆಂಟೆಡ್​ ಜಾಬ್​ನ ಪರಿಚಯ ಮಾಡಿದ್ದಾನೆ.  ಮೇಸೆಜ್​ನ್ನ ನಂಬಿದ ಮಹಿಳೆಯು, ಅದರಲ್ಲಿ ತಿಳಿಸಲಾದ  ಟಾಸ್ಕ್​ ಪೂರೈಸಿದ್ದಾರೆ. ತಕ್ಷಣವೇ ದೂರುದಾರರ ಅಕೌಂಟ್​ಗೆ 1500 ರೂಪಾಯಿ ಬಂದಿದೆ. ಹೀಗಾಗಿ ಪೂರ್ತಿಯಾಗಿ ನಂಬಿದ ಮಹಿಳೆಯು ಇನ್ನಷ್ಟು ಟಾಸ್ಕ್​ ನಲ್ಲಿ ಪಾಲ್ಗೊಂಡಿದ್ದಾರೆ. ಅದರಂತೆ ವಸ್ತುಗಳನ್ನು ಟೆಲಿಗ್ರಾಂನಲ್ಲಿ ಹೇಳಿದ ಹಾಗೆ ಬೈ ಮಾಡಿ ಟಾಸ್ಕ್​ ಕಂಪ್ಲೀಟ್ ಮಾಡಿದ್ದಾರೆ. 

ಇದಕ್ಕಾಗಿ ಟೆಲಿಗ್ರಾಂನಲ್ಲಿ ತೋರಿಸಿದ ಅಕೌಂಟ್​ಗೆ ಹಲವು ಸಲ ಒಟ್ಟು 89500/- ರೂ ಗಳನ್ನು ಹಾಕಿದ್ಧರು. ಆದರೆ ಈ ಸಲ ದೂರುದಾರ ಮಹಿಳೆಯ ಅಕೌಂಟ್​ಗೆ ಹಣ ಬಂದಿರಲಿಲ್ಲ. ಹೀಗಾಗಿ ಅನುಮಾನಗೊಂಡು ಪ್ರಶ್ನಿಸಿದ್ದಾರೆ. ಇದಕ್ಕೆ ಮತ್ತಷ್ಟು ಹಣ ಹಾಕುವಂತೆ ಸಂದೇಶ ಬಂದಿದೆ.  ಇದರಿಂದ ಆತಂಕಗೊಂಡ ಮಹಿಳೆ ತಮ್ಮ ಕುಟುಂಬಸ್ಥರ ಜೊತೆ ಚರ್ಚಿಸಿ ಪೊಲೀಸರಿಗೆ ದೂರು ನೀಡಿದ್ಧಾರೆ. ಸದ್ಯ ಈ ಸಂಬಂಧ IPC 1860 (U/s-420) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. 


ಹುತಾತ್ಮ ವೀರ ಶಿವಮೂರ್ತಿ ಸರ್ಕಲ್​ ನಲ್ಲಿ ನಡೆದಿದ್ದಾರು ಏನು? ಕಾಣೆಯಾದ ಬೋರ್ಡ್​ ಬದಲಿಗೆ ಬಂತು ಮತ್ತೊಂದು ನಾಮಫಲಕ!

ಶಿವಮೊಗ್ಗ/ ನಗರದಲ್ಲಿ ಸ್ಮಾರ್ಟ್​ ಸಿಟಿ ಕಾಮಗಾರಿಯ ನಡುವೆ ಪ್ರಮುಖ ಸರ್ಕಲ್​ಗಳಲ್ಲಿ ಹಲವು ಯಡವಟ್ಟುಗಳು ನಡೆದಿದ್ದರ ಬಗ್ಗೆ  ಮಲೆನಾಡು ಟುಡೆ ವರದಿ ಮಾಡಿತ್ತು. ಹೊಸದನ್ನೇನೋ ಮಾಡುವ ಸಲುವಾಗಿ, ಹಿಂದಿನಿಂದಲೂ ಇದ್ದ ಬೋರ್ಡ್​ಗಳನ್ನು ತೆಗೆದುಹಾಕುವ ಕೆಲಸವಾಗುತ್ತಿತ್ತು. ಇದಕ್ಕೆ ಪೂರಕವಾಗಿ ಕಳೆದ ಒಂಬತ್ತನೇ ತಾರೀಖು ಹುತಾತ್ಮ ವೀರ ಶಿವಮೂರ್ತಿ ಹೆಸರಿನ ಬೋರ್ಡ್​ ಶಿವಮೂರ್ತಿ ಸರ್ಕಲ್​ನಿಂದ ಕಾಣೆಯಾಗಿರುವ ಬಗ್ಗೆ ಟುಡೆ ತಂಡ ವರದಿ ಮಾಡಿತ್ತು. ಅಲ್ಲದೆ ಈ ಸಂಬಂಧ ಮೇಯರ್ ಹಾಗೂ ಶಾಸಕರನ್ನು ಮಾತನಾಡಿಸಿತ್ತು. ಮೇಯರ್ ನನಗೆ ಈ ಬಗ್ಗೆ ಮಾಹಿತಿಯಿಲ್ಲ ಎಂದಿದ್ದರು. ಶಾಸಕರು ಸರ್ಕಲ್​ನಲ್ಲಿ ಶಿಲೆಯಿಂದ ಕೆತ್ತಿದ ನಾಮಫಲಕ ಬರುತ್ತದೆ ಎಂದಿದ್ದರು

ಇತ್ತ ಸ್ಮಾರ್ಟ್ ಸಿಟಿ ಕಾಮಗಾರಿ ಬೇರೆ ಬೇರೆ ಕಾರಣಕ್ಕೆ ವಿಳಂಬವಾಗುತ್ತಿದೆ ಎಂಬ ಆರೋಪದ ನಡುವೆ ಸರ್ಕಲ್​ನಲ್ಲಿದ್ದ ಶಿವಮೂರ್ತಿಯವರ ನಾಮಫಲಕ ನಾಪತ್ತೆಯಾಗಿ ಎರಡು ತಿಂಗಳೇ ಕಳೇದಿದೆ ಎನ್ನುವ ಆರೋಪವನ್ನು ಸ್ಥಳೀಯರು ಮಾಡಿದ್ದರು. ಅಲ್ಲದೆ ಬೋರ್ಡ್​ನ್ನ ಮತ್ತೆ ಹಾಕುತ್ತಾರಾ ಇಲ್ಲವೋ ಎಂದು ಅನುಮಾನಿಸಿದ್ದರು. ಇದೀಗ ಶಿವಮೂರ್ತಿ ಸರ್ಕಲ್​ನಲ್ಲಿ ವೀರ ಶಿವಮೂರ್ತಿಯವರ ನಾಮಫಲಕವನ್ನು ಮತ್ತೆ ಸ್ಥಾಪಿಸಲಾಗಿದೆ. ಶಿಲೆಯಲ್ಲಿ ಕೆತ್ತಿದ ನಾಮಫಲಕ ಇದಲ್ಲವಾದರೂ, ಹಳೆಯ ಸ್ಥಳದಲ್ಲಿಯೇ ಮತ್ತೆ ನಾಮಫಲಕವನ್ನು ನಿಲ್ಲಿಸಿರುವುದು ಸ್ಥಳೀಯರಿಗೆ ಸಮಾಧಾನ ತಂದಿದೆ. 

ಶಿವಮೂರ್ತಿಯವರ ನಾಮಫಲಕದ ಹಿನ್ನೆಲೆ ಏನು? ವಿಶೇಷತೆ ಏನು ಎಂಬುದರ ಬಗೆಗಿನ ಸುದ್ದಿ ಇಲ್ಲಿದೆ ಓದಿ : ಕಾಣೆಯಾದ ಹುತಾತ್ಮ ವೀರ ಶಿವಮೂರ್ತಿಯವರ ನಾಮಫಲಕ? 2 ತಿಂಗಳಿಂದ ಸರ್ಕಲ್​​ನಲ್ಲಿಲ್ಲ 7 ದಶಕದ ಬೋರ್ಡ್​? ಶಾಸಕರು-ಮೇಯರ್​ ಹೇಳಿದ್ದೇನು?