ಸಿಎಂ ಹೊಸ ಪರಂಪರೆ ಬಗ್ಗೆ ಆಯನೂರು ಮಂಜುನಾಥ್ ಮಾತು!/ ಶಿವಮೊಗ್ಗದಲ್ಲಿ ಮಿಸ್ಸಿಂಗ್ ಆದ ಮಹಿಳೆ ಸಿಂದನೂರಲ್ಲಿ ಪತ್ತೆ/ ಕರೋಕೆ ಹಾಡುಗಾರರಿಗೆ ಇಲ್ಲಿದೆ ಅವಕಾಶ/ ಸಿಎಸ್​ ಷಡಾಕ್ಷರಿ ವಿಚಾರದಲ್ಲಿ ಸರ್ಕಾರದ ಆದೇಶ? TODAY@NEWS

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Jul 12, 2023 SHIVAMOGGA NEWS    ಸಿದ್ದರಾಮಯ್ಯರಿಂದ ಹೊಸ ಪರಂಪರೆ ಆರಂಭ

ಶಿವಮೊಗ್ಗ:  ಹೊಸ ಗ್ಯಾರಂಟಿಗಳ ನಡುವೆ ಹಳೆಯ ಮತ್ತು ಅಗತ್ಯ ಗ್ಯಾರಂಟಿಗಳನ್ನು ಮರೆಯಬಾರದು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಆಯನೂರು ಮಂಜುನಾಥ್  ಎಂದಿದ್ದಾರೆ. ನಿನ್ನೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ಕರೆದು ಮಾತನಾಡಿದ ಅವರು,  ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವಾಗ ಒಂದು ಹೊಸ ಪರಂಪರೆಯನ್ನೇ ಸೃಷ್ಟಿಸಿದ್ದಾರೆ. ಅದೇನೆಂದರೆ ಹಳೆಯ ಸರ್ಕಾರವನ್ನು ಟೀಕಿಸುವುದೂ ಆಗಿದೆ. ಈ ಟೀಕೆಗೆ ಬಿಜೆಪಿ ಉತ್ತರ ಕೊಡಬೇಕಾದ ಅವಶ್ಯತೆ ಇದೆ. ಆದರೆ ಅವರಿನ್ನೂ ನಾಯಕನನ್ನೇ ಆಯ್ಕೆ ಮಾಡಿಲ್ಲ. ನಮ್ಮ ಪಕ್ಷದ ನಾಯಕ ಕುಮಾರಸ್ವಾಮಿಯವರು ನಿಭಾಯಿಸುತ್ತಿದ್ದಾರೆ. ಬಿಜೆಪಿಯವರು ಕೊನೇಪಕ್ಷ ನಾಯಕನನ್ನು ಆಯ್ಕೆ ಮಾಡುವ ತನಕವಾದರೂ ಕುಮಾರಸ್ವಾಮಿಯವರೇ ನಮ್ಮ ಪಕ್ಷದ ಪರವಾಗಿ ನಾಯಕರಾಗಲಿ ಎನ್ನಬೇಕು ಎಂದು ವ್ಯಂಗ್ಯವಾಡಿದರು.

Malenadu Today Shivamogga

ರಾಜ್ಯಕ್ಕೆ ಹೊಸ ಶಿಕ್ಷಣ ನೀತಿ ಜಾರಿ

ವಿದ್ಯಾರ್ಥಿ ದೃಷ್ಟಿಯಿಂದ ಹೊಸ ಶಿಕ್ಷಣ ನೀತಿಯನ್ನು ತರುತ್ತೇವೆ ಎಂದು . ಮಧು ಬಂಗಾರಪ್ಪ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಶಿಕ್ಷಣ ಸಚಿವ ನೀಡಿದಂತೆ ಬದಲಾವಣೆಯನ್ನು ತರುತ್ತೇವೆ. ಏನೇ ಬದಲಾವಣೆ ತಂದರೂ ವಿದ್ಯಾರ್ಥಿಗಳ ಹಿತಾಸಕ್ತಿ ಮುಖ್ಯವೇ ಹೊರತು ಬೇರೇನೂ ಅಲ್ಲ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸ್ವೀಕರಿಸುವುದಿಲ್ಲ. ನಾವು ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಭರವಸೆ  ನೀಡಿದಂತೆ  ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಯಲ್ಲೂ ಸಮಿತಿ ರಚನೆ ಮಾಡಿ ಸಮಿತಿಗಳ ಆಧರಿಸಿ ಬದಲಾವಣೆ ತರಲಾಗುವುದು ಎಂದಿದ್ದಾರೆ. 

ಮಿಸ್ಸಿಂಗ್​ ಆದ ಮಹಿಳೆ ಪತ್ತೆ

ಪ್ರತಿಷ್ಠಿತ ಮಾನಸಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ರಾಯಚೂರು ಜಿಲ್ಲೆಯ ಸಿಂದನೂರು ತಾಲೂಕಿನ ಕರುಕುಂದ ಗ್ರಾಮದಿಂದ ಬಂದಿದ್ದ ಮಹಿಳೆ ನಾಪತ್ತೆಯಾದ ಬಗ್ಗೆ ಪೊಲೀಸ್​ ಸ್ಟೇಷನ್​ನಲ್ಲಿ ಎಫ್​ಐಆರ್ ಆಗಿತ್ತು. ಇದೀಗ ಈ  ಮಹಿಳೆ ಪತ್ತೆಯಾಗಿದ್ದಾರೆ ಎಂಬ ಸುದ್ದಿ ಲಭ್ಯವಾಗಿದೆ. ಶಿವಮೊಗ್ಗದಿಂದ ಕಾಣೆಯಾಗಿದ್ದ ಶರಣಮ್ಮ ಎಂಬವರು ಹೇಗೋ ಊರಿನ ಬಸ್ ಹಿಡಿದು ಸಿಂದನೂರು ತಲುಪಿದ್ದಾರೆ. ಅಲ್ಲಿಂದ ಊರು ತಲುಪಿದ್ಧಾರೆ. ಶಿವಮೊಗ್ಗದ ಬೀದಿಬೀದಿ ಹುಡುಕಿ ಕಂಗಾಲಾಗಿದ್ದ ಕುಟುಂಬಕ್ಕೆ ಮಾನಸಿಕ ಅಸ್ವಸ್ಥೆಯ ನಡುವೆ ಶರಣಮ್ಮ ಊರು ತಲುಪಿದ್ದು ಅಚ್ಚರಿ ಮೂಡಿಸಿದೆ. 

Malenadu Today Shivamogga

 

ಸಿಎಸ್ ಷಡಾಕ್ಷರಿ ವರ್ಗಾವಣೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿಯವರ ವಿಚಾರದಲ್ಲಿ ಸರ್ಕಾರ ಆದೇಶವೊಂದನ್ನ ಹೊರಡಿಸಿದೆ. ಈ ಮೊದಲು ಷಡಾಕ್ಷರಿಯವರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಕಚೇರಿಯಲ್ಲಿ ಒಒಡಿ ಮೇಲೆ ಕೆಲಸ ನಿರ್ವಹಿಸುತ್ತಿದ್ದರು. ಸಂಘಟನೆಯ ಜೊತೆಗೆ ಸರ್ಕಾರಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಇದೀಗ ಅವರ ಮನವಿ ಹಾಗೂ ಪಿಡಬ್ಲ್ಯು ಇಲಾಖೆಯ ಪತ್ರದ ಉಲ್ಲೇಖದಡಿಯಲ್ಲಿ ಷಡಾಕ್ಷರಿಯವರನ್ನ ಮೂಲ ಸ್ಥಾನ, ಲೆಕ್ಕಪರಿಶೋಧನಾ ವರ್ತುಲ, ಕರ್ನಾಟಕ ರಾಜ್ಯಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಶಿವಮೊಗ್ಗ ಕಚೇರಿಗೆ ತೆರಳಲು ಆದೇಶಿಸಿದೆ. 

ಪ್ರೆಸ್​ ಟ್ರಸ್ಟ್​ ನಲ್ಲಿ ಕರೋಕೆ ಗಾಯನ 

ಸಾಂಸ್ಕೖತಿಕ ಕ್ಷೇತ್ರದಲ್ಲಿ ಇದೂವರೆಗೆ ಹಲವು ಮಹತ್ವದ ಕಾರ್ಯಕ್ರಮಗಳನ್ನು ರೂಪಿಸಿರುವ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಈ ಬಾರಿ ವಿನೂತನ ಕಾರ್ಯಕ್ರಮವನ್ನು ರೂಪಿಸಿದೆ. ಶಿವಮೊಗ್ಗದ ಉದಯೋನ್ಮುಖ ಗಾಯಕರ ಕರೋಕೆ ಗಾಯನ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಲು ಮುಂದಾಗಿದೆ. ಮೊದಲ ಕಾರ್ಯಕ್ರಮವಾಗಿ ಇದೇ ಜುಲೈ 12ರಂದು ಅಂದರೆ ಇವತ್ತು ಕನ್ನಡದ ಖ್ಯಾತ ನಟ ಶಿವರಾಜಕುಮಾರ್ ಅವರ ಜನ್ಮದಿನ ಪ್ರಯುಕ್ತ ಅಂದು ಅವರ ಸಿನಿಮಾಗಳ ಗೀತೆಗಳ ಗಾಯನ ಕಾರ್ಯಕ್ರಮವಿದೆ. ಸಂಜೆ 7 ಗಂಟೆಗೆ ಈ ಕಾರ್ಯಕ್ರಮವು ಶಿವಮೊಗ್ಗದ ಆರ್.ಟಿ.ಓ. ಕಚೇರಿ ರಸ್ತೆಯಲ್ಲಿರುವ ಪ್ರೆಸ್ ಟ್ರಸ್ಟ್ ಪತ್ರಿಕಾ ಭವನದಲ್ಲಿ ನಡೆಯುವುದು.

ಈ ಕಾರ್ಯಕ್ರಮದಲ್ಲಿ ಹಾಡಲಿಚ್ಛಿಸುವ ಗಾಯಕರು ಶಿವರಾಜಕುಮಾರ್ ಅವರ ಸಿನಿಮಾದ ಗೀತೆಗಳನ್ನೇ ಹಾಡಬೇಕು. ವಯೋಮಿತಿ, ಲಿಂಗಬೇಧವಿಲ್ಲ. ಮೊದಲು ಬಂದವರಿಗೆ ಆದ್ಯತೆ. ಆಸಕ್ತರು ಕೂಡಲೇ ಸಂಪರ್ಕಿಸಿ-  9448612644


 

 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor