ನಡೆದುಕೊಂಡು ಹೋಗ್ತಿದ್ದವರ ಎದೆಗೆ ತಿವಿದ ಕಾಡುಕೋಣ!

Malenadu Today

KARNATAKA NEWS/ ONLINE / Malenadu today/ Aug 27, 2023 SHIVAMOGGA NEWS 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣವೊಂದು ವ್ಯಕ್ತಿಯೊಬ್ಬರಿಗೆ ತಿವಿದು ಗಾಯಗೊಳಿಸಿರುವ ಬಗ್ಗೆ ವರದಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಮಜೇಖಾನ್ ಬಳಿ ಈ ಘಟನೆ ಸಂಭವಿಸಿದೆ. 

ಘಟನೆಯಲ್ಲಿ 60 ವರ್ಷದ ಮರೀಗೌಡ ಎಂಬವರು ಗಾಯಗೊಂಡಿದ್ಧಾರೆ.  ಮುಜೇಖಾನ್ ನಿಂದ ಕಳಸ ಕಡೆಗೆ ಬರುವಾಗ ಕಾಡುಕೋಣ ದಾಳಿ  ಮಾಡಿದೆ.

ಕಾಡುಕೋಣದ ಕೋಡು ಎದೆಭಾಗದೊಳಗೆ ಹೊಕ್ಕಿದ್ದರಿಂದ ಮರೀಗೌಡರು ಗಂಭೀರವಾಗಿ ಗಾಯಗೊಂಡಿದ್ಧಾರೆ. ಸದ್ಯ ಅವರನ್ನ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.   


ಇನ್ನಷ್ಟು ಸುದ್ದಿಗಳು 


 

 

Share This Article