ಹೊಸನಗರ: ಮನೆಯಂಗಳಕ್ಕೆ ನುಗ್ಗಿ ನಾಯಿಯ ಮೇಲೆ ಚಿರತೆ ದಾಳಿ; ಸಿಸಿಟಿವಿಯಲ್ಲಿ ದೃಷ್ಯ ಸೆರೆ   

ಶಿವಮೊಗ್ಗ:  ಜಿಲ್ಲೆಯ ಹೊಸನಗರ ತಾಲೂಕಿನ ಹಾರೋಹಿತ್ತಲು ಸಮೀಪದ ಕಂಬತ್ಮನೆ  ಗ್ರಾಮದ ನಿವಾಸಿ ವಾಸುದೇವ ಎಂಬುವವರ ಮನೆಯ ಅಂಗಳದಲ್ಲಿ ಕಟ್ಟಿಹಾಕಿದ್ದ ನಾಯಿಯ ಮೇಲೆ ರಾತ್ರಿ ವೇಳೆ ಚಿರತೆ ಏಕಾಏಕಿ ದಾಳಿ ನಡೆಸಿದೆ ನಡೆಸಿದೆ. 

ಶಿವಮೊಗ್ಗ, ಭೀಕರ ಅಪಘಾತ,  ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು

ಘಟನೆಯ ಸಮಯದ  ರಾತ್ರಿಯಾಗಿದ್ದ ಕಾರಣ ಆ ವೇಳೆ  ವಿಷಯ ಮನೆಯವರ ಗಮನಕ್ಕೆ ಬಂದಿರಲಿಲ್ಲಿ. ಆದರೆ, ಮುಂಜಾನೆ ನಾಯಿಯ ಮೈಮೇಲೆ ಗಂಭೀರ ಗಾಯಗಳಾಗಿರುವುದನ್ನು ಕಂಡು ಅನುಮಾನಗೊಂಡ ಮಾಲೀಕರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ವಿಷಯ ತಿಳಿದಿದೆ.

ಈ ಘಟನೆಯಿಂದಾಗಿ ಹಾರೋಹಿತ್ತಲು, ಕೊಳವಂಕ ಹಾಗೂ ಕಂಬತ್ಮನೆ ಸುತ್ತಮುತ್ತಲಿನ ಹಳ್ಳಿಗಳ ಜನರಲ್ಲಿ ತೀವ್ರ ಆತಂಕ ಮನೆಮಾಡಿದೆ.  ಈ ಹಿನ್ನೆಲೆ ಯಾವುದೇ ಜೀವಹಾನಿ ಸಂಭವಿಸುವ ಮುನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳಬೇಕು ಹಾಗೂ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬೋನಿನಲ್ಲಿ ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leopard Attacks Dog
Leopard Attacks Dog

Leopard Attacks Dog in hosanagara Kambatmane