ಶಿವಮೊಗ್ಗ : ನಗರದ ವಿದ್ಯಾನಗರ ಮೇಲ್ಸೇತುವೆಯ (Flyover) ಮೇಲೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನಗಿರಿ ತಾಲ್ಲೂಕು ಮೂಲದ ರಾಘವೇಂದ್ರ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.
ಶಿವಮೊಗ್ಗ : ಮನೆಯಂಗಳದಲ್ಲಿ ನಿಲ್ಲಿಸಿದ್ದ 18 ಲಕ್ಷದ ಎಕ್ಸ್‌ಯುವಿ 700 ನಾಪತ್ತೆ!
ಲಾರಿ ಮತ್ತು ಬೈಕ್ ಎರಡೂ ಮೇಲ್ಸೇತುವೆಯ ಇಳಿಜಾರಿನಲ್ಲಿ ಒಟ್ಟಿಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ವಿದ್ಯಾನಗರದ ಕಡೆಗೆ ಲಾರಿ ತಿರುವು ಪಡೆಯುತ್ತಿದ್ದ ಸಂದರ್ಭದಲ್ಲಿ, ಬೈಕ್ ಸವಾರ ಅನಿರೀಕ್ಷಿತವಾಗಿ ಲಾರಿಯ ಹಿಂಬದಿ ಚಕ್ರಗಳ ಅಡಿಗೆ ಸಿಲುಕಿದ್ದಾರೆ. ಲಾರಿಯ ಚಕ್ರಗಳು ಸವಾರನ ಮೇಲೆ ಹರಿದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ವಿಷಯ ತಿಳಿಯುತ್ತಿದ್ದಂತೆಯೇ ಶಿವಮೊಗ್ಗದ ಪೂರ್ವ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
Shivamogga Bike Rider Dies in Vidyanagar Flyover Accident

Shivamogga Bike Rider Dies in Vidyanagar Flyover Accident