ಗೃಹಸಚಿವರ ತವರಿನಲ್ಲಿ, ತೀರ್ಥಹಳ್ಳಿ ಇನ್​ಸ್ಪೆಕ್ಟರ್​ ಸಸ್ಪೆಂಡ್​ಗಾಗಿ ಪ್ರತಿಭಟನೆಗೆ ಮುಂದಾದ ಕಿಮ್ಮನೆ ರತ್ನಾಕರ್/ ಕಾರಣವೇನು ಗೊತ್ತಾ?

ತೀರ್ಥಹಳ್ಳಿ ಪೊಲೀಸ್ ಇಲಾಖೆಯಿಂದ ನಡೆಯುತಿರುವ ದೌರ್ಜನ್ಯ ಖಂಡಿಸಿ ಹಾಗೂ ತೀರ್ಥಹಳ್ಳಿ ಇನ್ಸ್ಪೆಕ್ಟರ್ ಅಶ್ವಥ್ ಗೌಡ ಅಮಾನತು ಮಾಡುವಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಪ್ರತಿಭಟನೆಗೆ ಮುಂದಾಗಿದ್ದಾರೆ.  ಈ ಸಂಬಂಧ ಹೊಸನಗರದಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು,  ಡಿವೈಎಸ್ ಪಿ ಕಛೇರಿ ಎದುರು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. 

ಇದನ್ನು ಸಹ ಓದಿ : ತೀರ್ಥಹಳ್ಳಿ ಬಿಳಲುಕೊಪ್ಪದಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಕೆಎಸ್​ಆರ್​ಟಿಸಿ ಬಸ್​

ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತೀರ್ಥಹಳ್ಳಿ ತಾಲ್ಲೂಕಿನ ತೀರ್ಥಹಳ್ಳಿ ಮಾಳೂರು, ಕೋಣಂದೂರು, ಹೊಸನಗರ ತಾಲ್ಲೂಕಿನ ಹೊಸನಗರ, ನಗರ, ರಿಪ್ಪನಪೇಟೆ, ಶಿವಮೊಗ್ಗ ತಾಲ್ಲೂಕಿನ ತುಂಗಾನಗರ ಪೋಲೀಸ್ ಸ್ಟೇಷನ್‌ಗಳು ಬಿಜೆಪಿ ಕಛೇರಿಗಳಾಗಿ ಬದಲಾಗಿದ್ದು, ಬಿಜೆಪಿಯೇತರ ಜನಸಾಮಾನ್ಯರ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದು, ಹೆದರಿಕೆ ಹುಟ್ಟಿಸುವ ಪ್ರಯತ್ನಿಸುತ್ತಿರುವ ಹತ್ತಾರು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ದೂರಿದ್ದಾರೆ. 

ಇದನ್ನು ಸಹ ಓದಿ : ದೂಮ್​ ಸ್ಟೈಲ್​ನಲ್ಲಿ ಬೈಕ್​ ಓಡಿಸುವವ ಸವಾರರಿಗೆ ಶಿವಮೊಗ್ಗ ಪೊಲೀಸರು ಕೊಟ್ಟ ವಾರ್ನಿಂಗ್ ಏನು ಗೊತ್ತಾ?

ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ನೊಣಬೂರು, ನೆಗಿಲೋಣಿ ಶೂಟ್ ಔಟ್ ಪ್ರಕರಣಗಳು, ನೊಣಬೂರು: ಪಂಚಾಯತ್‌ನ ಮೂಡ್ಲಿ ಹಲ್ಲೆ ಪ್ರಕರಣ, ಗುಡ್ಡಕೊಪ್ಪ ಗ್ರಾಮ ಪಂಚಾಯತ್‌ನ ಆಗಸಾಡಿ ಕೊಲೆ ಪಕರಣ, ಹೊಸನಗರದ ತ್ರಿಣಿವೆ ಇಟ್ಟಕ್ಕಿ ಯಲ್ಲಿ ನಡೆದ ದೌರ್ಜನ್ಯ ಪ್ರಕರಣ, ಮೇಲಿನಕುರುವಳ್ಳಿಯಲ್ಲಿ ನಡೆದ ಹಲ್ಲೆ ಪ್ರಕರಣ, ಇಂತಹ ಹಲವು ಪ್ರಕರಣಗಳಲ್ಲಿ ಅಪರಾಧಿಗಳಾಗಿರುವ ಬಿಜೆಪಿಯ ಮುಖಂಡರನ್ನು ಕೈ ಬಿಟ್ಟಿರುವುದು, ಕೆಲ ಪ್ರಕರಣಗಳಲ್ಲಿ ನಿರಪರಾಧಿ ಕಾಂಗ್ರೆಸ್‌ ಕಾರ್ಯಕರ್ತರ ಹೆಸರನ್ನು ಸೇರಿಸಿರುವುದು ಪೋಲಿಸ್ ಇಲಾಖೆ ಕೆಲವರ ಹಿತಾಸಕ್ತಿಗೆ ಅಡಿಯಾಳಾಗಿ ವರ್ತಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. 

ಇದನ್ನು ಸಹ ಓದಿ :ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ಪೋಲಿಸ್ ಇಲಾಖೆಯನ್ನು ಗೃಹಮಂತ್ರಿಗಳ ಮೂಗಿನ ನೇರಕ್ಕೆ, ಅವರ ಹಿಂಬಾಲಕರ ಅಣತಿಯಂತೆ ನಡೆಸಲಾಗ್ತಿದೆ. ಅಲ್ಲದೆ  ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜನಸಾಮಾನ್ಯರನ್ನು ಹಿಂಸಿಸುತ್ತಿದ್ದಾರೆ. ಇದನ್ನ ಖಂಡಿಸಿ  ಕಾಂಗ್ರೆಸ್​ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿದೆ.

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ಇದೇ 27 ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ನಡೆದ ಸುದ್ದಿಗೋಷ್ಟಿಯಲ್ಲಿ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿಜಿ ನಾಗರಾಜ್ , ಬಿಜಿ ಚಂದ್ರಮೌಳಿ ಗೌಡ ಮಾಜಿ ತಾ.ಪಂ  ಸದಸ್ಯರು ಹೊಸನಗರ, ಏರಗಿ ಉಮೇಶ್ ಮಾಜಿ ತಾ.ಪಂ  ಸದಸ್ಯರು ಹೊಸನಗರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಟಿ, ಹಿರಿಯ ಮುಖಂಡರಾದ ಬಿ.ಆರ್ ಪ್ರಭಾಕರ್,ಗುರುರಾಜ್  ಕೆ.ಎಸ್. ಅದ್ಯಕ್ಷರು ಟೌನ್ ಘಟಕ ಹೊಸನಗರ  ನಾಗರಾಜ್ ಗೌಡ ಮುಂಬರು ಘಟಕ ಅದ್ಯಕ್ಷರು, ಅಶ್ವಿನಿ ಕುಮಾರ್ ಪ.ಪಂ. ಸದಸ್ಯರು ಹೊಸನಗರ, ನಾಗೇಶ್ ವಾಲೆಮನೆ,ವೇದಾಂತಾಪ್ಪ ಗೌಡ   ಧರ್ಮ ರಾಜ್ ಜಯನಗರ,ಜಯನಗರ ಗುರು, ಇನ್ನಿತರ ಮುಖಂಡರು ಉಪಸ್ಥಿತರಿದ್ದರು

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Leave a Comment